ಫೆಬ್ರುವರಿ 6ರಂದು 5 ಭಾಷೆಗಳಲ್ಲಿ “ಕರಿಕಾಡ” ಚಿತ್ರ ಬಿಡುಗಡೆ
ನಟ , ನಿರ್ಮಾಪಕ ಕಾಡ ನಟರಾಜ್ ಮಾತನಾಡುತ್ತಾ ಇದು ನನ್ನ ಚಿತ್ರ ಜೀವನದಲ್ಲಿ ಬಹಳ ಮಹತ್ವವಾದ ಸಿನಿಮಾ. ಈ ಚಿತ್ರ ಒಂದು ಗೆದ್ದರೆ ಸಾಲುಸಲಾಗಿ ಚಿತ್ರ ನಿರ್ಮಿಸುವ ಆಸೆ ಹೊಂದಿದ್ದೇವೆ. ಸುಮಾರು ನಾಲ್ಕು ವರ್ಷಗಳಿಂದ ನಾನು ಬಿಗ್ ಬ್ಯಾಸ್ಕೆಟ್ ಕಂಪನಿಯ ಕ್ವಿಕ್ ಹ್ಯಾಮರ್ಸ್ ನಲ್ಲಿ ಕೆಲಸ ಮಾಡ್ತಿದ್ದು , ಸಿನಿಮಾ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಆಸಕ್ತಿ. ಹಾಗಾಗಿ ನಮ್ಮ ರಿದ್ದಿ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಈ “ಕರಿಕಾಡ” ಚಿತ್ರವನ್ನು ನನ್ನ ಪತ್ನಿ ದೀಪ್ತಿ ದಾಮೋದರ್ ನಿರ್ಮಿಸುತ್ತಿದ್ದಾರೆ.
ನಾನು ನಟನಾಗಿ ಮಾತ್ರ ಅಭಿನಯಿಸುತ್ತಿದ್ದು , ನನ್ನ ಪುತ್ರಿ ರಿದ್ದಿ ನಟರಾಜ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾಳೆ. ನಮ್ಮಿಬ್ಬರ ಕಾಂಬಿನೇಷನ್ನು ತಂದೆ ಮಗಳ ಬಾಂದವ್ಯದ ಹಾಡು ಸದ್ಯದಲ್ಲೇ ಬಿಡುಗಡೆ ಮಾಡುತಿದ್ದೇವೆ. ನಾನು ಈ ಹಿಂದೆ 2018 ರಲ್ಲಿ ವರ್ಣಮಯ ಎಂಬ ಹಾರರ್ , ಥ್ರಿಲ್ಲರ್ ಚಿತ್ರವನ್ನ ಮಾಡಿದೆ.
ಇದು ನನ್ನ ಎರಡನೇ ಚಿತ್ರವಾಗಿದ್ದು , ಇದು ಸಂಪೂರ್ಣ ಮನೋರಂಜನೆಯ ಜೊತೆ ಅಡ್ವೆಂಚರಸ್ , ಪಕ್ಕ ಹಳ್ಳಿ ಸೊಗಡಿನ ಕಥೆಯನ್ನು ಬೆಸೆದುಕೊಂಡಿದೆ. ಚಿತ್ರದ ಚಿತ್ರೀಕರಣ ಆರಂಭಕ್ಕೂ ಮುನ್ನ 15 ದಿನಗಳ ಕಾಲ ತರಬೇತಿಯನ್ನು ಪಡೆದು ಸಿನಿಮಾ ಆರಂಭಿಸಿದ್ದೇವೆ. ಅದರಂತೆ ಚಿತ್ರವು ಕೂಡ ಅದ್ಭುತವಾಗಿ ಮೂಡಿಬಂದಿದ್ದು , ಚಿತ್ರದ ಬಗ್ಗೆ ನಾವು ಬಹಳಷ್ಟು ನಿರೀಕ್ಷೆ ಹೊಂದಿದ್ದು , ಕನ್ನಡ ಸೇರಿದಂತೆ ತಮಿಳು , ತೆಲುಗು , ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಫೆಬ್ರವರಿ 06ರಂದು ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಈಗಾಗಲೇ “ಕರಿಕಾಡ” ಚಿತ್ರ ತನ್ನ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಈ ಚಿತ್ರದಲ್ಲಿ ಒಟ್ಟು 6 ಫೈಟ್ ಗಳಿದ್ದು , 7 ವಿಭಿನ್ನ ಹಾಡುಗಳನ್ನು ಒಳಗೊಂಡಿದೆ. ಈ ಚಿತ್ರದ ಸಿಜಿ ವರ್ಕ್ ಬಹಳ ಚಾಲೆಂಜ್ ಆಗಿದ್ದು , ಹಂದಿ ಹಾಗೂ ಆನೆಯ ದೃಶ್ಯಗಳ ಗ್ರಾಫಿಕ್ಸ್ ಕೆಲಸ ಅದ್ಭುತವಾಗಿ 15 ನಿಮಿಷಗಳ ಕಾಲ ಮೂಡಿ ಬಂದಿದೆಯಂತೆ.
