ಯೂತ್ ಲವ್… ಅತಿಯಾದ ಪ್ರೀತಿ… ಇಕ್ಕಟ್ಟಿಗೆ ಹಾದಿ…”ಲವ್ OTP” (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಲವ್ OTP
ನಿರ್ದೇಶಕ : ಅನೀಶ್
ನಿರ್ಮಾಪಕ : ವಿಜಯ್ ಎಂ.ರೆಡ್ಡಿ
ಸಂಗೀತ : ಆನಂದ ರಾಜವಿಕ್ರಮನ್
ಛಾಯಾಗ್ರಹಣ : ಹರ್ಷವರ್ಧನ
ತಾರಾಗಣ : ಅನೀಶ್ ತೇಜೇಶ್ವರ್ , ಸ್ವರೂಪಿಣಿ , ಜಾನ್ವಿ ಕಕಲಕೇರಿ, ಸ್ವಾತಿ , ರಾಜೇವ್ ಕನಕಲ , ನಾಟ್ಯ ರಂಗ , ಪ್ರಮೋದಿನಿ, ತುಳಸಿ ಶಿವಮಣಿ , ಚೇತನ ಗಂಧರ್ವ, ಕೃಷ್ಣಭಟ್ ಹಾಗೂ ಮುಂತಾದವರು..
ಲೈಫ್ ನಲ್ಲಿ ಆಸೆ , ಆಸಕ್ತಿ , ಗುರಿ ಇದ್ದರಷ್ಟೇ ಒಂದು ಉತ್ತಮ ಹಾದಿಯಲ್ಲಿ ಸಾಗುವುದಕ್ಕೆ ಸಾಧ್ಯ. ಅದರಲ್ಲೂ ತಂದೆ ತಾಯಿಯ ಗಮನ ಮಕ್ಕಳ ಮೇಲೆ ಹೆಚ್ಚು ಇದ್ದರಂತೂ ಮುಗಿದಂತೆ. ಒಂದು ಕಡೆ ಪ್ರೀತಿ ಮತ್ತೊಂದು ಕಡೆ ಭಯ(panic) ನಲ್ಲೆ ಹೆಚ್ಚು
ಒದ್ದಾಡೋದು ಸರ್ವೇ ಸಾಮಾನ್ಯ. ಅತಿಯಾದ ಜವಾಬ್ದಾರಿ , ಪ್ರೀತಿ ಅನಾಹುತಕ್ಕೆ ದಾರಿ ಎನ್ನುವಂತ ಕಥಾನಕದೊಂದಿಗೆ ದೊಡ್ಡ ಕ್ರಿಕೆಟರ್ ಆಗುವ ಹುಡುಗನ ಬದುಕಿನಲ್ಲಿ ಇಬ್ಬರು ಹುಡುಗಿಯರ ಮೋಹ , ಅವರ ಸೆಳೆತ , ಪ್ರೀತಿ ಎದುರಾದಾಗ ಆಗುವ ಹೊಡೆದಾಟ, ಬಡಿದಾಟ, ಕ್ರಿಕೆಟ್, ಸ್ನೇಹ , ಅಪ್ಪ-ಮಗನ ಗಲಾಟೆ, ಕೌಟಂಬಿಕ ಸೆಳೆತ , ಪೊಲೀಸ್ ಠಾಣೆ ಸೇರಿದಂತೆ ಕಮರ್ಷಿಯಲ್ ಯೂತ್ ಎಂಟರ್ಟೈನರ್ , ಕಾಮಿಡಿ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಲವ್ OTP(over tourcher pressure)”.
ಪ್ರೀತಿ ಎಂಬ ಪದ , ಪ್ರೀತಿ ಮಾಡುವವರನ್ನು ಕಂಡರೆ ಸದಾ ಕೋಪಗೊಳ್ಳುವ ಇನ್ಸ್ಪೆಕ್ಟರ್ ಶಂಕರ್ ( ರಾಜೇವ್ ಕನಕಲ) ಆತನ ಪತ್ನಿ (ಪ್ರಮೋದಿನಿ) ಯ ಮುದ್ದಿನ ಮಗ ಅಕ್ಷಯ್ ( ಅನೀಶ್ ತೇಜೇಶ್ವರ್) ಗೆ ಕ್ರಿಕೆಟರ್ ಆಗಬೇಕು ಎನ್ನುವುದು ಚಿಕ್ಕವಯಸ್ಸಿನಿಂದ ಕಟ್ಟಿಕೊಂಡ ಕನಸು.

ಇನ್ಸ್ಪೆಕ್ಟರ್ ಶಂಕರ್ ಮಗನ ಕನಸಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮಗ ಲವ್ವಲ್ಲಿ ಬಿದ್ದಿದ್ದಾನಾ , ಇಲ್ಲವೋ ಎಂಬುದನ್ನು ಆತನ ಫೋನ್ ಮೂಲಕ ಚೆಕ್ ಮಾಡುವುದೇ ಕೆಲಸ. ಇನ್ನು ಗೆಳೆಯ ವರುಣ್(ನಾಟ್ಯರಂಗ) ಅಕ್ಷಯ್ ಗೆ ಸದಾ ಸಾತ್ ನೀಡುತ್ತಾ , ಒಂದಷ್ಟು ಎಡವಟ್ಟುಗೆ ದಾರಿ ಮಾಡುತ್ತಾನೆ. ಕ್ರಿಕೆಟ್ ಆಟದಲ್ಲಿ ಒಂದಷ್ಟು ಸಣ್ಣಪುಟ್ಟ ಗಲಾಟೆ ಮಾಡಿಕೊಳ್ಳುವ ಅಕ್ಷಯ್ ನಡುವಳಿಕೆಯನ್ನು ಇಷ್ಟಪಡುವ ಸನಾ (ಸ್ವರೂಪಿಣಿ) ಬಿಟ್ಟು ಬಿಡದಂತೆ ಕಾಡಿ ಇಷ್ಟಪಡುತ್ತಾಳೆ.
