Cini NewsSandalwood

ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ “VK29” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್.

Spread the love

ಸ್ಯಾಂಡಲ್ ವುಡ್ ಸಲಗ ಮತ್ತು ಕಾಟೇರ ಕಥೆಗಾರ ನಿರ್ದೇಶಕ ಜಡೇಶ್ ಜೋಡಿಯ “VK29” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.ವಿಜಯ್ ರ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರೋ ಈ ಪೋಸ್ಟರ್ ನಲ್ಲಿ ಇದು ಆಳಿದವರ ಕಥೆಯಲ್ಲ.. ಅಳಿದು ಉಳಿದವರ ಕಥೆ.. ಅನ್ನೋ ಅಡಿ ಬರಹ ಕೊಟ್ಟಿದ್ದಾರೆ.

ಮಣ್ಣಿನ ಕಥೆಗಳಿಗೆ ಹೆಸರುವಾಸಿಯಾಗಿರೋ ಜಡೇಶ್ ಕುಮಾರ್ ಹಂಪಿ VK29 ಮೂಲಕ ಮತ್ತೊಂದು ಸೊಗಡಿನ ಸಿನ್ಮಾ ಮಾಡೋ ಸೂಚನೆ ನೀಡಿದ್ದಾರೆ.ಈ ಸಿನಿಮಾದಲ್ಲಿ ದುನಿಯಾ ವಿಜಯ್ ಯವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ವಿಶೇಷ.

VK29ಗೆ ಭೀಮ ಸಿನಿಮಾಗೆ ಬಂಡವಾಳ ಹೂಡಿರುವಂತಹ ಜಗದೀಶ್ ಗೌಡ ರವರೇ ಹಣ ಹಾಕ್ತಿದ್ದಾರೆ. ಈ ಚಿತ್ರದ ಕುರಿತ ಇನ್ನಷ್ಟು ವಿಶೇಷ ವಿಚಾರಗಳನ್ನ ಭೀಮ ರಿಲೀಸ್ ಆದ್ಮೇಲೆ ಚಿತ್ರತಂಡ ಬಿಟ್ಟುಕೊಡಲಿದೆ

Visited 1 times, 1 visit(s) today
error: Content is protected !!