Cini NewsSandalwoodTV Serial

ನಟ ವಿಕ್ರಂ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್.

ಅಮೃತ ಸಿನಿ ಕ್ರಾಫ್ಟ್ ನಿರ್ಮಾಪಕ ವಿಜಯ್ ಟಾಟಾ ವಿಕ್ರಂ ರವಿಚಂದ್ರನ್ ನಟನೆಯ “ಮುಧೋಳ್” ಚಿತ್ರದ ಜೊತೆ ಕೊಲಾಬರೇಷನ್.

ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಎರಡನೇ ಸುಪುತ್ರ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟು ಹಬ್ಬದಂದು ವಿಶೇಷವಾದ ಮಾಹಿತಿಯನ್ನ ನೀಡಲು ಮುಂದಾಗಿದ್ರು, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರೋದ್ಯಮದಲ್ಲಿ ದೊಡ್ಡ ಮಟ್ಟದ ಸಂಚಲನ ಮಾಡಲು ಚಿತ್ರ ನಿರ್ಮಾಣದ ಜೊತೆಗೆ ಚಿತ್ರ ನಿರ್ಮಾಪಕರಿಗೆ ಬೆನ್ನೆಲುಬಾಗಿ ನಿಲ್ಲುವ ಸಲುವಾಗಿ ಬಂದಿರುವಂತಹ ಖ್ಯಾತ ಉದ್ಯಮಿ ವಿಜಯ್ ಟಾಟಾ ತಮ್ಮ ಅಮೃತ ಸಿನಿ ಕ್ರಾಫ್ಟ್ ಮೂಲಕ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.
ಚಿತ್ರ ನಿರ್ಮಿಸುವುದರ ಜೊತೆಗೆ ವಿತರಣೆ , ಮಾರ್ಕೆಟಿಂಗ್ , ಸೇರಿದಂತೆ ಬೇರೆ ಚಿತ್ರಗಳ ಜೊತೆ ಕಲಾಬೋರೇಷನ್ ಗೂ ಮುಂದಾಗಿರುವುದು ಮತ್ತೊಂದು ಸಂತೋಷದ ಸಂಗತಿ. ಇನ್ನು ವಿಶೇಷವಾಗಿ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಯುವ ನಟ ವಿಕ್ರಂ ರವಿಚಂದ್ರನ್ , ಮುಧೋಳ್ ಚಿತ್ರದ ನಿರ್ಮಾಪಕಿ ರಕ್ಷಾ ಹಾಗೂ ಖ್ಯಾತ ಉದ್ಯಮಿ ನಿರ್ಮಾಪಕ ವಿಜಯ್ ಟಾಟಾ ಹಾಜರಿದ್ದರು.

