ಸ್ನೇಹ , ಪ್ರೀತಿ , ಸುತ್ತ ಹೆಣ್ಣಿನ ಮನಸ್ಥಿತಿಯ ತಳಮಳ “A ಡೇಟ್” (ಚಿತ್ರವಿಮರ್ಶೆ-ರೇಟಿಂಗ್ : 4/5)

Spread the love

ರೇಟಿಂಗ್ : 4/5
ಚಿತ್ರ : A ಡೇಟ್
ನಿರ್ದೇಶಕ : ವಿಮಲ್ ರಾಜ್
ನಿರ್ಮಾಣ : ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ
ಸಂಗೀತ : ಮೋಕ್ಷ ಬೀಟ್ಸ್
ಛಾಯಾಗ್ರಹಣ : ವಡ್ಡೆ ದೇವೇಂದ್ರ
ತಾರಾಗಣ : ಸುಜನೀತ್ ಶೆಟ್ಟಿ ,ಅಶ್ವಿನಿ ಶೆಣೈ ಹಾಗೂ ಮುಂತಾದವರು…

 

ಲೈಫ್ ಇಸ್ ಶಾರ್ಟ್… ಜೆನ್ಜಿ ಪ್ರೇಮಿಗಳ ಎಮೋಷನಲ್ ಜರ್ನಿ. ಬೆಂಗಳೂರು ಹುಡುಗ , ದೆಹಲಿ ಮೂಲದ ಹುಡುಗಿಯ ಆಕಸ್ಮಿಕ ಬೇಟಿ ಸ್ನೇಹ , ಸಲುಗೆ , ಡೇಟಿಂಗ್ ನಡುವೆ ಎದುರಾಗುವ ಪ್ರೀತಿಯ ಸಂಬಂಧದ ಸುಳಿಯಲ್ಲಿ ಪರಿತಪಿಸುವ ಎರಡು ಜೋಡಿಗಳ, ನೈಜ್ಯಕ್ಕೆ ಹತ್ತಿರದ ಕಥಾನಕದೊಂದಿಗೆ ಬಹಳ ಸೊಗಸಾಗಿ ಬೆಂಗಳೂರಿನ ದೃಶ್ಯ ವೈಭವವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ಈ ವಾರ ತಂದಿರುವಂತಹ ಚಿತ್ರ “ಎ ಡೇಟ್”. ಒಂದು ಪ್ರಾಜೆಕ್ಟ್ ವಿಚಾರವಾಗಿ ದೆಹಲಿಯಿಂದ ಬೆಂಗಳೂರುಗೆ ಬರುವ ಮೋನಿಷಾ (ಅಶ್ವಿನ್ ಶೆಣೈ) ಮುಖ್ಯಸ್ಥರ ಸಲಹೆಯಂತೆ ಕಾರ್ತಿಕ್ (ಸುಜನೀತ್ ಶೆಟ್ಟಿ) ಸಹಕಾರದೊಂದಿಗೆ ತನ್ನ ಕೆಲಸವನ್ನು ನಿರ್ವಹಿಸಲು ಮುಂದಾಗುತ್ತಾಳೆ. ತಾಯಿ ಕರ್ನಾಟಕದವರಾದರೂ ತಂದೆ ಪಂಜಾಬಿ ಮೂಲವಾದ ಕಾರಣ ಡೆಲ್ಲಿಯಲ್ಲಿ ವಾಸಿಸುವ ಮೋನಿಷಗೆ ಅರ್ಜುನ್ ಎಂಬ ಬಾಯ್ ಫ್ರೆಂಡ್ ಕೂಡ ಇರುತ್ತಾನೆ. ತನ್ನ ಪ್ರಾಜೆಕ್ಟ್ ವರ್ಕ್ ನಲ್ಲಿ ಬಿಜಿಯಾಗಿರುವ ಮೋನಿಷಾ ಗೆ ಕಾರ್ತಿಕ್ ಬೆಂಗಳೂರಿನ ಪರಿಚಯ ಮಾಡಿಸಲು ಡೇಟಿಂಗ್ ಕರಿಯುತ್ತಾನೆ.

