ಶಂಕರನ… ಬಸ್ಸಿನಲ್ಲಿರುವ ಭಯಂಕರ…”ಶಂಕರಾಭರಣ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ಶಂಕರನ… ಬಸ್ಸಿನಲ್ಲಿರುವ ಭಯಂಕರ…

ರೇಟಿಂಗ್ : 3.5/5
ಚಿತ್ರ : ಶಂಕರಾಭರಣ

ನಿರ್ದೇಶಕ : ಸುಮಂತ್ ಭಟ್
ನಿರ್ಮಾಪಕ : ದಿವಾಕರ್ ಶೆಟ್ಟಿ
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಉದಿತ್ ಕುರಾನ
ತಾರಾಗಣ : ಶೈನ್ ಶೆಟ್ಟಿ , ಕೃತಿ ಶೆಟ್ಟಿ , ತನ್ವಿ ರಾಮ್, ಸಂಪತ್ ರಾಜ್ ,ಅನೀಲ್ ಕುಮಾರ್ ಚೌಹ್ಹಾಣ್ , ದೀಪಕ್ ರೈ ಪಾಣಾಜೆ, ಅರ್ಜುನ್ ಕ.ಜೆ ಹಾಗೂ ಮುಂತಾದವರು…

ಕುತೂಹಲ, ನಿಗೂಢತೆಯ ಮೂಲಕವೇ ಸಾಗುವ ಕಥಾನಕದಲ್ಲಿ ಬಸ್ ಓಡಿಸುವುದೇ ಕನಸೆಂದು ಬದುಕುವ ಮಧ್ಯಮ ವರ್ಗದ ಹುಡುಗನ ಆಸೆಯ ಸುತ್ತ ಸಂಬಂಧ , ಪ್ರೀತಿ , ದ್ವೇಷದ ನಡುವೆ ಅಮಾಯಕರ ಜೀವ , ಆತ್ಮದ ಸೇಡಿನ ಹಿಂದಿರುವ ನಿಗೂಢ ಸತ್ಯದ ಏರಿಳಿತದ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಕರಾವಳಿ ಭಾಗದ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಶಂಕರಾಭರಣ”.

ತಂದೆ ವಿಠಲಣ್ಣ (ದೀಪಕ್ ರೈ ಪಾಣಾಜೆ) ರಂತೆ ತಾನು ಕೂಡ ಡ್ರೈವರ್ ಆಗಬೇಕೆಂದು ಬಾಲ್ಯದಿಂದ ಕನಸನ್ನ ಕಾಣುವ ಯುವಕ ಶಂಕರ (ಶೈನ್ ಶೆಟ್ಟಿ). ಊರಿನ ಶ್ರೀಮಂತ ಬಸ್ ಓನರ್ ಮಧುಕರ್ (ಅನಿಲ್ ಚೌಹ್ಹಾಣ್) ವಾಹನದ ಚಾಲಕನಾಗಿ ಕೆಲಸ ಮಾಡುತ್ತಾನೆ. ಇದರ ನಡುವೆ ಬ್ಯಾಂಕ್ ಉದ್ಯೋಗಿ ಜೆನ್ನಿ (ತನ್ವಿ ರಾಮ್) ಜೊತೆ ಪ್ರೀತಿಯ ಒಡನಾಟ. ಇದಕ್ಕೆ ಶಂಕರನ ಅಕ್ಕ ಶಾಂತಿ (ಕೃತಿ ಶೆಟ್ಟಿ) ಕೂಡ ಬೆಂಬಲ. ಬಸ್ ಮಾಲೀಕ ಮಧುಕರ್ ಮಗ ಅನಿಲ್ ದುರ್ವರ್ತನೆ ವಿಚಾರವಾಗಿ ಶಂಕರ ಕೆಲಸ ಕಳೆದುಕೊಂಡು ಸ್ವಂತ ಬಸ್ ಕೊಂಡುಕೊಳ್ಳಲು ನಿರ್ಧರಿಸುತ್ತಾನೆ.

ಸುಮಾರು ವರ್ಷದ ಹಳೆಯ ಬಸ್ ಹಣಕ್ಕೆ ತಕ್ಕಂತೆ ಸಿಗುತ್ತದೆ. ಈ ಬಸ್ ಪಡೆಯುವಾಗ ಶಂಕರನಿಗೆ ವಿಚಿತ್ರ ಶಬ್ದ ಅನುಭವ ಆಗುತ್ತದೆ. ಬಸ್ ಸಂಚಾರ ಮಾರ್ಗವಾಗಿ ಕಾಣದ ಕೈಗಳ ಷಡ್ಯಂತ್ರದಿಂದ ಉಡುಪಿ ಯಿಂದ ತೌಡಗೋಳಿ ಮಾರ್ಗಕ್ಕೆ ಅನುಮತಿ ಪಡೆಯುತ್ತಾನೆ. ಈ ಭಾಗ ಅಪಾಯ , ಅನಾಹುತಕ್ಕೆ ದಾರಿ . ಆತ್ಮಗಳ ಕಾಟ ಹೆಚ್ಚು ಎಂಬ ವಿಷಯ ತಿಳಿಯುತ್ತದೆ. ಈ ಭಾಗದ ಜನರಿಗೆ ಪಿ. ಟಿ. ಸುಧಾಕರ (ಸಂಪತ್ ರಾಜ್) ಎಂದರೆ ಭಯ. ಅವನ ದುಷ್ಕೃತ್ಯ , ಆರ್ಭಟಕ್ಕೆ ತತ್ತರಿಸಿದವರು ಬಹಳಷ್ಟು ಮಂದಿ.

