Cini NewsSandalwood

ಇದೇ 20ರಂದು ಬಿಡುಗಡೆಯಾಗುತ್ತಿರುವ “ಧ್ರುವತಾರೆ” ಚಿತ್ರಕ್ಕೆ ಸ್ಟಾರ್ಸ್ ಗಳ ಸಾಥ್

Spread the love

ಯುವ ಪ್ರತಿಭೆಗಳ ಸಾರಥ್ಯದ “ಧ್ರುವತಾರೆ” ಚಿತ್ರತಂಡ ಒಂದು ವಿಭಿನ್ನ ಕಂಟೆಂಟ್ ಮೂಲಕ ಸದ್ದು ಮಾಡಲು ಸಜ್ಜಾಗಿದೆ. ಇದೇ ತಿಂಗಳು 20ನೇ ತಾರೀಕು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಧ್ರುವತಾರೆ ಚಿತ್ರದ ಟ್ರೈಲರ್ ನೋಡಿ ಕ್ರೇಜಿಸ್ಟಾರ್ ರವಿಚಂದ್ರನ್, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್ ಮುಂತಾದ ನಟರು ಬೆನ್ನು ತಟ್ಟಿದ್ದಾರಂತೆ.

ಹೊಸಬರ ಚಿತ್ರಕ್ಕೆ ಈ ರೀತಿ ಪ್ರೋತ್ಸಾಹ ಸಿಕ್ಕಿರುವುದು ನಮಗೆ ಇನ್ನೂ ಭರವಸೆ ಮೂಡಿಸಿದೆ. ಹಾಗಯೇ ಮತ್ತಷ್ಟು ಮೇರು ನಟರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ನಟ ನಿರ್ದೇಶಕರಾದ ಪ್ರತೀಕ್ ತಿಳಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ A2 ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಯಾಗಿದ್ದು , ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿದೆ . ಚಿತ್ರದ ಟ್ರೈಲರ್ ಹೇಳುವ ಹಾಗೆ ಇದು ಒಂದು ವಾಸ್ತವದ ಪ್ರೇಮಕಥೆ ಯಾಗಿದೆ. ಜಿ.ಪಿ. ಫಿಲಂ ಸ್ಟುಡಿಯೋಸ್ ಬ್ಯಾನರ್ ನಡಿ ಗಣೇಶ್ ಕುಮಾರ್ ಸಿನಿಮಾದ ನಿರ್ಮಾಣ ಮಾಡಿದ್ದು , ಪ್ರತೀಕ್ ನಿರ್ದೇಶನದ ಜವಾಬ್ದಾರಿಯೊಂದಿಗೆ ನಟನೆಯನ್ನು ಕೂಡ ಮಾಡಿದ್ದಾರೆ.

ಈ ಚಿತ್ರದಲ್ಲಿ ಪ್ರತಿಕ್ ಮತ್ತು ಮೌಲ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ರಮೇಶ್ ಭಟ್, ಮೂಗೂರು ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿಡಿ ಸತೀಶ್ ಸೇರಿದಂತೆ ಹಲವರು ಇದ್ದಾರೆ .

ಬಹು ಮುಖ್ಯವಾಗಿ ನೆಗೆಟಿವ್ ಷೆಡ್ ನಲ್ಲಿ ಬಿಗ್ ಬಾಸ್ ಕ್ಯಾತಿಯ ಕಾರ್ತಿಕ್ ಮಹೇಶ್ ಕಾಣಿಸಿಕೊಂಡಿದ್ದು ಒಂದು ಅದ್ಭುತ ಫ್ಯಾಮಿಲಿ ಡ್ರಾಮಾ ಹೇಳಲು ಚಿತ್ರತಂಡ ಹೊರಟಿದಿಯಂತೆ. ಈಗಾಗಲೇ ಟ್ರೈಲರ್ ಮೂಲಕ ಬಾರಿ ಕುತೂಹಲ ಮೂಡಿಸಿರುವ ಈ ಚಿತ್ರ , ವೀಕ್ಷಕರನ್ನ ಯಾವ ರೀತಿ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Visited 1 times, 1 visit(s) today
error: Content is protected !!