Cini NewsTollywood

ದಸರಾ ಅಂಗವಾಗಿ ಸೆಟ್ಟೇರಿತು ನಾನಿ 31ನೇ ಸಿನಿಮಾ ’ಸೂರ್ಯನ ಶನಿವಾರ’

Spread the love

ನ್ಯಾಚುರಲ್ ಸ್ಟಾರ್ ನಾನಿ ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ದಸರಾ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರು ಸಾಲು ಸಾಲು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ನಾನಿ 31ನೇ ಸಿನಿಮಾ ಅನೌನ್ಸ್ ಆಗಿತ್ತು. ಈ ಹಿಂದೆ ಕಾಮಿಡಿ ಕಥಾಹಂದರದ ಅಂಟೆ ಸುಂದರಾನಿಕಿ ಎಂಬ ಚಿತ್ರ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೊಮ್ಮೆ ನಾನಿ ಜೊತೆ ಕೈ ಜೋಡಿಸಿದ್ದಾರೆ. ದಸರಾ ಹಬ್ಬದ ಅಂಗವಾಗಿ ಹೈದ್ರಾಬಾದ್ ನಲ್ಲಿ ’ಸೂರ್ಯನ ಶನಿವಾರ’ ಸಿನಿಮಾ ಸೆಟ್ಟೇರಿದೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನು ನಿರ್ದೇಶಕರಿಗೆ ಹಸ್ತಾಂತರಿಸಿದರು. ನಿರ್ಮಾಪಕ ದಿಲ್ ರಾಜು ಕ್ಯಾಮೆರಾಗೆ ಚಾಲನೆ ನೀಡಿದ್ರೆ, ವಿವಿ ವಿನಾಯಕ್ ಕ್ಲಾಪ್ ಮಾಡಿದರು. ನಟ ಎಸ್.ಜೆ.ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

’ಸೂರ್ಯನ ಶನಿವಾರ’ ಪಕ್ಕ ಮಾಸ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗಿದ್ದು, ಈ ಸಿನಿಮಾದ ಕಥೆ ಹಾಗೂ ಪಾತ್ರಕ್ಕಾಗಿ ನಾನಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿದ್ದು, ತಮಿಳು ಸ್ಟಾರ್ ನಟ ಎಸ್‌ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ, ಮುರಳಿ ಜಿ ಛಾಯಾಗ್ರಹಣವಿದೆ. ’ಸೂರ್ಯನ ಶನಿವಾರ’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ. ತ್ರಿಬಲ್ ಆರ್ ಸೇರಿದಂತೆ ಹಲವರು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಡಿಡಿವಿ ಎಂಟರ್ ಟೈನರ್ ಬ್ಯಾನರ್ ನಡಿಯಲ್ಲಿ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ’ಸೂರ್ಯನ ಶನಿವಾರ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

Visited 1 times, 1 visit(s) today
error: Content is protected !!