ತಾರತಮ್ಯ, ಆದ್ಯತೆ ಮಕ್ಕಳ ಮೇಲೆ ಬೀರುವ ಪರಿಣಾಮದ ಕಥೆ : ‘ವಲವಾರ’ ಚಿತ್ರವಿಮರ್ಶೆ (ರೇಟಿಂಗ್ : 4.5/5)
ರೇಟಿಂಗ್ : 4.5/5
ಚಿತ್ರ : ವಲವಾರ
ನಿರ್ದೇಶಕ : ಸುತನ್ ಗೌಡ
ನಿರ್ಮಾಪಕರು : ಜಿ ಗಿರಿಧರ್ ಅನಿರುದ್ ಗೌತಮ್
ಸಂಗೀತ : ಕದ್ರಿ ಮಣಿಕಾಂತ್
ಛಾಯಾಗ್ರಹಣ : ಬಾಲರಾಜ್
ತಾರಾಗಣ : ಮಾ .ವೇದಿಕ್ ಕೌಶಲ್, ಮಾ. ಶಯನ್, ಮಾಲತೇಶ್, ಹರ್ಷಿತಾ ಗೌಡ, ಅಭಯ್ ಹಾಗೂ ಮುಂತಾದವರು…
ಬೈದಿ , ಬುದ್ದಿ ಹೇಳೋರು ಬದುಕಿಗಾಗಿ… ಹೊಗಳಿ ಖುಷಿಪಡಿಸುವುರೂ ನಾಶಕ್ಕಾಗಿ ಎಂಬ ಹಿರಿಕರ ಮಾತಿನಂತೆ. ಜೀವನದಲ್ಲಿ ಆವೇಶ , ಕೋಪ , ಆತುರದಿಂದ ಯಾವ ಕೆಲಸವೂ ಕೈಗೊಳ್ಳುವುದಿಲ್ಲ , ತಾಳ್ಮೆ , ಆಲೋಚನೆ ಬದುಕಿಗೆ ದಾರಿ ತೋರುತ್ತದೆ ಎಂಬ ಸೂಕ್ಷ್ಮತೆಯ ಜೊತೆಗೆ ಬಡ ಕುಟುಂಬದ ಜೀವನ , ಅಣ್ಣ ತಮ್ಮಂದಿರ ಒಡನಾಟ , ಸಣ್ಣ ತಪ್ಪಿನ ಎಡವಟ್ಟು , ಬದುಕಿನ ಪಾಠದ ಗುಟ್ಟಾಗಿ , ಒಂದು ಅರ್ಥಪೂರ್ಣ ನಮ್ಮ ನೆಲ ಮೂಲದ ಕಥೆಯಾಗಿ ಬಂದಿರುವಂತಹ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇಬೇಕಾದಂತಹ ಅಂಶದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ವಲವಾರ”. ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ಚಿನ್ನಹಳ್ಳಿ ಎಂಬ ಊರು, ತನದೊಂದು ಪುಟ್ಟ ಮನೆಯಲ್ಲಿ ಕೊಂಚ ಜಮೀನಿನ ಆಸರೆಯಲ್ಲಿ ಬದುಕು ಕಟ್ಟಿಕೊಂಡಿರುವ ಬಡಕುಟುಂಬದ ಯಜಮಾನ (ಮಾಲತೇಶ್) ಆತನ ಪತ್ನಿ (ಹರ್ಷಿತ ಗೌಡ) ಇಬ್ಬರು ಮುದ್ದಾದ ಮಕ್ಕಳು ಕುಂಡೆಶಿ (ಮಾಸ್ಟರ್ ವೇದಿಕ್ ಕೌಶಲ್) , ಕಸೂಡಿ (ಮಾಸ್ಟರ್ ಶಯನ್).
ಇಬ್ಬರು ಮಕ್ಕಳಿಗೂ ಕ್ರಿಕೆಟ್ ಎಂದರೆ ಅತೀವ ಪ್ರೀತಿ , ತಂದೆಗೆ ಚಿಕ್ಕ ಮಗನ ಬಗೆ ಹೆಚ್ಚು ಮೌನವಿದ್ದರೂ , ದೊಡ್ಡ ಮಗನನ್ನ ಬೈದು ಎಚ್ಚರಿಸುವುದೇ ಕೆಲಸ. ತಾಯಿಗೆ ಮಕ್ಕಳು ಎರಡು ಕಣ್ಣು ಇದಂತೆ , ಆದರೂ ದೊಡ್ಡ ಮಗನ ಬಗ್ಗೆ ಕಾಳಜಿ ಹೆಚ್ಚು. ಜಮೀನಿನ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವ ತಂದೆ , ಮನೆ ಕೆಲಸದ ಒತ್ತಡದಲ್ಲಿ ಮುಳುಗುವ ತಾಯಿ , ಇದರ ನಡುವೆ ಮದ್ದಾದ ಗೌರ (ಹಸು) ಕರುವಿಗೆ ಜನ್ಮ ನೀಡುವ ಸ್ಥಿತಿಯಲ್ಲಿ ಇರುತ್ತಾಳೆ.
