ಸೋನುಶ್ರಿನಿವಾಸ್ ಗೌಡ ಹೆಜ್ಜೆ ಹಾಕಿರೋ ‘ಕೇಕೆ’ ಚಿತ್ರದ ಗುಂಟೂರು ಅಮ್ಮಾಯಿ ಹಾಡು ಬಿಡುಗಡೆ
ಕೇಕೆ… ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದಿಲ್ಲದೇ ಸೆಟ್ಟೇರಿ ರಿಲೀಸ್ ಹತ್ತಿರಕ್ಕೆ ಬಂದಿರೋ ಸಿನಿಮಾ.. ಈ ಚಿತ್ರದ ವಿಶೇಷ ಐಟಂ ಹಾಡನ್ನ ಇಂದು ಕಲಾವಿದರ ಸಂಘದಲ್ಲಿ ಲೋಕಾರ್ಪಣೆ ಮಾಡಲಾಯ್ತು. ಕೇಕೆ.. ಚಿತ್ರವನ್ನ ಸೋಮಶೇಖರ್ ಜಿ.ಕೆ ನಿರ್ದೇಶಿಸಿದ್ದು, ಬಹುತೇಖ ಹೊಸ ಕಲಾವಿದರೇ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಮಾಲಿ ನಾಯ್ಕ್ ಮತ್ತು ಕಲ್ಯಾಣ್ ಅನ್ನೋ ಬಳ್ಳಾರಿ ಹೊಸಪೇಟೆಯವ್ರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..ಭರತ್ ಇಂಡಿಯಾ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೇಕೆ ಚಿತ್ರಕ್ಕೆ ಉಪೇಂದ್ರ ಐ ಲವ್ ಯೂ ಚಿತ್ರ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ.ಈಗ ಬಿಡುಗಡೆಯಾಗಿರೋ ಗುಂಟೂರು ಅಮ್ಮಾಯಿ ಹಾಡಿಗೆ ಸಂಗೀತದ ಜೊತೆ ಖುದ್ದು ಕಿರಣ್ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಧನಿಯಾಗಿದ್ದಾರೆ.
ಆಲಾಪಾನ ಆಡಿಯೋ ಮೂಲಕ ಈ ಹಾಡನ್ನ ರಿಲೀಸ್ ಮಾಡಲಾಗಿದೆ. ಆಲಾಪಾನ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡಿಗ ನೋಡಲು ಲಭ್ಯವಿದೆ.ಗುಂಟೂರು ಅಮ್ಮಾಯಿ… ಹಾಟು ಘಾಟು ಬೀಟ್ಸ್ ಇರೋ ತೆಲುಗು ಮಿಶ್ರೀತ ಕನ್ನಡ ಹಾಡು… ಕೇಳೋದಕ್ಕೆ ರಸವತ್ತಾಗಿರೋ ಈ ಹಾಡು ನೋಡದಕ್ಕೂ ಅಷ್ಟೇ ರಂಗಾಗಿ ಮೂಡಿ ಬಂದಿದೆ… ಸೋಷಿಯಲ್ ಮಿಡಿಯಾದಲ್ಲಿ ಹಲವು ವಿಚಾರಗಳಿಗೆ ವೈರಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ಹಾಡಿಗೆ ಹೆಜ್ಜೆ ಹಾಕಿರೋದು ವಿಶೇಷ. ಈ ಹಾಡು ನೋಡಿದ ಮೇಲೆ ಪತ್ರಿಕಾಗೋಷ್ಠಿಯಲ್ಲಿ… ಕನ್ನಡ ಚಿತ್ರದಲ್ಲಿ ಯಾಕೆ ತೆಲುಗು ಸಾಹಿತ್ಯದ ಹಾಡಿಗೆ ಪತ್ರಕರ್ತರಿಗೂ ಚಿತ್ರತಂಡ ಕೆಲ ಹೊತ್ತು ವಾಗ್ವಾದ ಏರ್ಪಟ್ಟಿತ್ತು.. ನಂತರ ಸಾಧ್ಯವಾದಲ್ಲಿ ತಿದ್ದಿಕೊಳ್ಳುವುದಾಗಿ , ಸಂಗೀತ ನಿರ್ದೇಶಕ ಕಿರಣ್ ಹೇಳಿದ್ರು.
ಇದೇ ಮೊದಲ ಬಾರಿಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿರೋ ಸೋನುಶ್ರೀನಿವಾಸ್ ಗೌಡ ಮೊದಲ ಚಿತ್ರದ ಅನುಭವವನ್ನ ಬಿಚ್ಚಿಟ್ಟು , ಈ ಅವಕಾಶಕ್ಕೆ ಆಭಾರಿಯಾಗಿದ್ದು, ಪ್ರೇಕ್ಷಕರ ಆಶೀರ್ವಾದ ಬೇಕೆಂದು ಹೇಳಿದ್ರು. ಅಂದ್ಹಾಗೆ ಗುಂಟೂರು ಅಮ್ಮಾಯಿ ಹಾಡಿನ ಬಿಡುಗಡೆಯ ಜೊತೆಗೆ ಸೋನು ಹುಟ್ಟುಹಬ್ಬವನ್ನೂ ಚಿತ್ರತಂಡ ಆಚರಿಸಿದ್ದು ವಿಶೇಷ. ಕೇಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದ್ದು, ಸದ್ಯದಲ್ಲೇ ಚಿತ್ರದ ಇನ್ನಿತರ ವಿಚಾರಗಳನ್ನ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿತು.
