Cini NewsSandalwoodUncategorized

ಭಜರಂಗಿ ಲೋಕಿ ಬರ್ತ್‌ಡೇಗೆ ಬಿಡುಗಡೆಯಾಯ್ತು “ದಿಲ್‌ದಾರ್” ಲುಕ್.

ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಚಿತ್ರ `ದಿಲ್ ದಾರ್’. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿರುವ ಚಿತ್ರತಂಡವೀಗ ಭಜರಂಗಿ ಲೋಕಿ ಅವರಿಗೆ ಪೋಸ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇದರೊಂದಿಗೆ ಭಜರಂಗಿ ಲೋಕಿಯ ಲುಕ್ ಕೂಡಾ ರಿವೀಲ್ ಆದಂತಾಗಿದೆ. ಹಂತ ಹಂತವಾಗಿ ಪಾತ್ರಗಳ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಳ್ಳುತ್ತಿರುವ ಚಿತ್ರತಂಡ, ಇದೀಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಜರಂಗಿ ಲೋಕಿ ಪಾತ್ರದ ಚಹರೆಯನ್ನು ಜಾಹೀರಾಗಿಸಿದೆ.
ಇದು ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಇದರಲ್ಲಿ ಭಜರಂಗಿ ಲೋಕಿ ವಿಲನ್ ಆಗಿ ಅಬ್ಬರಿಸಿದ್ದಾರೆಂಬ ವಿಚಾರ ಈ ಹಿಂದೆಯೇ ಬಯಲಾಗಿತ್ತು. ಲೋಕಿ ಇದುವರೆಗೂ ಸಾಕಷ್ಟು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾನಾ ಶೇಡುಗಳಲ್ಲಿ ವಿಲನ್ ಆಗಿ ಆರ್ಭಟಿಸಿದ್ದಾರೆ. ದಿಲ್ ದಾರ್ ನಲ್ಲಿ ಅವರ ಪಾತ್ರ ಹೇಗಿರಬಹುದೆಂಬ ಕುತೂಹಲ ಸಹಜವಾಗಿಯೇ ಮೂಡಿಕೊಂಡಿತ್ತು. ಇಲ್ಲಿ ಅವರು ಕಾಲೇಜ್ ಬಾಯ್ ಲುಕ್ಕಿನಲ್ಲಿ, ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಮಾಹಿತಿಯನ್ನಷ್ಟೇ ನಿರ್ದೇಶಕರು ಸದ್ಯದ ಮಟ್ಟಿಗೆ ಹಂಚಿಕೊಂಡಿದ್ದಾರೆ. ಮಿಕ್ಕಿಳಿದ ಮುಖ್ಯ ವಿಚಾರಗಳು ಮುಂಬರುವ ದಿನಗಳಲ್ಲಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.

ಅಂದಹಾಗೆ, ಇದು ಅಪರೂಪದ ಪ್ರೇಮ ಕಥಾನಕವನ್ನೊಳಗೊಂಡಿರುವ ಚಿತ್ರ. ಶ್ರೇಯಸ್ ಮಂಜು ಇದುವರೆಗೂ ಕಾಣಿಸಿಕೊಳ್ಳದಿದ್ದ ಪಾತ್ರದ ಮೂಲಕ ಅಚ್ಚರಿ ಮೂಡಿಸಲು ತಯಾರಾಗಿದ್ದಾರೆ. ನೃತ್ಯವೂ ಸೇರಿದಂತೆ ನಾನಾ ಬಗೆಯಲ್ಲಿ ಅವರು ಚಕಿತಗೊಳಿಸಲಿದ್ದಾರೆಂಬ ಸೂಚನೆ ಚಿತ್ರತಂಡದ ಕಡೆಯಿಂದ ಸಿಕ್ಕಿದೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕವೇ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿದೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳ ನಟರಾಗಿ ಅಬ್ಬರಿಸಿದ್ದಾರೆ. ಇದೀಗ ಭಜರಂಗಿ ಲೋಕಿಯ ಹುಟ್ಟುಹಬ್ಬದ ನೆಪದಲ್ಲಿ ಅವರ ಲುಕ್ ರಿವೀಲಾಗಿದೆ. ಮುಂದಿನ ದಿನಗಳಲ್ಲಿ ಮಿಕ್ಕುಳಿದ ಮಾಹಿತಿಗಳು ಪ್ರೇಕ್ಷಕರ ಮುಂದೆ ಬರಲಿವೆ.

error: Content is protected !!