ಇನ್ನು ಪ್ರಮುಖವಾಗಿ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್ ಮಾತನಾಡುತ್ತಾ ಮೊದಲಿಗೆ ನೀವೆಲ್ಲರೂ ಇಲ್ಲಿವರೆಗೂ ಬಂದಿರುವುದಕ್ಕೆ ಧನ್ಯವಾದಗಳು , ಹಾಗೆ ಮೊದಲಿಗೆ ವಿಶೇಷವಾಗಿ ವಿಜಯ ಸರ್ ಗೆ ಥ್ಯಾಂಕ್ಸ್ ತಿಳಿಸುತ್ತೇನೆ. ಯಾಕೆಂದರೆ ಸಾಮಾನ್ಯವಾಗಿ ನನ್ನ ಹುಟ್ಟು ಹಬ್ಬವನ್ನು ನಾನು ಆಚರಿಸಿಕೊಳ್ಳುವುದಿಲ್ಲ , ಬೇರೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ಇವತ್ತು ನನ್ನ ಬರ್ತಡೇ ದಿನವೇ ಒಂದೆರಡು ದೊಡ್ಡ ಅನೌನ್ಸ್ಮೆಂಟ್ ಮಾಡಬೇಕು ಎಂದು ನಮ್ಮ ವಿಜಯ್ ಸರ್ ಹೇಳಿದ್ರಿಂದ ನಿಮ್ಮ ಮುಂದೆ ಹೇಳಬೇಕೆಂದು ನಿರ್ಧರಿಸಿದ್ದೇವೆ. ನಾನು ಏನೇ ಹೇಳಿದರೂ ರವಿಚಂದ್ರನ್ ಸರ್ ಮಗ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ನಾನು ಎರಡನೇ ಸಿನಿಮಾ ಮಾಡ್ದಾಗ , ನಮ್ಮ ಅಣ್ಣ ಅಭಿನಯದ ಮುಗಿಲು ಪೇಟೆ ನಿರ್ಮಾಣಕ್ಕೆ ಸಾಥ್ ಕೊಟ್ಟಂತ ನಿರ್ಮಾಪಕಿ ರಕ್ಷಾ ಮೇಡಮ್ಮ ನನಗೂ ಬೆಂಬಲವಾಗಿ ನಿಂತರು. ನನ್ನ ಡ್ರೀಮ್ ಪ್ರಾಜೆಕ್ಟ್ ಗೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ನನ್ನ ಹೊಸ ಪ್ರಾಜೆಕ್ಟ್ಗೆ ಟೀಮ್ ಹುಡುಕುತ್ತಿದ್ದಾಗ ಒಬ್ಬ ಟ್ಯಾಲೆಂಟೆಡ್ ವ್ಯಕ್ತಿ ಸಿಕ್ಕಿದ್ರು ಅವರೇ ನಿರ್ದೇಶಕ ಕಾರ್ತಿಕ್ ರಾಜು, ನಂತರ ನಾನು , ಡೈರೆಕ್ಟರ್ , ಪ್ರೊಡ್ಯೂಸರ್ ಕೂತು ಡಿಸ್ಕಶನ್ ಮಾಡಿದಾಗ ಹುಟ್ಟಿಕೊಂಡಂತ ಚಿತ್ರವೇ “ಮುಧೋಳ”. ಎಲ್ಲಾ ಅಂದುಕೊಂಡಂತೆ ಚೆನ್ನಾಗಿ ನಡೆದಿತ್ತು, ನಮ್ಮ ಅನಲೈಸ್ ಪ್ರಕಾರ ನಮ್ಮ ನಿರ್ಮಾಪಕಿ ಮೇಡಂ ಅಂದ್ರೆ ನನ್ನ ಸಿಸ್ಟರ್ ನೀವು ಮಾಡಿ ನಾನು ಬ್ಯಾಕಪ್ ಇರ್ತೀನಿ ಅಂದರು.

