ನಕ್ಸಲ್ ಸಿದ್ಧಾಂತದ ಸುಳಿಯಲ್ಲಿ ವೀರ ಸೈನಿಕನ ಬದುಕು “ಆಪರೇಷನ್ ಲಂಡನ್ ಕೆಫೆ” (ಚಿತ್ರವಿಮರ್ಶೆ-ರೇಟಿಂಗ್ : 3 /5)
ರೇಟಿಂಗ್ : 3 /5
ಚಿತ್ರ : ಆಪರೇಷನ್ ಲಂಡನ್ ಕೆಫೆ
ನಿರ್ದೇಶಕ : ರಾಘವೇಂದ್ರ ಸಡಗರ
ನಿರ್ಮಾಪಕರು : ವಿಜಯ್ ಕುಮಾರ್, ರಮೇಶ್ ಕೊಠಾರಿ, ದೀಪಕ್ ರಾಣೆ
ಸಂಗೀತ : ಪ್ರಾಂಶು ಝಾ
ಛಾಯಾಗ್ರಹಣ : ನಾಗಾರ್ಜುನ್
ತಾರಾಗಣ : ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ , ಶಿವಾನಿ ಸುರ್ವೆ, ವಿರಾಟ್ ಮಡಕೆ, ಅಶ್ವಿನಿ ಚಾವರೆ , ಅರ್ಜುನ್ ಕಾಪಿಕಾಡ್, ಬಿ.ಸುರೇಶ್, ಅರುಣ್ ಸೋವಿ ಹಾಗೂ ಮುಂತಾದವರು…
ಸಮಾಜಘಾತಕರ ಶಕ್ತಿಗಳ ನಡುವೆ ನೆಮ್ಮದಿಯಾಗಿ ಉಸಿರಾಡುವುದು ಜನಸಾಮಾನ್ಯರಿಗೆ ಕಷ್ಟವಾಗುತ್ತಾ ಹೋಗಿದೆ. ಖಾಕಿ , ಖಾದಿಗಳ ಸ್ವಾರ್ಥದ ಹಿಡಿತದಿಂದ ಹೊರಬಂದು ಉತ್ತಮ ಜೀವನ ಕಟ್ಟಿಕೊಳ್ಳುವ ಹಾದಿಯಲ್ಲಿ ತಮ್ಮದೇ ಗುರಿ , ಸಿದ್ದಾಂತಗಳ ಮೂಲಕ ಬದುಕಬೇಕೆಂಬ ಉದ್ದೇಶದೊಂದಿಗೆ ದೃಢ ನಿರ್ಧಾರ ಮಾಡಿ ಹೋರಾಡುವ ನೊಂದ ಮನಸ್ಸುಗಳ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಆಪರೇಷನ್ ಲಂಡನ್ ಕೆಫೆ”
ಇನ್ನು ಚಿತ್ರದ ಕಥೆಗೂ ಹಾಗೂ ಶೀರ್ಷಿಕೆಗೂ ಹೇಗೆ ಸಂಬಂಧ ಎನ್ನುವುದನ್ನು ತಿಳಿಯಬೇಕಾದರೆ ಕ್ಲೈಮ್ಯಾಕ್ಸ್ ವರೆಗೂ ತಾಳ್ಮೆಯಿಂದ ಕಾಯಬೇಕು. ದೇಶದ ಬಹುತೇಕ ಭಾಗಗಳಲ್ಲಿ ಖಾದಿ ಖಾಕಿಯ ದರ್ಪ , ಆರ್ಭಟಕ್ಕೆ , ಬಹಳಷ್ಟು ಜನರು ಕಂಗಾಲಾಗಿ ಹೋಗಿದ್ದಾರೆ.
ಒಂದೆಡೆ ಅರಣ್ಯ ನಾಶ , ಭೂಕಬಳಿಕೆ , ಗಡಿ ವಿವಾದಗಳ ನಡುವೆ ರಾಜಕೀಯ ಕುತಂತ್ರ ನಡೆದರೆ ಮತ್ತೊಂದೆಡೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ , ದೌರ್ಜನ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅಂತದ್ದೇ ಒಂದು ದಟ್ಟ ಅರಣ್ಯದ ನಡುವಿನ ಊರಿನಲ್ಲಿ ಜನರೊಟ್ಟಿಗೆ ಬೆಂಬಲವಾಗಿ ನಿಂತು , ಕಾಡಿನೊಳಗೆ ತಮ್ಮದೇ ಸಿದ್ಧಾಂತಗಳ ಮೂಲಕ ಸಮರ ಸಾರಲು ನಿಲ್ಲುವಂತಹ ನಕ್ಸಲ್ ತಂಡದ
ನಾಯಕಿ ಶಕ್ತಿಯ ದಯಾ , ಕೇಶವ ಹಾಗೂ ತಂಡವೇ ಕೈಜೋಡಿಸಿರುತ್ತೆ.
