“ಆಲ್ಫಾ #MEN LOVE VENGEANCE ಚಿತ್ರದ ಟ್ರೇಲರ್ ಅನಾವರಣ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ
L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ್ ಕುಮಾರ್ ನಿರ್ಮಾಣದ, ವಿಜಯ್ ನಿರ್ದೇಶನದ ಹಾಗೂ ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸಿರುವ “ಆಲ್ಫಾ #MEN LOVE VENGEANCE* ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಓರಾಯನ್ ಮಾಲ್ ಲೇಕ್ ಸೈಡ್ ನಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಹಾಗೂ ಚಿತ್ರತಂಡದವರ ಉಪಸ್ಥಿತಿಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಟ್ರೇಲರ್ ಅನಾವರಣ ಮಾಡಿದರು. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟ್ರೇಲರ್ ಅನಾವರಣದ ನಂತರ ಅತಿಥಿಗಳಾಗಿ ಆಗಮಿಸಿದ ಶ್ರೀಮುರಳಿ ಹಾಗೂ ಚಿತ್ರತಂಡದವರು ಮಾತನಾಡಿದರು.
ಟ್ರೇಲರ್ ಬಿಡುಗಡೆ ಮಾತನಾಡಿದ ನಟ ಶ್ರೀಮುರಳಿ, “ಆಲ್ಫಾ” ಹೇಮಂತ್ ಕುಮಾರ್ ಅವರ ಅಭಿನಯದ ಮೊದಲ ಚಿತ್ರ. ಟ್ರೇಲರ್ ನೋಡಿದಾಗ ಹೇಮಂತ್ ಅವರು ಚೊಚ್ಚಲ ಚಿತ್ರಕ್ಕೆ ಅಗಿರುವ ತಯಾರಿ ಕಂಡು ಸಂತೋಷವಾಯಿತು ಮತ್ತು ಇಡೀ ತಂಡದ ಶ್ರಮ ಟ್ರೇಲರ್ ನಲ್ಲಿ ಕಾಣುತ್ತಿದೆ. ಸಿನಿಮಾ ಕೂಡ ಚೆನ್ನಾಗಿ ಮೂಡಿಬಂದಿರುವ ಭರವಸೆ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ನಾನು ಶ್ರೀಮುರಳಿ ಅವರ ದೊಡ್ಡ ಅಭಿಮಾನಿ. ನಾನು ನಾಯಾಕನಾಗಲೂ ಅವರ ನಟನೆಯ ಉಗ್ರಂ ಸೇರಿದಂತೆ ಹಲವು ಚಿತ್ರಗಳೆ ಸ್ಪೂರ್ತಿ. ನಾನು ಬಹಳ ಇಷ್ಟಪಡುವ ಶ್ರೀಮುರಳಿ ಅವರಿಂದಲೇ ನನ್ನ ಮೊದಲ ಸಿನಿಮಾದ ಟ್ರೇಲರ್ ಅನಾವರಣವಾಗಿದ್ದು ಬಹಳ ಖುಷಿಯಾಗಿದೆ. ಶ್ರೀಮುರಳಿ ಅವರಿಗೆ ನನ್ನ ಅನಂತ ಧನ್ಯವಾದ. ಇನ್ನೂ, ನಾಯಕನಾಗಬೇಕೆಂಬುದು ನನಗೆ ಮೊದಲಿನಿಂದಲೂ ಆಸೆ. ಅದು ಈಗ ಈಡೇರಿದೆ. ಆದರೆ ನಾನು ನಾಯಕನಾಗಿ ನಟಿಸಲು ಬೇಕಾದ ಪೂರ್ವ ತಯಾರಿಗಳನ್ನೆಲ್ಲಾ ಮಾಡಿಕೊಂಡೆ ಅಭಿನಯಿಸಲು ಆರಂಭ ಮಾಡಿದ್ದು.
ನಿರ್ದೇಶಕ ವಿಜಯ್ ಅವರು ಸೇರಿದಂತೆ ಚಿತ್ರತಂಡದ ಸಹಕಾರ ಅಪಾರ. ಅಚ್ಯುತಕುಮಾರ್, ಅವಿನಾಶ್ ಅವರಂತಹ ಹಿರಿಯ ನಟರ ಜೊತೆಗೆ ನಟಿಸಿದ್ದು ಸಂತಸವಾಗಿದೆ. ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ಚಿತ್ರ ಫೆಬ್ರವರಿ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಾಯಕ ನಟ ಹೇಮಂತ್ ಕುಮಾರ್ ಹೇಳಿದರು.
ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶ್ರೀಮುರಳಿ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ದೇಶಕ ವಿಜಯ್, ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರನ್ನು ತಲುಪಿರುವ ನಮ್ಮ ಚಿತ್ರ ಫೆಬ್ರವರಿ 20 ರಂದು ತೆರೆಗೆ ಬರುತ್ತಿದೆ. ಎಲ್ಲರು ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು.
ವಿಜಯ್ ಅವರು ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ನಟಿಸಿದ್ದೇನೆ ಎಂದರು “ಬಿಗ್ ಬಾಸ್” ಖ್ಯಾತಿಯ ಕಾರ್ತಿಕ್ ಮಹೇಶ್.
ನಾಯಕಿಯರಾದ ಆಯನಾ, ಗೋಪಿಕ ಸುರೇಶ್, ಕಲಾವಿದರಾದ ಅವಿನಾಶ್, ಅಚ್ಯುತಕುಮಾರ್, ವಿನಯ್ ಬಿದ್ದಪ್ಪ, ಗಿರಿರಾಜ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕ ವ್ಯಾಸರಾಜ್ ಸೋಸಲೆ, ನೃತ್ಯ ನಿರ್ದೇಶಕ ಭೂಷಣ್, ಕಲಾ ನಿರ್ದೇಶಕ ಅಮರ್ ಹಾಗೂ ಸಂಭಾಷಣೆ ಬರೆದಿರುವ ಮಾಸ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
