ಮರ್ಡರ್ ಮಿಸ್ಟರಿ ಹಿಂದಿರುವ ನಿಗೂಢ ಸತ್ಯ “ತದ್ವಿರುದ್ಧ” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ತದ್ವಿರುದ್ಧ
ನಿರ್ದೇಶಕ : ವಿನೋದ್ ಜೆ ರಾಜ್
ನಿರ್ಮಾಪಕ : ವಿಕ್ರಮ್ ರಾಮಯ್ಯ
ತಾರಾಗಣ : ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ , ಐಶ್ವರ್ಯ ಶೆಟ್ಟಿ , ಪೂಜಾ ಗೌಡ , ಅಭಿ ಸಾಮ್ರಾಟ್, ಸುವಿನ ಗೌಡ ಹಾಗೂ ಮುಂತಾದವರು…
ಸಾಮಾನ್ಯವಾಗಿ ಸಸ್ಪೆನ್ಸ್ , ಮರ್ಡರ್ ಮಿಸ್ಟರಿ ಕಥಾನಕಗಳು ಪ್ರೇಕ್ಷಕರನ್ನ ಬಹಳ ಬೇಗ ಸೆಳೆಯುತ್ತದೆ. ಅದರಲ್ಲೂ ಮಾನಸಿಕ ಅಸ್ತಿರತೆ , ದ್ವಂದ್ವ ನಿಲುವು , ವಿಭಜಿತ ವ್ಯಕ್ತಿತ್ವದ ನಡುವಳಿಕೆ ಬೇರೆಯವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುವಂತಹ ಸ್ಥಿತಿಗಳು ಎದುರಾಗುತ್ತದೆ. ಅಂದದ್ದೇ ವಿಚಾರದೊಂದಿಗೆ ಯೌವನ ದಾಟಿದವನ ಮದುವೆ , ಅನುಮಾನದ ಬದುಕು , ಹೆಣ್ಣಿನ ಸ್ವಾತಂತ್ರ , ಆತಂಕದ ನಡುವೆ ಸಾವಿನ ಸುಳಿಯ ಸುತ್ತ ಹಿಂದಿರುವ ಕಳ್ಳ ಪೋಲಿಸ್ ಆಟದ ರಹಸ್ಯ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ತದ್ವಿರುದ್ಧ”.
ಸೈಕ್ಯಾಟೆಸ್ಟ್ ಡಾಕ್ಟರ್ ಲೇಖನ (ಐಶ್ವರ್ಯ ಶೆಟ್ಟಿ) ಪುಟ್ಟ ಹೆಣ್ಣು ಮಗಳ ಚಿಕಿತ್ಸೆಗಾಗಿ ದಟ್ಟ ಅರಣ್ಯದ ಮಾರ್ಗ ಮಧ್ಯ ಕಾರಿನಲ್ಲಿ ಬರುವಾಗ ಗಾಡಿ ಕೈ ಕೊಟ್ಟು ಒಂದು ಮನೆಯ ಆಶ್ರಯ ಪಡೆಯುತ್ತಾಳೆ. ಮತ್ತೊಂದೆಡೆ ಜೆ.ಡಿ. ಕೆರೆ ಎಸ್ಟೇಟ್ ನ ಮಾಲೀಕ ಭೂಷಣ್ ವರ್ಮ (ಸುಚೇಂದ್ರ ಪ್ರಸಾದ್) ಹೆಂಡತಿಯಿಂದ ದೂರ ಉಳಿದು ವೀಲ್ ಚೇರ್ ಆಧಾರದೊಂದಿಗೆ ಒಂಟಿತನದ ಬದುಕು ನಡೆಸುತ್ತಾನೆ.
ಇನ್ನು ದೂರದ ಪುಣೆಯಿಂದ ಬಂದು ತನ್ನ ಚಿಕ್ಕಮ್ಮ ಮಯೂರಿ ವರ್ಮ (ಸುಮನ್ ರಂಗನಾಥ್) ಕಾಣೆಯಾಗಿದ್ದಾಳೆ ದಯವಿಟ್ಟು ಹುಡುಕಿ ಕೊಡಿ ಎಂದು ಗ್ರಾಮದ ಠಾಣೆಯ ಇನ್ಸ್ಪೆಕ್ಟರ್ ಕಲ್ಪನಾ (ಪೂಜಾ ಗೌಡ) ಗೆ ಕಂಪ್ಲೇಂಟ್ ನೀಡುತ್ತಾಳೆ. ಉಮ್ಮಸ್ಸಿನಿಂದ ತನಿಖೆ ಆರಂಭಿಸುವ ಇನ್ಸ್ಪೆಕ್ಟರ್ ಗೆ ದಿಕ್ಕು ತಪ್ಪಿಸುವ ಕೆಲಸ ಆರಂಭವಾಗುತ್ತದೆ. ಮತ್ತೊಬ್ಬ ಅನುಭವಿ ಅಧಿಕಾರಿ ಆಂಟೋನಿ (ವಿಕ್ರಮ್ ರಾಮಯ್ಯ) ಗೆ ಪೊಲೀಸ್ ಕಮಿಷನರ್ ಈ ಕೇಸ್ ಅನ್ನ ತನಿಖೆ ಮಾಡಲು ಒಪ್ಪಿಸುತ್ತಾರೆ.
