ನೂತನ ಸಿನಿಮಾ ಸಂಸ್ಥೆ ‘ಅಜಯ್ ಮೂವೀಸ್’ಗೆ ಶುಭಕೋರಿದ ಅಶ್ವಿನಿ ಪುನೀತ್ ರಾಜಕುಮಾರ್
ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ಮೊದಲಿನಿಂದಲೂ ನಟ ಸಾರ್ವಭೌಮ ಡಾ||ರಾಜಕುಮಾರ್ ಅವರ ಕುಟುಂಬ ಪ್ರೋತ್ಸಾಹ ನೀಡುತಾ ಬಂದಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಹ ಅದೇ ಕೆಲಸ ಮಾಡುತ್ತಿದ್ದಾರೆ. ಅಜಯ್ ಮೂವೀಸ್ ಎಂಬ ನೂತನ ಸಂಸ್ಥೆಯನ್ನು ನಿರ್ಮಾಪಕಿ ಮಮತ ಅಮಿನ್ ಅವರು ಆರಂಭಿಸಿದ್ದಾರೆ ಹಾಗೂ ಅಜಯ್ ಸಾಗರ್ ಅವರ ನಿರ್ದೇಶನದಲ್ಲಿ “ಪ್ರೊಡಕ್ಷನ್ ನಂ ೧” ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದಾರೆ.
ಇತ್ತೀಚೆಗೆ ಈ ನೂತನ ಚಿತ್ರತಂಡದ ಸದಸ್ಯರು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅಜಯ್ ಮೂವೀಸ್ ಸಂಸ್ಥೆಗೆ ಶುಭವಾಗಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಸಿದ್ದಾರೆ. ನಿರ್ಮಾಪಕಿ ಮಮತ ಅಮಿನ್, ನಿರ್ದೇಶಕ ಅಜಯ್ ಸಾಗರ್, ಛಾಯಾಗ್ರಾಹಕ ಮನೀಶ್ ಬಂಗೇರ, ನವಯುಗ ಹೋಟೆಲ್ ನ ಮಾಲೀಕರಾದ ಮಾರುತಿ ಸಾಲಿಗ್ರಾಮ, ಕಾರ್ಯಕಾರಿ ನಿರ್ಮಾಪಕ ಪ್ರತಾಪ್ ಸಾಲಿಗ್ರಾಮ ಹಾಗೂ ಪಿ.ಆರ್.ಕೆ ಸಂಸ್ಥೆಯ ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮ ಅಜಯ್ ಮೂವೀಸ್ ಸಂಸ್ಥೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಶುಭಕೋರಿದ್ದು ಬಹಳ ಸಂತೋಷವಾಗಿದೆ. ನಮಗೆ ಡಾ|ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಆಶೀರ್ವಾದ ಸಿಕ್ಕಷ್ಟೇ ಖುಷಿಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ಎನ್ನುತಾರೆ ನಿರ್ಮಾಪಕಿ ಮಮತ ಅಮಿನ್ ಹಾಗೂ ನಿರ್ದೇಶಕ ಅಜಯ್ ಸಾಗರ್. ಅಜಯ್ ಮೂವೀಸ್ ಮೂಲಕ “ಪ್ರೊಡಕ್ಷನ್ ನಂ ೧” ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ.
