Cini NewsMovie ReviewSandalwood

ಮಕ್ಕಳ ರಕ್ಷಣೆಗೆ ಮಾರ್ಕಂಡೇಯನ ಭರ್ಜರಿ ಪ್ಲಾನ್ : ‘ಮಾರ್ಕ್’ ಚಿತ್ರವಿಮರ್ಶೆ (ರೇಟಿಂಗ್ : 4 /5)

Spread the love

ರೇಟಿಂಗ್ : 4 /5

ಚಿತ್ರ : ಮಾರ್ಕ್
ನಿರ್ದೇಶಕ : ವಿಜಯ್ ಕಾರ್ತಿಕೇಯ
ನಿರ್ಮಾಪಕರು : ಸೆಂಧಿಲ್ ತ್ಯಾಗರಾಜನ್, ಅರುಣ್ ತ್ಯಾಗರಾಜನ್
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಶೇಖರ್ ಚಂದ್ರ
ತಾರಾಗಣ : ಸುದೀಪ್ , ನವೀನ್ ಚಂದ್ರ , ಯೋಗಿ ಬಾಬು ಗುರು ಸೋಮ ಸುಂದರಂ , ಡ್ರ್ಯಾಗನ್ ಮಂಜು, ಶೈನ್ ಟಾಮ್ ಚಕೋ, ರೋಹಿಣಿ ಪ್ರಕಾಶ್ , ಪ್ರತಾಪ್ ನಾರಾಯಣ್ , ಗೋಪಾಲಕೃಷ್ಣ ದೇಶಪಾಂಡೆ, ಮಾಲತೇಶ್ ಹಾಗೂ ಮುಂತಾದವರು…

ದಿನನಿತ್ಯ ಕೊಲೆ , ಸುಲಿಗೆ , ಅಪಹರಣದಂತಹ ನಿಗೂಢ ಜಾಲಗಳ ದುಷ್ಟ ವ್ಯಕ್ತಿಗಳ ಗ್ಯಾಂಗ್ ನ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದಕ್ಕೆ ಕೆಲವು ರಾಜಕೀಯ ಹಾಗೂ ಅಧಿಕಾರಿಗಳ ಕೈ ಕೂಡ ಸಾತ್ ಇದ್ದರಂತೂ ಮುಗಿದೆ ಹೋಯಿತು. ಇಂತದ್ದೇ ಒಂದಷ್ಟು ಮಕ್ಕಳ ಕಿಡ್ನಾಪ್ ಗ್ಯಾಂಗಿನ ಸುಳಿಯಲ್ಲಿ ಸಿಎಂ ಸ್ಥಾನದ ರಾಜಕೀಯದ ಚದುರಂಗದ ಆಟದ ನಡುವೆ ರೌಡಿಗಳ ಅಟ್ಟಹಾಸಕ್ಕೆ ತನ್ನದೇ ಸ್ಟೈಲಲ್ಲಿ ಉತ್ತರ ನೀಡುವ ಸಸ್ಪೆಂಡ್ ಪೊಲೀಸ್ ಅಧಿಕಾರಿ ಅಜಯ್ ಮಾರ್ಕಂಡಯ್ಯನ ಅಬ್ಬರದ ಪ್ಲಾನ್ ರೂಪವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಮಾರ್ಕ್”. ತನ್ನದೇ ಕೋಟೆ ಕಟ್ಟಿಕೊಂಡು ಅಬ್ಬರಿಸುವ ಭದ್ರ ಹಾಗೂ ಆತನ ಗ್ಯಾಂಗ್.