ಈಗಾಗಲೇ ಈ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಮುಂಬೈ ಮಾದಕ ಬೆಡಗಿ ಕೃತಿ ವರ್ಮಾ ಜೊತೆ ಹೆಜ್ಜೆ ಹಾಕಿರುವ ನಟ ಕಾಡ ನಟರಾಜ್ ಗೆ ಡ್ಯಾನ್ಸ್ ಹಾಗೂ ಫೈಟ್ ಎಂದರೆ ಬಹಳ ಇಷ್ಟವಂತೆ. ಹಾಗಾಗಿಯೇ ಈ ಚಿತ್ರದಲ್ಲಿ ಮೂರು ನಾಯಕಿಯರು ಅಭಿನಯಿಸಿದ್ದು, ಅದರಲ್ಲಿ ಒಬ್ಬ ನಾಯಕಿ
ನಿರೀಕ್ಷಾ ಶೆಟ್ಟಿಯನ್ನು ಪರಿಚಯಿಸಿದ್ದಾರೆ. ಇನ್ನು ಇಬ್ಬರನ್ನ ತೆರೆಯ ಮೇಲೆ ನೋಡಬೇಕಾಗಿದೆ. ಅದರಲ್ಲೂ ನಟ ಕಾಡ ನಟರಾಜ್ ಗೆ ಈ ಚಿತ್ರ ಬಹಳ ವಿಶೇಷವಾಗಿದ್ದು , ಅವರ ಸಿನಿ ಪಯಣದಲ್ಲಿ ಈ ಚಿತ್ರ ಒಂದು ಮೈಲಿಗೆಲ್ಲ ಆಗಲಿದೆ ಎಂಬ ಭರವಸೆಯನ್ನು ಹೊಂದಿದ್ದಾರೆ.
ಇದೊಂದು ಅಡ್ವೆಂಚರಸ್ ಜೊತೆಗೆ ಪಕ್ಕ ಹಳ್ಳಿ ಸೊಗಡಿನ ಸಿನಿಮಾ ಕಥೆಯನ್ನು ಒಳಗೊಂಡಿದ್ದು , ಒಂದು ಕಾಡಿನಲ್ಲಿ ನಡೆಯುವ ದ್ವೇಷ , ಪ್ರತಿಕಾರ , ಪ್ರೀತಿ ಸೇರಿದಂತೆ ಭಾವನೆಗಳ ಮಿಶ್ರಣದೊಂದಿಗೆ ಮನಮುಟ್ಟುವ ಕಥಾನಕವನ್ನು ಒಳಗೊಂಡಿದೆಯಂತೆ. ಇನ್ನು ಈ ಚಿತ್ರದಲ್ಲಿ ಕಾಡ ನಟರಾಜ್ ಗೆ ಜೋಡಿಯಾಗಿ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಈಗಾಗಲೇ ಸಿನಿಮಾದ ಹಾಡು ಕೇಳಿರುವ ಸಿನಿ ಪ್ರಿಯರು ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಯನ್ನು ಇಷ್ಟಪಟ್ಟಿದ್ದಾರೆ. ಒಂದು ವಿಭಿನ್ನ ಚಿತ್ರವನ್ನ ಅಷ್ಟೇ ಅಚ್ಚುಕಟ್ಟಾಗಿ ತೆರೆಯ ಮೇಲೆ ಗಿಲ್ಲಿ ವೆಂಕಟೇಶ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯಕ್ಕೆ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿದೆ. ಈ ಲಿಸ್ಟ್ ನಲ್ಲಿ ಕರಿಕಾಡ ಚಿತ್ರವೂ ಕೂಡ ಒಂದಾಗಿದ್ದು , ಕನ್ನಡ ಸೇರಿ ಹಿಂದಿ, ತೆಲುಗು, ತಮಿಳ್ ಮತ್ತು ಮಲಯಾಳಂ ನಲ್ಲಿ ಫೆಬ್ರವರಿ 6 ರಂದು ತೆರೆ ಕಾಣುತ್ತಿದೆ.
ಈ ಸಿನಿಮಾಗೆ ಅತೀಶಯ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆಯನ್ನು ಮಾಡಿದ್ದು, ಈಗಾಗಲೇ ಬಿಡುಗಡೆಯಾದ ‘ರತುನಿ ರತುನಿ’ ಮತ್ತು ‘ಕಬ್ಬಿನ್ ಜಲ್ಲೆ’ ಎನ್ನುವ ಎರಡು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಸಿನಿಮಾದ ಮೂರನೇ ಹಾಡು ‘ನೀ ಯಾರೇ ನನಗೆ ‘ ಜನವರಿ 28 ರಂದು ಬಿಡುಗಡೆಯಾಗಲು ಸಜ್ಜಾಗಿದೆ.
ಈ ಒಂದು ಚಿತ್ರದಲ್ಲಿ ಯಶ್ ಶೆಟ್ಟಿ , ಬಾಲ ರಾಜ್ವಾಡಿ, ವಿಜಯ್ ಚಂಡೂರ್, ವಿಪಿನ್ ಪ್ರಕಾಶ್ , ಬೇಬಿ ರಿದ್ಧಿ , ಹರ್ಷಿತ್ ಶಂಕರ್ ಸೇರಿದಂತೆ ಹಲವಾರು ಯುವ ಪ್ರತಿಭೆಗಳು ಅಭಿನಯಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ದೀಪಕ್ ಸಿಎಸ್ ಗೌಡ ಸಂಕಲನ ಹಾಗೂ ದಿವಾಕರ್ ಬಿಎಮ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಇಡೀ ಚಿತ್ರದ ಪ್ರಚಾರ ಕಾರ್ಯದಲ್ಲಿ ಪಿಆರ್ ಓ ಪ್ರವೀಣ್ ಏಕಾಂತ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು , ಫೆಬ್ರವರಿ 06ರಂದು ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ.
