”ಮಾರ್ಕ್” ಸ್ಪೆಷಲ್ ನಂಬರ್ ರಿಲೀಸ್..ಮಸ್ತ್ ಮಲೈಕಾ ಜೊತೆ ಕಿಚ್ಚ ಸಖತ್ ಸ್ಟೆಪ್ಸ್
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಮಾರ್ಕ್ ಸಿನಿಮಾ ಇದೇ ತಿಂಗಳ 25ರಂದು ತೆರೆಗೆ ಬರ್ತಿದೆ. ಪ್ರಚಾರ ಕಾರ್ಯ ಕೂಡ ಭರದಿಂದ ಸಾಗಿದೆ. ಇದರ ಭಾಗವಾಗಿ ಮಾರ್ಕ್ ಸಿನಿಮಾದ ಸ್ಪೆಷಲ್ ನಂಬರ್ ಬಿಡುಗಡೆ ಮಾಡಲಾಗಿದೆ. ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಕಿಚ್ಚ ಸುದೀಪ್ ಹಾಗೂ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಕುಣಿದಿದ್ದಾರೆ. ಮಲೈಕಾ ಆಗಿ ನಿಶ್ಚಿಕಾ ಕಾಣಿಸಿಕೊಂಡಿದ್ದಾರೆ.
ಅನೂಪ್ ಭಂಡಾರಿ ಮಸ್ತ್ ಮಲೈಕಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗೂ ನಕಾಶ್ ಅಜೀಜ್ ಇದನ್ನ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.
ಮಾರ್ಕ್ ಚಿತ್ರವನ್ನ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಮ್ಯಾಕ್ಸ್ ಚಿತ್ರ ಆದ್ಮೇಲೆ ಈ ಒಂದು ಚಿತ್ರವನ್ನ ಸುದೀಪ್ ಜೊತೆಗೆ ಮಾಡಿದ್ದಾರೆ. ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ಗುರು ಸೋಮಸುಂರಂ, ರೋಶಿನಿ ಪ್ರಕಾಶ್, ಗೋಪಾಲ್ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ ಅಭಿನಯಿಸಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ ಹಾಗೂ ಕಿಚ್ಚ ಕ್ರಿಯೇಷನ್ ಬ್ಯಾನರ್ ನಡಿ ಸಿನಿಮಾ ತಯಾರಾಗಿದೆ.