ಇದರ ನಡುವೆ ತಹಸಿಲ್ದಾರ್ ಕಾಮದ ದಾಹಕ್ಕೆ ತುತ್ತಾಗುವ ಸಾವಿತ್ರಿ ಸೆಡ್ಡು ಹೊಡೆದು ನಿಂತು ದುಷ್ಟನ ಸಮ್ಮರಿಸಿ ತಂಡಕ್ಕೆ ಸೇರಿಕೊಳ್ಳುತ್ತಾಳೆ. ನಕ್ಸಲರ ಆರ್ಭಟಕ್ಕೆ ಪ್ರತ್ಯುತ್ತರ ನೀಡಲು ಸರ್ಕಾರದ ಮಂತ್ರಿ ( ಸಂದೀಪ್ ಮಲಾನಿ) ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಮಿಲ್ಟ್ರಿಯನ್ನ ಕರೆಸಿ ಮಟ್ಟ ಹಾಕಲು ನಿರ್ಧರಿಸುತ್ತಾನೆ. ಛತ್ತೀಸ್ಗಡದ ನಕ್ಸಲರನ್ನು ಮಟ್ಟ ಹಾಕಿದಂತಹ ಹಿರಿಯ ಅಧಿಕಾರಿ ಶಾಹಿದ್ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿಯುತ್ತದೆ.
ಇದರ ನಡುವೆ ಅದೇ ಊರಿನ ಮುದ್ದಾದ ಹುಡುಗಿ ಭವ್ಯ (ಕಾವ್ಯ ಶೆಟ್ಟಿ) ನಕ್ಸಲರ ಚಲನವಲನಗಳನ್ನು ಗಮನಿಸುತ್ತಾ ಕೇಶವ (ಕವೀಶ್ ಶೆಟ್ಟಿ) ನನ್ನ ಪ್ರೀತಿಸಲು ನಿರ್ಧರಿಸುತ್ತಾಳೆ. ನಕ್ಸಲ್ ತಂಡದ ಉದ್ದೇಶದ ಗುರಿ ಹಾದಿ ತಪ್ಪುತ್ತದೆ ಎಂಬ ಆಲೋಚನೆಯೊಂದಿಗೆ ಎಚ್ಚರಿಕೆಯನ್ನು ನೀಡುವ ತಂಡದ ನಾಯಕಿ ಶಕ್ತಿ (ಶಿವಾನಿ ಸುರ್ವೆ). ಪೋಲಿಸ್ ಹಾಗೂ ಸೈನಿಕರ ಗುಂಡಿನ ಚಿಕ್ಕಮಕಿಯನ್ನು ಎದುರಿಸಬೇಕಾಗುತ್ತದೆ. ಪ್ರೀತಿಯನ್ನ ನಿರಾಕರಿಸುವ ಕೇಶವನ ಹಿನ್ನೆಲೆಯಲ್ಲಿ ನಕ್ಸಲ್ ಒಡನಾಟದ ನಡುವೆಯೇ ದೇಶ ಭಕ್ತನಾದ ಸೈನಿಕನ ಸತ್ಯ ಸಂಗತಿಯ ಬೆಳಕು ಮೂಡುತ್ತದೆ. ಗಡಿಯಲ್ಲಿ ದೇಶ ಕಾಯುವ ಮೇಜರ್ ಶೌರ್ಯ ಸತ್ಯದೇವ ಬದುಕಿನ ಅನಾವರಣಕ್ಕೂ ಈ ನಕ್ಸಲ್ ಗುಂಪಿನ ಒಡನಾಟಕ್ಕೂ ಇರುವ ನಂಟು ಏನು… ನಕ್ಸಲ್ ಕ್ರಾಂತಿಯ ಉದ್ದೇಶ ಏನು… ಆಪರೇಷನ್ ಲಂಡನ್ ಕೆಫೆ ಆರಂಭ ಎಲ್ಲಿಂದ ಎಂಬ ವಿಚಾರ ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ನಕ್ಸಲ್ ಪೀಡಿತ ಪ್ರಾಂತ್ಯದಲ್ಲಿ ಜನರ ಬದುಕು ಬವಣೆ ಹಾಗೂ ಪೊಲೀಸರ ಜೊತೆಗಿನ ಗುಂಡಿನ ಚಿಕ್ಕಮಕಿ, ರಾಜಕೀಯ ನಾಯಕರ ವಿತೂರಿಗಳ ಸುತ್ತ ಬದುಕು ಹೇಗೆ ಸಾಗುತ್ತದೆ ಎಂಬ ಸೂಕ್ಷ್ಮತೆಯ ಜೊತೆಗೆ ಸೈನಿಕನ ಭವಿಷ್ಯದಲ್ಲಿ ಎದುರಾದ ಘಟನೆ ಹೇಗೆಲ್ಲ ತಿರುವು ಪಡೆದು ಒಂದೆಡೆ ಸೇರುತ್ತದೆ ಎಂಬುದನ್ನು ಕುತೂಹಲಕಾರಿ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ನಕ್ಸಲರ ಸಂಬಂಧಪಟ್ಟಂತಹ ಕಥೆಗಳು ಬಹುತೇಕ ಬಂದಿದ್ದು, ಇಲ್ಲಿ ಅಂತಹ ವಿಶೇಷತೆ ಏನು ಕಾಣುವುದಿಲ್ಲ. ಇನ್ನು ಚಿತ್ರದ ಟೈಟಲ್ ಹಾಗೂ ಕತೆಗೂ ಎಷ್ಟರಮಟ್ಟಿಗೆ ಸಂಬಂಧ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಪ್ರಯತ್ನ ಗಮನ ಸೆಳೆಯುವಂತಿದೆ. ಇನ್ನು ಈ ಕಥೆಗೆ ದುಡ್ಡನ್ನು ಹಾಕಿರುವ ನಿರ್ಮಾಪಕ ಧೈರ್ಯವನ್ನು ಮೆಚ್ಚಲೇಬೇಕು.
ಹಾಡುಗಳು ಗಮನ ಸೆಳೆಯುತ್ತದೆ. ಸಂಗೀತ ಹಾಗೂ ಛಾಯಾಗ್ರಹಾಕರ ಕೈಚಳಕ ಸೊಗಸಾಗಿ ಮೂಡಿಬಂದಿದೆ. ಇನ್ನು ಯುವ ನಟ ಕವೀಶ್ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದು , ಸ್ಮಾರ್ಟ್ ಅಂಡ್ ಫಿಟ್ ಕಾಣುವಂತ ಈ ಪ್ರತಿಭೆಗೆ ಉತ್ತಮ ಭವಿಷ್ಯವಿದೆ. ಇನ್ನು ನಟಿ ಮೇಘ ಶೆಟ್ಟಿ ನನ್ನ ಮಾತಿನ ಮೂಲಕ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಗ್ಯಾಂಗ್ ಲೀಡರ್ ನ ಪಾತ್ರದಲ್ಲಿ ಶಿವಾನಿ ಸುರ್ವೆ ಅದ್ಬುತವಾಗಿ ಖಡಕ್ ಲುಕ್ ಮೂಲಕ ಗತ್ತಿನಲ್ಲಿ ಮಿಂಚಿದ್ದಾರೆ. ಉಳಿದಂತೆ ಅಭಿನಯಿಸಿರುವ ವಿರಾಟ್ ಮಡಕೆ, ಅಶ್ವಿನಿ ಚಾವರೆ , ಅರ್ಜುನ್ ಕಾಪಿಕಾಡ್, ಬಿ.ಸುರೇಶ್, ಅರುಣ್ ಸೋವಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರಕ್ಕೆ ಪೂರಕವಾಗಿ ಸಾಗಿದ್ದು, ಸಮಾಜದ ಸ್ಥಿತಿಗತಿ , ನೊಂದವರ ಬದುಕುವವನೇ ಜೊತೆಗೆ ದೇಶ ಪ್ರೇಮಿಗಳ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರವು ಒಮ್ಮೆ ನೋಡುವಂತಿದೆ.