ಇನ್ನು ಬಸ್ ಸಂಚಾರದ ಸಮಯದಲ್ಲಿ ಬರುವ ಶಬ್ದ , ನಿಗೂಢ ಹುಡುಗಿ ಶ್ರೀಕಲಾ ಶಂಕ್ರನಿಗೆ ಮಾತ್ರ ಕಾಣಿಸುತ್ತಾಳೆ. ಕಂಡಕ್ಟರ್ ಅಬು , ಕ್ಲೀನರ್ ಸಿರಿದಂತೆ ಪ್ರಯಾಣಿಕರಿಗೆ ಕಾಣಸಿಗುವುದಿಲ್ಲ. ತನಗೆ ಯಾಕೆ ಕಾಟ ಕೊಡುತ್ತಿದ್ದಾಳೆ ಎನ್ನುವಷ್ಟರಲ್ಲಿ ಒಂದಷ್ಟು ನಿಗೂಢ ಸತ್ಯ ಹೊರ ಬರುತ್ತಾ ಹೋಗುತ್ತದೆ. ಅದನ್ನು ಹುಡುಕುವ ಹಂತದಲ್ಲಿ ರಾಶಿ ಹೆಣಗಳ ಬಗ್ಗೆ ತಿಳಿಯುತ್ತದೆ. ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾವುಗಳ ಹಿಂದಿನ ನಿಗೂಢತೆ ಕೊನೆಯ ಹಂತ ತಲುಪುತ್ತದೆ… ಈ ಸಾವುಗಳಿಗೆ ಕಾರಣ ಯಾರು… ಶಂಕರನ ಬಸ್ಸಿಗೆ ಬರುವ ಆತ್ಮ ಯಾವುದು…
ಕ್ಲೈಮಾಕ್ಸ್ ಹೇಳುವ ಸತ್ಯ… ಏನು ಎಂಬುದಕ್ಕೆ ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬೇಕು.

ಪ್ರೇಕ್ಷಕರನ್ನ ಸೆಳೆಯುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆ ಉತ್ತಮವಾಗಿದೆ. ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ. ಪಾಪ ಪುಣ್ಯ ಸಮಯಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ. ಸಂಬಂಧ , ಪ್ರೀತಿ , ಸ್ನೇಹ, ಬದುಕಿನ ನಡುವೆ ದುಶ್ಚಟ , ಮೋಸ, ವಂಚನೆಗೆ ಪ್ರತ್ಯುತ್ತರ ಕಟ್ಟಿಟ್ಟ ಬುತ್ತಿ.

ಮೊದಲ ಭಾಗ ಗಮನ ಸೆಳೆದಿದ್ದು , ದ್ವಿತೀಯ ಭಾಗ ಚಿತ್ರಕಥೆಯನ್ನು ಇನ್ನಷ್ಟು ಹಿಡಿತ ಮಾಡಬೇಕಿತ್ತು . ಆದರೂ ಪ್ರಯತ್ನ ಚೆನ್ನಾಗಿದೆ. ನಿರ್ಮಾಪಕರ ಬೆಂಬಲಕ್ಕೆ ತಕ್ಕ ಚಿತ್ರ ಬಂದದ್ದು , ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ ಉತ್ತಮವಾಗಿ ಮೂಡಿ ಬಂದಿದೆ. ನಾಯಕನಾಗಿ ಶೈನ್ ಶೆಟ್ಟಿ ತಮ್ಮ ಪ್ರತಿಭೆಯನ್ನ ಅದ್ಭುತವಾಗಿ ತೆರೆಯ ತೆರೆದಿಟ್ಟಿದ್ದಾರೆ.

ಬಸ್ ಚಾಲಕನಾಗಿ , ಪ್ರೇಮಿಯಾಗಿ, ದೆವ್ವದ ಸ್ನೇಹಿತನಾಗಿ ಭಯಪಡುತ್ತಾ, ನೊಂದವರ ಆಸರೆಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರಮುಖ ಆಕರ್ಷಣೆಯಾಗಿ ಶ್ರೀಕಲಾ ಪಾತ್ರಧಾರಿ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದರೆ ನಾಯಕನ ಗೆಳತಿಯಾಗಿ ಜೆನ್ನಿ ಮೌನದಲ್ಲಿ ಹೆಚ್ಚಾಗಿ ಮನ ಸೆಳೆಯುತ್ತಾರೆ. ಪ್ರಮುಖ ಕಡಕ್ ವಿಲ್ಲನ್ ಆಗಿ ಸಂಪತ್ ರಾಜ್ , ನಾಯಕನ ತಂದೆಯಾಗಿ ದೀಪಕ್ ರೈ ಪಾಣಾಜೆ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಒಂದು ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟ್ರಿ ಚಿತ್ರಗಳನ್ನು ಇಷ್ಟಪಡುವ ಸಿನಿಮಾ ಪ್ರೇಮಿಗಳಿಗೆ ಬಹಳ ಬೇಗ ಸೆಳೆಯುವ ಈ ಚಿತ್ರ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!