Cini NewsSandalwoodTV Serial

ನಟ ಕೋಮಲ್‌  ಈಗ “ತೆನಾಲಿ ಡಿ LLB” ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ.

Spread the love

ನಟ ಕೋಮಲ್‌ ಹೊಸ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸಿನಿಮಾ ಆಯ್ಕೆ ವಿಚಾರದಲ್ಲಿ ಚ್ಯೂಸಿ ಆಗಿರೋ ಕೋಮಲ್‌ ಬಂದ ಸಿನಿಮಾವನ್ನೆಲ್ಲಾ ಆಯ್ಕೆ ಮಾಡಿಕೊಳ್ತಿಲ್ಲ… ಸಾಕಷ್ಟು ಕಥೆಗಳನ್ನು ಕೇಳಿ ವಿಭಿನ್ನ ಅನ್ನಿಸೋ ಕಥೆಗೆ ಮಾತ್ರ ಸಹಿ ಮಾಡುತ್ತಿದ್ದಾರೆ. ಅದೇ ಸಾಲಿನಲ್ಲಿ ಸದ್ಯ ನಿಂತಿರೋ ಸಿನಿಮಾನೇ ತೆನಾಲಿ ಡಿ ಎ ಎಲ್‌ ಎಲ್‌ ಬಿ  ತೆನಾಲಿ ಡಿ ಎ ಎಲ್‌ ಎಲ್‌ ಬಿ.. ಟೈಟಲೇ ಹೇಳುವ ಹಾಗೆ ನಟ ಕೋಮಲ್‌ ಕುಮಾರ್‌ ಇದರಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ…ಸದ್ಯ ಬಿಡುಗಡೆ ಆಗಿರುವ ಪೋಸ್ಟರ್‌ ನಲ್ಲಿಯೂ ಕೋಮಲ್‌ ಲಾಯರ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ… ತೆನಾಲಿ ಡಿ ಎ ಎಲ್‌ ಎಲ್‌ ಬಿ ಸಿನಿಮಾವನ್ನ ಸಿದ್ದ್ರುವ್‌ ಸಿದ್ದು ನಿರ್ದೇಶನ ಮಾಡುತ್ತಿದ್ದಾರೆ.

ಈ ಹಿಂದೆ ವಿಜಯರಾಘವೇಂದ್ರ ನಟನೆಯ ಮರೀಚಿ ಸಿನಿಮಾವನ್ನ ಸಿದ್ದ್ರುವ್‌ ಸಿದ್ದು ನಿರ್ದೇಶನ ಮಾಡಿದ್ದರು, ವಿಮರ್ಶಾತ್ಮಕವಾಗಿ ಆ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮರೀಚಿ ನಂತರ ಸಿದ್ದ್ರುವ್‌ ಸಿದ್ದು ಕೋಮಲ್‌ ಅವರಿಗಾಗಿ ವಿಭಿನ್ನವಾದ ಹಾಗೂ ಈಗಿನ ಕಾಲಘಟ್ಟಕ್ಕೆ ಸರಿಹೊಂದುವ ಕಥೆಯನ್ನು ಬರೆದುಕೊಂಡಿದ್ದಾರೆ…ಸದ್ಯ ಪೋಸ್ಟರ್‌ ಹಾಗೂ ಪ್ರಮೋಷನಲ್‌ ಕಂಟೆಂಟ್‌ ಬಿಡುಗಡೆ ಮಾಡಿರೋ ಸಿನಿಮಾತಂದ ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಲಾಯರ್‌ ಆಗಿ ಅಭಿನಯ ಮಾಡುತ್ತಿರೋ ಕೋಮಲ್‌ ತಮ್ಮ ನಿಜ ಜೀವನದಲ್ಲಿಯೂ ಎಲ್‌ ಎಲ್‌ ಬಿ ಓದಿದ್ದಾರೆ. ಅನೇಕ ವರ್ಷಗಳ ಬಳಿಕ ಈಗ ತೆರೆ ಮೇಲೆ ಲಾಯರ್‌ ಆಗಿ ಮಿಂಚಲಿದ್ದಾರೆ.

ತೆನಾಲಿ ಡಿ ಎ ಎಲ್‌ ಎಲ್‌ ಬಿ ಸಿನಿಮಾವನ್ನ ಸಿದ್ದ್ರುವ್‌ ಸಿದ್ದು ನಿರ್ದೇಶನ ಮಾಡುತ್ತಿದ್ದು ಕಥೆ ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ. ಚಿತ್ರಕ್ಕೆ ಸಿದ್ದ್ರುವ್‌ ಸಿದ್ದು, ಸಂತೋಷ್‌ ಮಾಯಪ್ಪ, ಪ್ರದೀಪ್‌ ಕುಮಾರ್‌ ಮಹಾಲಿಂಗಯ್ಯ, ರೇಣುಕಾ ಪ್ರಸಾದ್‌ ಬಂಡವಾಳ ಹಾಕಿದ್ದಾರೆ..ರಿತ್ವಿಕ್‌ ಮುರಳಿಧರನ್‌ ಸಂಗೀತಾ ನಿರ್ದೇಶನ ಮಾಡುತ್ತಿದ್ದು ಉದಯ್‌ ಲೀಲಾ ಕ್ಯಾಮೆರಾ ವರ್ಕ್‌ ಸಿನಿಮಾಗಿರಲಿದೆ. ಸದ್ಯ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ರಿವೀಲ್ ಮಾಡಲಿದೆ.

Visited 1 times, 1 visit(s) today
error: Content is protected !!