“ಹಿಂದಿಯಲ್ಲೂ “ಕ್ಯಾಲೆಂಡರ್” ಚಿತ್ರ ಬಿಡುಗಡೆ

Spread the love

ಆದರ್ಶ ಗುಂಡುರಾಜ್ ಅಭಿನಯದ “ಕ್ಯಾಲೆಂಡರ್” ಚಿತ್ರ ಕನ್ನಡದಲ್ಲಿ ಏಪ್ರಿಲ್ ಮೊದಲವಾರದಲ್ಲಿ ಬಿಡುಗಡೆಯಾಗಿ ನೋಡುಗರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಈಗ ಈ ಚಿತ್ರ ಏಪ್ರಿಲ್ 24 ರಂದು ಹಿಂದಿ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆದರ್ಶ ಗುಂಡುರಾಜ್ ಹಾಗೂ ಚಿತ್ರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಏಪ್ರಿಲ್ 6 ರಂದು ನಮ್ಮ “ಕ್ಯಾಲೆಂಡರ್” ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಮಹಿಳಾ ಪ್ರಧಾನ ಈ ಚಿತ್ರದ ಕಂಟೆಂಟ್ ಎಲ್ಲರಿಗೂ ಇಷ್ಟವಾಯಿತು. ಈಗಲೂ ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗುತ್ತಿದೆ. ಹೆಸರಾಂತ ವಿ.ಕೆ ಫಿಲಂಸ್ (ಹೊಂಬಾಳೆ) ಸಂಸ್ಥೆ ನಮ್ಮ ಚಿತ್ರವನ್ನು ವಿತರಣೆ ಮಾಡಿತ್ತು. ಒಂದೊಳ್ಳೆ ಸಂದೇಶವಿರುವ ಚಿತ್ರ.

ನೋಡದೆ ಇರುವವರು ಈಗಲೂ ನಮ್ಮ ಚಿತ್ರ ಚಿತ್ರಮಂದಿರಗಳಲ್ಲಿದೆ. ನೋಡಿ. ಓಟಿಟಿ ಹಾಗೂ ವಾಹಿನಿ ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ. ಅದಕ್ಕೂ ಮುನ್ನ ಇದೊಂದು ಯುನಿವರ್ಸಲ್ ಸಬ್ಜೆಕ್ಟ್ ಆಗಿರುವುದರಿಂದ ಏಪ್ರಿಲ್ 24 ರಂದು ಹಿಂದಿಯಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ.‌

ಬೆಂಗಳೂರು, ಮುಂಬೈ ಮುಂತಾದ ಕಡೆ ಮಲ್ಟಿಪ್ಲೆಕ್ಸ್ ಗಳಲ್ಲಿ ಹಿಂದಿ ಅವತರಣಿಕೆ ಬಿಡುಗಡೆಯಾಗಲಿದೆ. ಈಗಾಗಲೇ ಹಿಂದಿ ಟ್ರೇಲರ್ ಬಿಡುಗಡೆಯಾಗಿದ್ದು, ಜನಪ್ರಿಯವಾಗುತ್ತಿದೆ. ಸದ್ಯದಲ್ಲೇ ವಿದೇಶದಲ್ಲೂ ಸಹ ಈ ಚಿತ್ರವನ್ನು ರಿಲೀಸ್ ಮಾಡುವ ಸಿದ್ದತೆ ನಡೆಯುತ್ತಿದೆ. ಚಿತ್ರ ಆರಂಭದಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹ ಮುಂದೆಯೂ ಹೀಗೆ ಇರಲಿ ಎಂದರು ನಟ , ನಿರ್ಮಾಪಕ ಆದರ್ಶ ಗುಂಡುರಾಜ್. ನಿರ್ದೇಶಕ ನವೀನ್ ಶಕ್ತಿ, ಸಹ ನಿರ್ಮಾಪಕ ಮತ್ತು ನಟ ಶಿವಪ್ರದೀಪ್ ಹಾಗೂ ಸಹ ನಿರ್ದೇಶಕ ಮಹಾಂತೇಶ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Visited 1 times, 1 visit(s) today
error: Content is protected !!