ಈ ಚಿತ್ರ ತುಂಬಾ ಜನರಿಗೆ ಲೈಫ್ ಆಗಬೇಕು , ನನ್ನು ಸೇರಿದಂತೆ ಚಿತ್ರದ ಡೈರೆಕ್ಟರ್ , ಮ್ಯೂಸಿಕ್ , ಎಡಿಟರ್ , ಬಹಳಷ್ಟು ಜನ ಹೊಸಬರು ಇದ್ದೇವೆ. ಈ ಚಿತ್ರ ರೈಟ್ ಟೈಮ್ , ಪ್ಲೇಸ್ ನಲ್ಲಿ ದೊಡ್ಡ ಕೊಲಾಬ್ರೇಶನ್ ಮೂಲಕ ಪ್ರೇಕ್ಷಕರ ಮುಂದೆ ಬರಬೇಕು ಅನ್ನೋ ಹುಡುಕಾಟದಲ್ಲಿದ್ದಾಗ , ನನ್ನ ಬೆಸ್ಟ್ ಫ್ರೆಂಡ್ ದಿಲ್ ಸೆ ದಿಲೀಪ್ ಬಂದು ಒಂದು ಕಥೆ ಇದೆ ಕೇಳಿ ಡೈರೆಕ್ಟರ್ ಋಷಿ ಎನ್ನುವವರು ಮಾಡಿದ್ದಾರೆ,  ನಿರ್ಮಾಪಕರು ಸ್ಟ್ರಾಂಗ್ ಇದ್ದಾರೆ ಎಂದರು , ಕಥೆ ಕೇಳಿದೆ ಇಷ್ಟ ಆಯಿತು , ಹಾಗೆ ನಿರ್ಮಾಪಕರು ಯಾರು ಅಂದಾಗ ಗೊತ್ತಾಗಿದೆ ವಿಜಯ್ ಟಾಟಾ ಸರ್. ಓಕೆ ಸಿನಿಮಾ ಮಾಡೋಣ ಎಂದು ನಿರ್ಧಾರ ಮಾಡಿ , ಅದೇ ರೀತಿ ಅಮೃತ ಸಿನಿ ಕ್ರಾಫ್ಟ್ ಮೂಲಕ ಸಿನಿಮಾ ಕೂಡ ಅನೌನ್ಸ್ ಆಯಿತು. ಆಮೇಲೆ ಒಮ್ಮೆ ಭೇಟಿ ಮಾಡಿದೆ , ನಂತರ ಮುಧೋಳ್ ಬಗ್ಗೆ ಕೂಡ ವಿಜಯ ಸರ್ ಕೇಳಿದರು, ಅಲ್ಲಿವರೆಗೂ ಮುಧೋಳ್ ಬಗೆ ಯಾವುದೇ ಮಾತುಕತೆ ಆಗಿರಲಿಲ್ಲ, ಆ ಚಿತ್ರದ ಕಂಟೆಂಟ್ ಕೂಡ ತೋರಿಸಿದೆ ಅವರಿಗೆ ಬಹಳ ಇಷ್ಟವಾಯಿತು , ಅಲ್ಲಿಂದ ಸ್ವಲ್ಪ ಚೇಂಜ್ ಆಯ್ತು , ನಮ್ಮ ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಸರ್ ಇಬ್ಬರು ಡಿಸ್ಕಶನ್ ಮಾಡಿದ ನಂತರ ಇಲ್ಲಿಂದ ನನ್ನ ಹಾಗೂ ನಮ್ಮ ತಂಡದ ಜೊತೆ ಅಮೃತ ಸಿನಿ ಕ್ರಾಫ್ಟ್ ವಿಜಯ್ ಸರ್ ಸಾಥ್ ನೀಡಿದ್ದು , ನಮ್ಮ ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊರ ತರಲು ಕೊಲಾಬ್ರೇಶನ್ ಮಾಡಿಕೊಂಡಿದ್ದೇವೆ.

ಈಗೊಂದು ಸ್ಟ್ರಾಂಗ್ ಟೀಮ್ ಸೇರಿಕೊಂಡು ಮುಂದೆ ಬರುತ್ತಿದ್ದೇವೆ. ನಮ್ಮ ಮಾಧ್ಯಮದವರು ಹೆಚ್ಚು ಸಪೋರ್ಟ್ ಮಾಡಿ, ನನ್ನ ಕನಸಿನ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರಲಿ, ಈ ಚಿತ್ರದ ಪ್ರತಿಯೊಂದು ಅಪ್ಡೇಟ್ ಹಂತ ಹಂತವಾಗಿ ನಿಮಗೆ ನೀಡುತ್ತೇನೆ. ನೀವೆಲ್ಲರೂ ಪ್ರೇಕ್ಷಕರಿಗೆ ತಲುಪಿಸಿ ಎನ್ನುತ್ತಾ ನನ್ನ ಹುಟ್ಟುಹಬ್ಬಕ್ಕೆ ಇದೇ ಒಂದು ದೊಡ್ಡ ಅಪ್ಡೇಟ್ , ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಕೇಳಿಕೊಂಡರು.

error: Content is protected !!