Cinisuddi Fresh Cini News 

‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ

ಕನ್ನಡ ಚಿತ್ರರಂಗದಲ್ಲಿ ಹಿಂದಿನ ಸುಮಧುರ ಹಾಡುಗಳ ಮೊದಲ ಸಾಲು ಸಾಕಷ್ಟು ಚಿತ್ರದ ಶೀರ್ಷಿಕೆಗಳಾಗಿವೆ. ಈಗ ಅ ಸಾಲಿಗೆ ಮತ್ತೊಂದು ಸೇರ್ಪಡೆಎಲ್ಲಿಗೆ ಪಯಣ ಯಾವುದೋ ದಾರಿ`.

ಪ್ರಸ್ತುತ ಈ ಚಿತ್ರಕ್ಕೆ ಮಡಿಕೇರಿ ಹಾಗೂ ವಿರಾಜಪೇಟೆ ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ನಲವತ್ತಕ್ಕು ಹೆಚ್ಚು ದಿನಗಳ ಚಿತ್ರೀಕರಣ ನಡೆದಿದೆ. ಈ ತಿಂಗಳ ಕೊನೆಗೆ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರೀಕರಣ ನಡೆಯುವ ವೇಳೆ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ನಾಯಕಿ ಸ್ಪೂರ್ತಿ ಉಡಿಮನೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸುದರ್ಶನ್ ಆರ್ಟ್ಸ್ ಲಾಂಛನದಲ್ಲಿ ನಂದೀಶ್ ಎಂ.ಸಿ.ಗೌಡ ಹಾಗೂ ಜತಿನ್ ಜಿ ಪಟೇಲ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಕಿರಣ್ ಸೂರ್ಯ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ನಾಯಕನಾಗಿ ಅಭಿಮನ್ಯು ಕಾಶಿನಾಥ್ ಅಭಿನಯಿಸುತ್ತಿದ್ದಾರೆ.

ಸ್ಪೂರ್ತಿ ಉಡಿಮನೆ ಈ ಚಿತ್ರದ ನಾಯಕಿ. ಬಾಲ ರಾಜವಾಡಿ, ವಿಜಯಶ್ರೀ, ಗಣೇಶ್ ನಾರಾಯಣ್, ರವಿಕುಮಾರ್, ಶೊಭನ್, ಕಿಶೋರ್, ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಗಣೇಶ್ ನಾರಾಯಣ್ ಸಂಗೀತ ನೀಡುತ್ತಿದ್ದಾರೆ. ಗೌತಮ್ ಮನು ಛಾಯಾಗ್ರಹಣ ಹಾಗೂ ರವಿಚಂದ್ರನ್, ಗಣೇಶ್ ಅವರ ಸಂಕಲನ ಈ ಚಿತ್ರಕ್ಕಿದೆ.

Related posts