ಅದನ್ನು ಪರಿಸರದ ನಡುವೆ ನೋಡಿಕೊಳ್ಳಲು ಮಕ್ಕಳಿಬ್ಬರು ಹಠ ಮಾಡಿ ಕರೆದು ಹೋಗಿರುತ್ತಾರೆ. ಆದರೆ ಗೌರ ನಾಪತ್ತೆಯಾಗಿ ಬೇರೆ ಹೊಲದ ಮೇವು ತಿಂದು ದನದ ಕೊಟ್ಟಿಗೆಗೆ ಸೇರುತ್ತದೆ. ದಂಡದರು ರೂಪದಲ್ಲಿ ಹಣಕೊಟ್ಟು ಬಿಡಿಸಿಕೊಳ್ಳಲು ಹೇಳಿದಾಗ ಕುಂಡೆಶಿಗೆ ಜೀವ ಭಯ ಎದುರಾಗುತ್ತದೆ. ಹಣ ಒದಗಿಸಿ ಗೌರವಳನ್ನು ಮನೆಗೆ ಕರೆದೊಯ್ಯಲು ಯದು ಕುಮಾರ (ಅಭಯ್) ಸಹಾಯ ಪಡುತ್ತಾನೆ. ಆದರೆ ಮುಂದೆ ಎದುರಾಗುವ ಒಂದೊಂದು ಘಟನೆಯು ಬಹಳ ಕುತೂಹಲಕಾರಿಯಾಗಿ ಸಾಗಿ ಒಂದು ಅರ್ಥಪೂರ್ಣ ಸಂದೇಶವನ್ನು ಕೂಡ ರವಾನಿಸುತ್ತದೆ. ಅದು ಏನು.. ಹೇಗೆ… ಎಂಬುದನ್ನು ತಿಳಿಯಬೇಕಾದರೆ ಎಲ್ಲರೂ ಈ ಚಿತ್ರವನ್ನು ನೋಡಲೇಬೇಕು.
ನಿರ್ದೇಶಕ ಸುತನ್ ಗೌಡ ಹೇಳಿರುವಂತಹ ವಿಚಾರ ಬಹಳ ವಿಶೇಷವಾಗಿದ್ದು , ಒಂದು ಅರ್ಥಪೂರ್ಣ ಸಂದೇಶದ ಜೊತೆಗೆ ತಂದೆ ತಾಯಿಗಳ ಜವಾಬ್ದಾರಿ , ಮಕ್ಕಳ ಒಡನಾಟ , ತಾರತಮ್ಯದ ದೃಷ್ಟಿ , ಮಾನವೀಯತೆ , ಪ್ರೀತಿ , ಬದುಕಿನ ಮೌಲ್ಯ , ತಾಳ್ಮೆ , ಆಲೋಚನೆ ಹೀಗೆ ಹಲವು ಸೂಕ್ಷ್ಮ ವಿಚಾರವನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದು ತಾನೊಬ್ಬ ಪ್ರತಿಭಾವಂತ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು.
ಇಂತಹ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರಾದ ಗಿರಿಧರ್ ಜಯಕುಮಾರ್ , ಅನಿರುದ್ಧ ಗೌತಮ್ ಹಾಗೂ ಸ್ನೇಹಿತರ ಸಾಹಸವನ್ನು ಮೆಚ್ಚಲೇಬೇಕು, ಇದು ಪ್ರಶಸ್ತಿ ಪಡೆಯುವಂತ ಚಿತ್ರವಾಗಿದೆ. ಮಣಿಕಾಂತ್ ಕದ್ರಿ ಸಂಗೀತ ಹಾಗೂ ಬಾಲರಾಜ ಗೌಡ ಕ್ಯಾಮೆರಾ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮಪಟ್ಟಿದೆ. ಇಡೀ ಚಿತ್ರದ ಕೇಂದ್ರ ಬಿಂದು ಮಾಸ್ಟರ್ ವೇದಿಕ್ ಕೌಶಲ್ ಅಭಿನಯ ಅದ್ಭುತವಾಗಿದ್ದು , ಪಾತ್ರದಲ್ಲಿ ಜೀವಿಸಿದ್ದಾನೆ. ತನ್ನ ನಟನೆಗೆ ರಾಜ್ಯ ಪ್ರಶಸ್ತಿ ಪಡೆಯುವ ಅರ್ಹತೆಯನ್ನು ಹೊಂದಿದ್ದಾನೆ.
ಅದೇ ರೀತಿ ಮಾಸ್ಟರ್ ಶಯನ್ ಕೂಡ ತಮ್ಮನಾಗಿ ಬಹಳ ಸೊಗಸಾಗಿ ಅಭಿನಯಿಸಿ , ಮುದ್ದಾಗಿ ಎಲ್ಲರ ಗಮನ ಸಿಗುತ್ತಾರೆ ಇನ್ನು ತಂದೆಯಾಗಿ ಮಾಲ್ತೇಶ್ ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದು , ತಾಯಿಯಾಗಿ ಹರ್ಷಿತ ಗೌಡ ನೈಜಕ್ಕೆ ಪೂರಕವಾಗಿ ನಟಿಸಿದ್ದಾರೆ. ಇನ್ನು ಅಭಯ್ ಕೂಡ ಕಥೆಗೆ ಜೀವಾಳದ ಪಾತ್ರದಲ್ಲಿ ಮಿಂಚಿದ್ದು , ಉಳಿದ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದೆ. ಒಟ್ಟಾರೆ ಸಂದೇಶವಿರುವ ಈ ಚಿತ್ರವನ್ನು ಎಲ್ಲರೂ ನೋಡಬೇಕು.
