Uncategorized

ಶಿವರಾಜ್ ಕೆ.ಆರ್ .ಪೇಟೆ ನಟನೆಯ ಹೊಸ ಚಿತ್ರದ ಚಿತ್ರಿಕರಣ ಮುಕ್ತಾಯ.

Spread the love

ಶ್ರೀಮತಿ ಲಲಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಟ ಶಿವರಾಜ್ ಕೆಆರ್ ಪೇಟೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪ್ರೊಡಕ್ಷನ್ ನಂಬರ್ 2 ಸಿನಿಮಾದ ಚಿತ್ರಿಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಹಳ್ಳಿಗಾಡಿನ ಸೊಗಡಿನ ಸಿನಿಮಾವನ್ನ ಬೆಂಗಳೂರು, ಹಾಸನ ಸುತ್ತಮುತ್ತಲ ಲೊಕೇಷನ್ ಗಳಲ್ಲಿ ಮೂರು ಶೆಡ್ಯೂಲ್ನಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರಕ್ಕೆ ಶರತ್ ಚಕ್ರವರ್ತಿ ಕತೆ ಚಿತ್ರಕತೆ ಬರೆದು ನಿರ್ದೇಶಿದ್ದಾರೆ.

ನಿರೀಕ್ಷ ರಾವ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಜಹಂಗೀರ್, ಬಲ ರಾಜ್ವಾಡಿ, ಹಾಗೂ ಇತರೆ ಪ್ರತಿಭಾನ್ವಿತ ನಟರು ನಟಿಸಿದ್ದಾರೆ. ತಾಂತ್ರಿಕವರ್ಗ ಮಾಹಿತಿಯನ್ನ ಮುಂದಿನ ಹಂತಗಳಲ್ಲಿ ಪರಿಚಯಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರ ಟೈಟಲ್ ಕೂಡ ಸದ್ಯದಲ್ಲೇ ಅನಾವರಣಗೊಳ್ಳಲಿದ್ದು ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

Visited 1 times, 1 visit(s) today
error: Content is protected !!