ಸಿದ್ದಗಂಗಾ ಮಠದಲ್ಲಿ ಮಕ್ಕಳೊಂದಿಗೆ “ಮದರ್‌ ಪ್ರಾಮಿಸ್”‌ ಸಿನಿಮಾದ ಓ ಬೆಳಕೆ ಬಾ ಬೆಳಕೆ ಹಾಡು ಬಿಡುಗಡೆ.

Spread the love

ಚಂದನವನದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆದ ಒಂದು ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಓ ಬೆಳಕೆ ಬಾ ಬೆಳಕೆ ಎಂದು ಮಕ್ಕಳ ಪ್ರಾರ್ಥನಾ ಗೀತೆ ಬರೆದ ಡಾಲಿ ಧನಂಜಯ ರವರ “ಮದರ್‌ ಪ್ರಾಮಿಸ್”‌ ಸಿನಿಮಾ ಓ ಬೆಳಕೆ ಬಾ ಬೆಳಕೆ ಹಾಡು ಬಿಡುಗಡೆ. ಮದರ್‌ ಪ್ರಾಮಿಸ್‌ ಇದು ಪಕ್ಕಾ ಕನ್ನಡದ ಪ್ಯಾನ್‌ ಎಮೋಷನಲ್‌ ಸಿನಿಮಾ. ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳೊಂದಿಗೆ ಮಕ್ಕಳಾದ ಮದರ್‌ ಪ್ರಾಮಿಸ್‌ ಚಿತ್ರತಂಡ.

ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು ಮತ್ತು ಕಂಟೆಂಟ್‌ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಸಿನಿಮಾ ಮದರ್‌ ಪ್ರಾಮಿಸ್‌ …ಡಾಲಿ ಧನಂಜಯ ನಿರ್ಮಿಸಿ ನಟನೆ ಮಾಡಿರೋ ಮದರ್‌ ಪ್ರಾಮಿಸ್‌ ಸಿನಿಮಾ ಮತ್ತೊಂದು ಹಾಡು ಬಿಡುಗಡೆ ಆಗಿದೆ…ಈಗಾಗಲೇ ಪ್ರೇಮಗೀತೆ, ಹಳ್ಳಿ ಸೊಗಡಿನ ಗೀತೆಗಳನ್ನ ಬರೆದಿರುವ ಡಾಲಿ ಮೊದಲ ಬಾರಿಗೆ ಮಕ್ಕಳ ಪ್ರಾರ್ಥನಾ ಗೀತೆಯನ್ನ ರಚಿಸಿದ್ದಾರೆ. ಡಾಲಿ ಬರೆದಿರುವ ಓ ಬೆಳಕೆ ಬಾ ಬೆಳಕೆ ಹಾಡು ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯಾಗಿದ್ದು, ಸಂಪೂರ್ಣ ಹಾಡನ್ನ ತುಮಕೂರಿನ ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳ ಜೊತೆ ಚಿತ್ರೀಕರಣ ಮಾಡಲಾಗಿದೆ…ಮಕ್ಕಳ ಜೊತೆಯಲ್ಲಿ ಮದರ್‌ ಪ್ರಾಮಿಸ್‌ ಸಿನಿಮಾತಂಡವೂ ಸೇರಿ ದಿನ ಪೂರ್ತಿ ಮಠದ ಅಂಗಳ , ಶಾಲೆ , ಅಡುಗೆ ಕೋಣೆ ಹೀಗೆ ಪ್ರತಿ ಸ್ಥಳದಲ್ಲಿಯೂ ಸಮಯ ಕಳೆದು ಈ ಹಾಡನ್ನ ಚಿತ್ರೀಕರಿಸಿದ್ದಾರೆ.

ಸದಾ ಕಮರ್ಷಿಯಲ್‌ , ರೊಮ್ಯಾಂಟಿಕ್‌ ಹಾಡುಗಳ ಮಧ್ಯೆ ಇಂಥದೊಂದು ಪ್ರಾರ್ಥನಾ ಗೀತೆ ಕೇಳಿ ಸಿನಿಮಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ…ಇನ್ನು ಮದರ್‌ ಪ್ರಾಮಿಸ್‌ ಸಿನಿಮಾವನ್ನ ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಗೆಳೆಯ ಹರ್ಷ ನಿರ್ಮಾಣ ಮಾಡಿದ್ದಾರೆ.
ಮದರ್‌ ಪ್ರಾಮಿಸ್‌ ಅನ್ನೋದೇ ಎಮೋಷನಲ್‌..ಈ ಟೈಟಲ್‌ ಇಟ್ಕೊಂಡು ಎಮೋಷನಲ್‌, ಕಾಮಿಡಿ ಹಾಗೂ ಥ್ರಿಲ್ ಇರೋ ಕಥೆಯನ್ನ ತೆರೆ ಮೇಲೆ ತರ್ತಿದ್ದಾರೆ ನಿರ್ದೇಶಕ ಪೂರ್ಣ ..ಚಿತ್ರದಲ್ಲಿ ಡಾಲಿ ಧನಂಜಯ ಸೇರಿದಂತೆ ನಾಗಭೂಷಣ್‌ , ವಿನಯಪ್ರಸಾದ್‌ , ಗೀತಾ, ಗುರುದತ್‌ ಇವರ ಜೊತೆಯಲ್ಲಿ ಬಹುದೊಡ್ಡ ಹೊಸ ಕಲಾವಿದರ ದಂಡೇ ಸಿನಿಮಾದಲ್ಲಿದೆ.

ಇನ್ನು ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ..ನಿರ್ದೇಶನದ ಜವಾಬ್ದಾರಿ ಪೂರ್ಣ ವಹಿಸಿಕೊಂಡಿದ್ರೆ ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾ ನಿರ್ದೇಶಕ ಶಶಾಂಕ್‌ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ..ರಾಹುಲ್‌ ರಾಯ್‌ ಕ್ಯಾಮೆರಾ, ನವನೀತ್‌ ಶ್ಯಾಮ್‌ ಸಂಗೀತಾ ನಿರ್ದೇಶನ ಸಿನಿಮಾಗಿದೆ..ಬ್ಯಾಕ್‌ ಟು ಬ್ಯಾಕ್‌ ಇಂಟ್ರೆಸ್ಟಿಂಗ್‌ ಕಂಟೆಂಟ್‌ ಮೂಲಕ ನಿರೀಕ್ಷೆ ಹುಟ್ಟುಹಾಕಿರೋ ಮದರ್‌ ಪ್ರಾಮಿಸ್‌ ಸಿನಿಮಾ ಜುಲೈ ೧೦ ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.

Visited 1 times, 1 visit(s) today
error: Content is protected !!