Cini NewsSandalwood

ಕ್ರಿಸ್ಮಸ್ ರೇಸ್‌ನಲ್ಲಿ ಗೆದ್ದ ‘ಮಾರ್ಕ್’

Spread the love

ಕಿಚ್ಚನ ಚಿತ್ರದ‌ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತಾ? ಕ್ರಿಸ್ಮಸ್ ಬ್ಲಾಕ್ ಬಸ್ಟರ್ ಆಗಿ ಹೊರ ಹೊಮ್ಮಿದ‌ ಮಾರ್ಕ್.. ಮೊದಲ ವಾರಾಂತ್ಯದಲ್ಲಿ ₹35 ಕೋಟಿ ಗಳಿಕೆ ಕಂಡ‌ ಕಿಚ್ಚನ ಸಿನಿಮಾ.

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಕ್ರಿಸ್‌ಮಸ್ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕ್ರಿಸ್ಮಸ್ ಗೆ‌ ಬಿಡುಗಡೆಯಾದ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಾರ್ಕ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ‌ ಕಮಾಯಿ ಮಾಡಿದೆ.

ಮಾರ್ಕ್ ಸಿನಿಮಾ ಮೊದಲ ವಾರಾಂತ್ಯದಲ್ಲಿಯೇ‌ 35ಕೋಟಿ ಗಳಿಕೆ ಮಾಡಿದೆ. ವೀಕೆಂಡ್ ನಲ್ಲಿ ಮಾತ್ರವಲ್ಲದೆ ಸೋಮವಾರವೂ ಕಿಚ್ಚನ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.‌

ಸಿನಿಮಾ ವಿಮರ್ಶಕರು ಹಾಗೂ ವಿತರಕರು ಮಾರ್ಕ್ ಸಿನಿಮಾವನ್ನು ಕಮರ್ಷಿಯಲ್ ಹಿಟ್ ಎಂದು ಶ್ಲಾಘಿಸಿದ್ದಾರೆ. ಹಿಂದಿ ಹಾಗೂ ಹಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ದೊಡ್ಡ ಮಟ್ಟದ ಗೆಲುವನ್ನು‌ ಕಿಚ್ಚನ ಸಿನಿಮಾ ಪಡೆದುಕೊಂಡಿದೆ.

ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು, ದಾವಣಗೆರೆ ಮತ್ತು ಚಾಮರಾಜನಗರದಾದ್ಯಂತದ ಹಲವಾರು ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳು ನಾಲ್ಕನೇ ದಿನವೂ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ.

ಕಿಚ್ಚನ ಸ್ವಾಗ್, ಸ್ಟೈಲು, ಆಟಿಟ್ಯೂಡ್ ಕಂಡು ಚಿತ್ರರಸಿಕರು ಫಿದಾ ಆಗಿದ್ದಾರೆ. ಮ್ಯಾಕ್ಸ್ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಬೆಳ್ಳಿಪರದೆ ಮೇಲೆ‌ ಮೋಡಿ‌ ಮಾಡಿದೆ.

Visited 1 times, 1 visit(s) today
error: Content is protected !!