ಹಂತಂತವಾಗಿ ವಿಚಾರಣೆ ನಡೆಸುತ್ತಾ ಹೋದಾಗ ಒಂದೊಂದು ಸತ್ಯ ಹೊರ ಬರುತ್ತಾ ಹೋಗುತ್ತದೆ. ವಯಸ್ಸಾದ ಕಾಲದಲ್ಲಿ ಆಸರೆಗಾಗಿ ಭೂಷಣ್ ವರ್ಮ ಸುಂದರವಾದ ಮಯೂರಿ ಯನ್ನು ಮದುವೆ ಆಗುತ್ತಾನೆ. ಬಹಳಷ್ಟು ಕನಸನ್ನು ಹೊಂದಿರುವ ಮಯೂರಿಗೆ ಬದುಕಿನಲ್ಲಿ ಆತಂಕ ಹೆಚ್ಚಾಗಿ ಒಂದು ಕ್ಷಣದಲ್ಲಿ ಇದ್ದಂತಹ ಮನಸ್ಥಿತಿ ಮತ್ತೊಮ್ಮೆ ಇರದ ತನ್ನ ಗಂಡನ ಜೊತೆ ಜೀವನ ಸಾಗಿಸುವುದೇ ಕಷ್ಟವಾಗುತ್ತೆ. ಇದೆಲ್ಲದಕ್ಕೂ ಒಂದು ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಇನ್ನು ಇನ್ವೆಸ್ಟಿಗೇಷನ್ ಹಾದಿಯಲ್ಲಿ ಸಾಗುತ್ತಾ? ಪೊಲೀಸ್ರಿಗೆ ಒಂದು ಹೆಣ್ಣಿನ ಶವ ಸಿಗುತ್ತದೆ. ಅದರ ಮೂಲ ಹುಡುಕುತ್ತಾ ಹೋದಾಗ ವಿದೇಶ ಪ್ರಜೆಯ ಸುಳಿವು ಸಿಗುತ್ತದೆ. ಒಂದೊಂದೇ ಘಟನೆಗಳು ಎದುರಾಗಿ ಬೇರೆಯದೆ ದಿಕ್ಕನ್ನ ತೋರಿಸುತ್ತಾ ಕ್ಲೈಮಾಕ್ಸ್ ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ. ಸುತ್ತಿರುವ ಹೆಣ್ಣು ಯಾರು… ಮಯೂರಿ ವರ್ಮಾ ಏನಾದಳು…
ಭೂಷಣ್ ವ್ಯಕ್ತಿತ್ವ ಎಂತದ್ದು…
ಇನ್ವೆಸ್ಟಿಗೇಷನ್ ಮೂಲಕ ಸಿಗುವ ಸತ್ಯ ಏನು… ಎಂಬುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಇನ್ನು ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಕುತೂಹಲಕಾರಿಯಾಗಿ ತೆರೆಯ ಮೇಲೆ ಬಂದಿದೆ. ಸರಿಯಾದ ಸಮಯಕ್ಕೆ ಮದುವೆಯ ಅಗತ್ಯತೆ ಹಾಗೂ ಸಂಬಂಧದಲ್ಲಿ ಅನುಮಾನ ಎದುರಾದರೆ ಆಗುವ ಅನಾಹುತದ ಜೊತೆ ಮನಸ್ಸಿನ ಮೇಲೆ ಬೀರುವ ಪರಿಣಾಮ , ವಿಭಜಿತ ವ್ಯಕ್ತಿತ್ವದ ನಡುವಳಿಕೆ ಪರಿಣಾಮ ಏನಾಗುತ್ತದೆ ಎಂಬುವುದನ್ನು ರೋಚಕವಾಗಿ ಹೇಳಿದ್ದು , ಇನ್ನಷ್ಟು ಸೂಕ್ಷ್ಮತೆಯಾಗಿ ಚಿತ್ರ ಮಾಡಬಹುದಿತ್ತು. ಬೆರಳೆಣಿಕೆಯ ಪಾತ್ರಗಳ ಮೂಲಕ ಗಮನ ಸೆಳೆಯುವಂತೆ ಚಿತ್ರ ಮಾಡಿದ್ದಾರೆ.

ಇನ್ನು ಚಿತ್ರದ ನಿರ್ಮಾಪಕ ಒಂದು ಪ್ರಮುಖ ಇನ್ವೆಸ್ಟಿಗೇಷನ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಅಂಗವಿಕಲನನಾಗಿ ಸಾವಿನ ರಹಸ್ಯವನ್ನು ಹುಡುಕುತ್ತಾ ಹೋಗುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಪ್ರಮುಖ ಪಾತ್ರಧಾರಿ ಸುಚೇಂದ್ರ ಪ್ರಸಾದ್ ಎಂದಿನಂತೆ ತಮ್ಮ ಕನ್ನಡದ ಸ್ಪಷ್ಟನುಡಿಯೊಂದಿಗೆ ತಮ್ಮ ಪಾತ್ರದಲ್ಲಿ ವಿಭಜಿತ ವ್ಯಕ್ತಿತ್ವದ ಪೋಷಣೆಗೆ ನ್ಯಾಯ ನೀಡಿದ್ದಾರೆ. ಅದೇ ರೀತಿ ನಟಿ ಸುಮನ್ ರಂಗನಾಥ್ ಕೂಡ ವಿಭಿನ್ನ ಶೇಡ್ ಮೂಲಕ ಪಾತ್ರದಲ್ಲಿ ಜೀವಿಸಿದ್ದಾರೆ.
ಉಳಿದ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆದಿದ್ದು , ಛಾಯಾಗ್ರಹಕರ ಕೈಚಳಕ ಉತ್ತಮವಾಗಿದೆ. ಒಟ್ಟಾರೆ ಮರ್ಡರ್ ಮಿಸ್ಟ್ರಿ , ಸಸ್ಪೆನ್ಸ್ ಪ್ರಿಯರಿಗೆ ಬಹಳ ಬೇಗ ಇಷ್ಟವಾಗುವ ಈ ಚಿತ್ರ 90 ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಬೆಸೆದುಕೊಂಡಿದ್ದು ಒಮ್ಮೆ ನೋಡುವಂತಿದೆ.