ಇಷ್ಟವಿಲ್ಲದ ಮನಸ್ಥಿತಿಯಲ್ಲೂ ಕಾರ್ತಿಕ್ ಜೊತೆ ಬೈಕ್ ರೈಡ್ ನಲ್ಲಿ ಹೊರಡುವ ಮೋನಿಷ ಸಮಯ ಕಳೆದಂತೆ ತನ್ನ ನೋವು , ನಲಿವು , ತನ್ನ ಗೆಳೆಯನ ಪ್ರೀತಿಯ ಒಡನಾಟ ಎಲ್ಲವನ್ನ ಹೇಳುತ್ತಾ ಹೋಗುತ್ತಾಳೆ. ಆದರೆ ಇದರಲ್ಲಿ ಎದುರಾಗುವ ಒಂದಷ್ಟು ವಿಚಾರಗಳು ಮನಸ್ಥಿತಿ , ಪರಿಸ್ಥಿತಿ , ಸತ್ಯದ ಸುಳಿವು , ನಿಜವಾದ ಪ್ರೀತಿ ಎಲ್ಲವನ್ನ ಬದಲಾವಣೆ ಮಾಡುತ್ತಾ ಹೋಗುತ್ತದೆ. ಅದು ಏನು.. ಹೇಗೆ… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಎಲ್ಲರೂ ಈ ಚಿತ್ರವನ್ನು ನೋಡಬೇಕು. ವಿಶೇಷವಾಗಿ ಕಾಲೇಜ್ ವಿದ್ಯಾರ್ಥಿಗಳು , ಉದ್ಯೋಗಿಗಳು , ಯುವಕ , ಯುವತಿಯರು ಚಿತ್ರವನ್ನ ವೀಕ್ಷಿಸುವುದು ಬಹಳಾನೇ ಅಗತ್ಯ.

ಪ್ರಮುಖ ಎರಡೇ ಪಾತ್ರಗಳು ಬಹಳ ಅಚ್ಚುಕಟ್ಟಾಗಿ ನೈಜಕ್ಕೆ ಹತ್ತಿರವಾಗಿ ಅಭಿನಯಿಸಿದ್ದಾರೆ. ನಾಯಕನಾಗಿ ಸುಜನೀತ್ ಶೆಟ್ಟಿ ಬಹಳ ನ್ಯಾಚುರಲ್ ಆಗಿ ಪಾತ್ರಕ್ಕೆ ಜೀವ ತುಂಬಿ ಗಮನ ಸೆಳೆಯುತ್ತಾರೆ. ಕನ್ನಡ ಭಾಷೆಯ ಮೇಲಿನ ಪ್ರೀತಿ , ಅಭಿಮಾನವನ್ನು ಬಹಳ ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ ಅದೇ ರೀತಿ ನಾಯಕಿಯಾಗಿ ಅಭಿನಯಿಸಿರುವ ಅಶ್ವಿನಿ ಶೆಣೈ ಬಹಳ ಅದ್ಭುತವಾಗಿ ಪಾತ್ರದಲ್ಲಿ ಜೀವಿಸಿದ್ದಾರೆ. ಎಮೋಷನಲ್ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಿರುವ ಈ ಪ್ರತಿಭೆಗೆ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಭವಿಷ್ಯವಿದೆ. ಉಳಿದಂತೆ ಅಭಿನಯಿಸಿರುವ ಸಹಪಾತ್ರಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ಇನ್ನೂ ಪ್ರಥಮ ಪ್ರಯತ್ನದಲ್ಲೇ ನಿರ್ದೇಶಕ ವಿಮಲ್ ಹರಾಜ್ ನಾಗರಾಜ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಸೊಗಸಾಗಿದ್ದು , ಹೆಣ್ಣಿನ ಮನಸ್ಸಿನ ಮೇಲಾಗುವ ಒತ್ತಡ , ಪರಿಸ್ಥಿತಿ , ವ್ಯವಸ್ಥೆ , ಪ್ರೀತಿ , ನಂಬಿಕೆ ದ್ರೋಹ ಸುತ್ತ ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಪ್ರಶ್ನೆಗೆ ಉತ್ತರ ನೀಡುವ ನಿಟ್ಟಿನಲ್ಲಿ ಒಂದು ಉತ್ತಮ ಚಿತ್ರವನ್ನು ಪ್ರೇಕ್ಷಕರ ಮುಂದೆ ನೀಡಿದ್ದಾರೆ. ಚಿತ್ರದ ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ.

ಉತ್ತಮ ಪ್ರಯತ್ನದ ಚಿತ್ರವಾಗಿದೆ. ಇಡೀ ಚಿತ್ರದ ಹೈಲೈಟ್ ವಡ್ಡೆ ದೇವೇಂದ್ರ ರೆಡ್ಡಿ ಕ್ಯಾಮೆರಾ ಕೈಚಳಕ ಬೆಂಗಳೂರಿನ ಸುಂದರ ತಾಣಗಳನ್ನು ಅದ್ಭುತವಾಗಿ ಚಿತ್ರಿಕರಿಸಿದ್ದು , ಕಲಾವಿದರ ಕ್ಲೋಸ್ ಅಪ್ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದೆ. ನಿರ್ದೇಶಕ ವಿಮಲ್ ರಾಜ್ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಕಲನ ಮಾಡಿದ್ದು , ಬಹುಮುಖ ಪ್ರತಿಭೆಯಾಗಿ ಹೊರಬಂದಿದ್ದಾರೆ.ಹೊಸತನದ ಕಥಾನಕದೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರವು ಎಲ್ಲರೂ ನೋಡುವಂತಿದೆ.

Visited 1 times, 1 visit(s) today
error: Content is protected !!