Cini NewsSandalwood

ವಿ.ಎಂ.ರಾಜು ಸಾರಥ್ಯದ “ಬಾಲ್ಯ” ಚಿತ್ರದ ಟೀಸರ್ ಬಿಡುಗಡೆ

Spread the love

ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಅಮೂಲ್ಯ. ಆ ಬಾಲ್ಯದ ದಿನಗಳು ಹೇಗಿರಬೇಕು? ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಎಂಬ ವಿಷಯಗಳನ್ನು ತಿಳಿಸುವ “ಬಾಲ್ಯ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸತ್ಯನಾರಾಯಣಾಚಾರ್ ನಿರ್ಮಾಣದ ಈ ಚಿತ್ರವನ್ನು ವಿ.ಎಂ.ರಾಜು(ಸುಲ್ತಾನ್ ರಾಜು) ನಿರ್ದೇಶಿಸಿದ್ದಾರೆ. ಇತ್ತೀಚಿಗೆ ನಡೆದ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು “ಬಾಲ್ಯ” ದ ಬಗ್ಗೆ ಮಾತನಾಡಿದರು.

ಸುಮಾರು ಒಂದುವರೆ ವರ್ಷಗಳ ಹಿಂದೆ ಈ ಚಿತ್ರದ ಕಥೆ ಸಿದ್ದವಾಯಿತು ಎಂದು ಮಾತನಾಡಿದ ನಿರ್ದೇಶಕ ವಿ.ಎಂ.ರಾಜು, ಬಿ.ಪಟೇಲಪ್ಪ ಅವರು ಸೇರಿದಂತೆ ಅನೇಕ ಸ್ನೇಹಿತರು “ಬಾಲ್ಯ”ದ ಕಥೆಗೆ ಸಾಥ್ ನೀಡಿದ್ದಾರೆ. ಈ ಕಥೆಯನ್ನು ಮೆಚ್ಚಿಕೊಂಡ ಸತ್ಯನಾರಾಯಣಾಚಾರ್ ಅವರು ನಿರ್ಮಾಣ ಮಾಡಲು ಮುಂದಾದರು.

ಮಕ್ಕಳಿಗೆ ಆರರಿಂದ ಹದಿನಾಲ್ಕು ವರ್ಷ ಅಮೂಲ್ಯವಾದದ್ದು. ಆ ಸಮಯದಲ್ಲಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಮಕ್ಕಳಿಗೆ ಆಟ ಹಾಗೂ ಪಾಠ ಎಷ್ಟು ಮುಖ್ಯ ಎಂಬ ಯೂನಿವರ್ಸಲ್ ಸಬ್ಜೆಕ್ಟ್ ಇಟ್ಟುಕೊಂಡು ಈ ಚಿತ್ರ ಬರುತ್ತಿದೆ. ಪ್ರತಿಯೊಬ್ಬ ಪೋಷಕರು ಹಾಗೂ ಮಕ್ಕಳು ನೋಡಲೇ ಬೇಕಾದ ” ಬಾಲ್ಯ” ಚಿತ್ರದಲ್ಲಿ ನಾರಾಯಣಸ್ವಾಮಿ, ನಿಶ್ಚಿತ, ಬುಲೆಟ್ ವಿನೋದ್, ಅಪ್ಸರ, ಮಾಸ್ಟರ್ ಆರ್ಯನ್, ಮಾಸ್ಟರ್ ದಕ್ಷಿತ್, ಕುಮಾರಿ ದೀಕ್ಷ ಮುಂತಾದವರಿದ್ದಾರೆ.

ಹಾಡುಗಳಿಗೆ ಇಂದು ವಿಶ್ವನಾಥ್ ಸಂಗೀತ ನೀಡಿದ್ದಾರೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು. ಕನ್ನಡ ಚಿತ್ರರಂಗದ ಮೊದಲ ಪಿ.ಆರ್.ಓ ಸುಧೀಂದ್ರ ನನ್ನ ಗುರು ಸಮಾನರು. ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದು ನಿರ್ದೇಶಕ ವಿ.ಎಂ.ರಾಜು ತಿಳಿಸಿದರು.

ನಾನು ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿದ್ದೇನೆ. ಇದು ಮೂರನೇ ಚಿತ್ರ. ರಾಜು ಅವರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸತ್ಯನಾರಾಯಣಾಚಾರ್. ಚಿತ್ರದಲ್ಲಿ ನಟಿಸಿರುವ ಬುಲೆಟ್ ವಿನೋದ್, ಅಪ್ಸರ, ಮಾಸ್ಟರ್ ಆರ್ಯನ್, ಮಾಸ್ಟರ್ ದೀಕ್ಷಿತ್, ಕುಮಾರಿ ದೀಕ್ಷ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಹಾಡುಗಳ ಕುರಿತು ಇಂದು ವಿಶ್ವನಾಥ್ ಮಾಹಿತಿ‌ ನೀಡಿದರು. ಸಂಕಲನಕಾರ ಲಕ್ಮಣ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ರಮೇಶ್ ಕೊಯಿರಾ ಛಾಯಾಗ್ರಹಣವಿರುವ “ಬಾಲ್ಯ” ಚಿತ್ರಕ್ಕೆ ಎ.ಟಿ.ರವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನೀಲ್ ಕೆಂಗಾಪುರ್ “ಬಾಲ್ಯ” ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

Visited 1 times, 1 visit(s) today
error: Content is protected !!