ಇನ್ನೂ ಪ್ರೀತಿಯ ಬಲೆಗೆ ಬಿದ್ದು ಮನೆಯಿಂದ ಎಸ್ಕೇಪ್ ಆಗಿರುವ ತನ್ನ ತಮ್ಮ ರುದ್ರನನ್ನು ಹುಡುಕಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ. ಮತ್ತೊಂದೆಡೆ ಸ್ವಂತ ಪಕ್ಷ ಕಟ್ಟಿದ ತಾಯಿಯನ್ನೇ ಮುಗಿಸಿ ಸಿಎಂ ಕುರ್ಚಿ ಮೇಲೆ ಕೂರಲು ಪ್ಲಾನ್ ಮಾಡುವ ಮಗ ಆದಿಕೇಶವನ ರಣತಂತ್ರ. ಇನ್ನು ಡ್ರಗ್ಸ್ ದಂಧೆಯ ರೂವಾರಿ ಸ್ಟೀಫನ್ ರಾಜ್ ಗ್ಯಾಂಗ್ ನ ಮಾಲ್ ಹಿಡಿದಿಡುವ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡುವ ರೌಡಿಗಳನ್ನು ತನ್ನದೇ ಸ್ಟೈಲಿನಲ್ಲಿ ಬಗ್ಗು ಬಡೆಯುವ ಮಾರ್ಕ್(ಸುದೀಪ್).

ಇದರ ನಡುವೆ ತನ್ನ ತಾಯಿಯ ಜೊತೆ ಹೋಗಿದ್ದ ಮಗು ಸೇರಿದಂತೆ ಹಲವಾರು ಮಕ್ಕಳ ಕಿಡ್ನಾಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ , ಅದರ ಬೆನ್ನತ್ತಿ ಹೋಗುವ ಮಾರ್ಕ್ ಹಾಗೂ ತಂಡಕ್ಕೆ ಎಕ್ಸ್ ಸಿಎಂ ಮೂಲಕ ಸಿಎಂ ಸಾವಿನ ರಹಸ್ಯ ಕೂಡ ಭೇದಿಸುವ ಕಾರ್ಯ ಎದುರಾಗುತ್ತದೆ. ಹೊರದೇಶ ಹೊರ ರಾಜ್ಯಕ್ಕೆ ಮಕ್ಕಳನ್ನು ಮಾರುವ ವ್ಯಕ್ತಿ ಸೋಲೆಮನ್ ಜೊತೆ ರುದ್ರ ಕೈಜೋಡಿಸಿ ತನ್ನ ಪ್ರೇಯಸಿ ಜೊತೆ ವಿದೇಶಕ್ಕೆ ಹೋಗಲು ಸಂಚು ರೂಪಿಸುತ್ತಾನೆ.

ಒಂದೆಡೆ ಹುಡುಕಾಟದಲ್ಲಿ ಸಸ್ಪೆಂಡ್ ಆಗಿರುವ ಮಾರ್ಕ್ ಹಾಗೂ ತಂಡ ಮುಂದಾದರೆ , ಮತ್ತೊಂದೆಡೆ ಅಧಿಕಾರದಲ್ಲಿರುವ ಇನ್ಸ್ಪೆಕ್ಟರ್ ಮಾಯಾ ಹಾಗೂ ತಂಡ ಕೂಡ ಹುಡುಕಟಕ್ಕೆ ಮುಂದಾಗಿರುತ್ತದೆ. ಇದರ ನಡುವೆ ಕೆಲವು ಕಾಣದ ಕೈ ಕೂಡ ಜೊತೆಯಲ್ಲಿ ಇದ್ದು ಸಂಚು ರೂಪಿಸುತ್ತದೆ. ಒಂದಕ್ಕೊಂದು ಕೊಂಡಿಯಂತೆ ಸಾಗಿ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಕಿಡ್ನ್ಯಾಪ್ ಕೈವಾಡ ಯಾರದು…
ಸಿಎಂ ಕೊಲೆಯ ರಹಸ್ಯ ಏನು…
ಮಕ್ಕಳ ಸ್ಥಿತಿ ಗತಿ ಏನಾಗುತ್ತೆ…
ಮಾರ್ಕಂಡೇಯ ಮಾಡುವ ಪ್ಲಾನ್ ಏನು…
ಕ್ಲೈಮಾಕ್ಸ್ ನೀಡುವ ಉತ್ತರ ಏನು ಎಂಬುದಕ್ಕೆ ಒಮ್ಮೆ ಮಾರ್ಕ್ ಚಿತ್ರವನ್ನು ನೋಡಲೇಬೇಕು.

ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಮ್ಯಾಕ್ಸಿಮಮ್ ಮಾಸ್ ಸ್ಟೈಲ್ ನಲ್ಲಿ ಖಡಕ್ ಎಂಟ್ರಿಯ ಮೂಲಕ ಆಕ್ಷನ್ ಅಬ್ಬರದಲ್ಲಿ ಮಿಂಚಿದ್ದಾರೆ. ಇಡೀ ಚಿತ್ರವನ್ನು ಆವರಿಸಿಕೊಂಡಿದ್ದು , ವಾಕಿಂಗ್ ಸ್ಟೈಲ್ , ಖಡಕ್ ಡೈಲಾಗ್ , ಭರ್ಜರಿ ಆಕ್ಷನ್ , ಮಾಸ್ ಲುಕ್ ಮೂಲಕ ಒಬ್ಬ ಪೋಲಿಸ್ ಅಧಿಕಾರಿ ದುಷ್ಟರ ವಿರುದ್ಧದ ನಡುವೆ ತನ್ನವರನ್ನ ರಕ್ಷಣೆಗೆ ಮಾಡುವ ಸ್ಟಾರ್ಟರ್ಜಿ ಗಮನ ಸೆಳೆಯುತ್ತದೆ. ಡ್ಯಾನ್ಸಿಂಗ್ ಸ್ಟೆಪ್ ಗೂ ಜೈ ಎಂದಿರುವ ಕಿಚ್ಚ , ಆಕ್ಷನ್ ನಲ್ಲು ವಾವ್ ಎಂದಿದ್ದಾರೆ.

ಇನ್ನು ಭದ್ರನ ಪಾತ್ರ ಮಾಡಿರುವ ನವೀನ್ ಚಂದ್ರ ಕೂಡ ಬಹಳ ಅದ್ಭುತವಾಗಿ ಪಾತ್ರದಲ್ಲಿ ಜೀವಿಸಿ , ಖಡಕ್ಕಾಗಿ ಅಭಿನಯಿಸಿದ್ದಾರೆ. ತಮಿಳಿನ ಯೋಗಿ ಬಾಬುವಿನ ಕಾಮಿಡಿ ಟೈಮಿಂಗ್ಸ್ , ಮಾತಿನ ವರ್ಷನ್ ಗಮನ ಸೆಳೆಯುತ್ತದೆ. ಇನ್ನು ಸಿಎಂ ಸ್ಥಾನಕ್ಕೆ ಪ್ಲಾನ್ ಮಾಡುವ ಶೈನ್ ಟಾಮ್ ಚಾಕೋ ಪಾತ್ರವು ಕೂಡ ಖದರ್ ಆಗಿ ಮೂಡಿ ಬಂದಿದೆ.

ಉಳಿದಂತೆ ಅಭಿನಯಿಸಿರುವ ಡ್ರ್ಯಾಗನ್ ಮಂಜು , ಗೋಪಾಲಕೃಷ್ಣ ದೇಶಪಾಂಡೆ , ಪ್ರತಾಪ್ ನಾರಾಯಣ್ , ಅರ್ಚನಾ ಕೊಟ್ಟಿಗೆ , ರೋಷಿಣಿ ಪ್ರಕಾಶ್ , ಮಾಲತೇಶ್ , ಅಶ್ವಿನ್ ಹಾಸನ್ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇನ್ನು ಈ ಚಿತ್ರದ ನಿರ್ದೇಶಕ ಹೇಳಿರುವ ಕಥಾವಸ್ತು ಭಿನ್ನವಾಗಿದ್ದರು ಕಳೆದ ಮ್ಯಾಕ್ಸ್ ಹಾದಿಯಲ್ಲಿ ಸಾಗಿದಂತಿದೆ ಈ ಮಾರ್ಕ್. ಈ ಚಿತ್ರದ ಹೈಲೈಟ್ಗಳಲ್ಲಿ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಅಬ್ಬರಿಸಿದ್ದು , ಛಾಯಾಗ್ರಾಹಣ , ಸಂಕಲನ ಹಾಗೂ ಕಲಾ ನಿರ್ದೇಶನ ಉತ್ತಮವಾಗಿ ಮೂಡಿ ಬಂದಿದೆ. ಒಟ್ಟಾರೆ ಆಕ್ಷನ್ ಪ್ಯಾಕ್ ನೊಂದಿಗೆ ಮಾಸ್ ಎಲಿಮೆಂಟ್ಸ್ ತುಂಬಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!