Cini NewsSandalwood

ಅನೂಪ್ ರೇವಣ್ಣನಟನೆಯ “ಕನಕರಾಜ”ನ ಸಂಚಾರ

Spread the love

ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ಅವರು ನಿರ್ಮಿಸುತ್ತಿರುವ, ಡಾ||ವಿ.ನಾಗೇಂದ್ರಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನು ಮಾಡುತ್ತಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ “ಕನಕರಾಜ” ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಳಗಾವಿ, ಗೋಕಾಕ್ ಮುಂತಾದ ಕಡೆ ಬಿರುಸಿನಿಂದ ಸಾಗಿದೆ.

ಹದಿನೈದು ದಿನಗಳ ಕಾಲ ಮಾತಿನ ಭಾಗ, ಸಾಹಸ ಸನ್ನಿವೇಶಗಳು ಹಾಗೂ ಹಾಡುಗಳ ಚಿತ್ರೀಕರಣ ನಡೆಯಲಿದೆ‌. ನಾಯಕ ಅನೂಪ್ ರೇವಣ್ಣ, ನಾಯಕಿ ನಿಮಿಷ, ಖಳನಟ ಮಂಜುನಾಥ್ ಅರಸ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮೊದಲ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

“ಕನಕರಾಜ” ಇದು ಮುಖ್ಯಮಂತ್ರಿಗಳ ಅಭಿಮಾನಿಯ ಕಥೆ. “FAN OF CM” ಎಂಬ ಅಡಿಬರಹ ಕೂಡ ಇದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಕೆ‌.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿದೆ‌. ಅನೂಪ್ ರೇವಣ್ಣ, ನಿಮಿಷ, ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ, ಗಿರೀಶ್ ಜತ್ತಿ, ಯಮುನಾ ಶ್ರೀನಿಧಿ, ಮಂಜುನಾಥ್ ಅರಸ್, ಮಿಮಿಕ್ರಿ ಗೋಪಿ ಮುಂತಾದವರು “ಕನಕರಾಜ” ಚಿತ್ರದ ತಾರಾಬಳಗದಲ್ಲಿದ್ದಾರೆ.

Visited 1 times, 1 visit(s) today
error: Content is protected !!