ಅಪ್ಪನ ಭಯದಲ್ಲೇ ಬೆಳೆಯುವ ಆಕ್ಷಯ್ ಗೆ ಪ್ರೀತಿ ಎಂಬ ಪದ ಕೇಳಿ ಹೆದರುತ್ತ ಗೆಳೆಯನ ಮಾತು ಕೇಳಿಕೊಂಡು ಫ್ರೆಂಡ್ಶಿಪ್ ಓಕೆ ಎನ್ನುತ್ತಾ ಸನಾಳ ಜೊತೆ ಓಡಾಡುತ್ತಾನೆ. ಆಕೆಯ ಅತಿಯಾದ ವರ್ತನೆ ಅಕ್ಷಯ್ ಗೆ ಹಿಂಸೆ ಆಗುತ್ತಾ ಹೋಗುತ್ತದೆ. ಇದರ ನಡುವೆ ಕ್ರಿಕೆಟ್ ಆಟದಲ್ಲಿ ಫಿಜಿಯೋಥೆರಪಿಸ್ಟ್ ಆಗಿ ಬರುವ ನಕ್ಷತ್ರ( ಜಾನ್ವಿ ಕಕಲಕೇರಿ) ಅಕ್ಷಯ್ ಗೆ ಟ್ರೀಟ್ಮೆಂಟ್ ಮಾಡುತ್ತಾಳೆ.
ನಕ್ಷತ್ರಳ ಮುಗ್ದತೆ ನೋಟಕ್ಕೆ ಅಕ್ಷಯ್ ಇಷ್ಟಪಡುತ್ತಾನೆ. ಮುಂದೆ ಇಬ್ಬರ ಪ್ರೀತಿಯ ಇಕ್ಕಟ್ಟಿಗೆ ಸಿಲುಕುವ ಅಕ್ಷಯ್ ಬದುಕಿನಲ್ಲಿ ದೊಡ್ಡ ಪ್ರಶ್ನೆ ಎದುರಾಗುತ್ತದೆ. ತನ್ನ ಮಗ ದೊಡ್ಡ ಕ್ರಿಕೆಟರ್ ಆಗಬೇಕು , ಯಾವುದೇ ಹುಡುಗಿ ಅಥವಾ ಲವ್ ಸಹವಾಸಕ್ಕೆ ಇರಬಾರದೆಂದು ನಿಗಾ ಇಡುವ ತಂದೆ. ಇದೆಲ್ಲವೂ ಒಂದಕ್ಕೊಂದು ಕೊಂಡೆಯಂತೆ ಬೆಸೆದುಕೊಂಡು ಬೇರೆದೆ ತಿರುವು ತೆಗೆದುಕೊಳ್ಳುತ್ತದೆ. ಅಕ್ಷಯ್ ದೊಡ್ಡ ಕ್ರಿಕೆಟರ್ ಆಗ್ತಾನ… ಈ ಟ್ರಯಾಂಗಲ್ ಲವ್ ಏನಾಗುತ್ತೆ… ತಂದೆ ಮಗನ ಬಾಂಧವ್ಯ ಕಥೆ ಏನು… ಕ್ಲೈಮಾಕ್ಸ್ ಉತ್ತರ…?
ಇದೊಂದು ಕಂಪ್ಲೀಟ್ ಯೂತ್ ಅಂಡ್ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು , ಹುಡುಗ ಹುಡುಗಿಯರ ಸ್ನೇಹ, ಸೆಳೆತ , ಪ್ರೀತಿ , ಪ್ರೇಮ , ತಲ್ಲಣ , ಕ್ರೀಡೆ , ಹಾಸ್ಯ ಒದ್ದಾಟದ ನಡುವೆ ಸಂಬಂಧಗಳ ಮೌಲ್ಯದ ಜೊತೆ ಮನಸಿದ ಭಾವನೆ , ಉಸಿರಿನ ಶಕ್ತಿಯ ಅರಿವನ್ನು ಮೂಡಿಸುವ ಪ್ರಯತ್ನವನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅನೀಶ್.
ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು , ಹಾಗೆ ನಟನಾಗಿ ಇಡೀ ಚಿತ್ರವನ್ನ ಆವರಿಸಿಕೊಂಡು ಪ್ರೇಮಿಯಾಗಿ , ಮುದ್ದ ಮಗನಾಗಿ ಚಡಪಡಿಸುವ ರೀತಿ ತಮ್ಮ ಹವಾ ಭಾವದ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಸ್ವರೂಪಣೆ ಬಹಳ ಜೋಷ್ ಹಾಗೂ ಮಾತಿನ ಆರ್ಭಟದ ಮೂಲಕ ಗಮನ ಸೆಳೆಯುತ್ತಾರೆ.
ಅದೇ ರೀತಿ ದ್ವಿತೀಯ ಭಾಗದಲ್ಲಿ ಮುದ್ದತೆಯ ಜೊತೆಯಲ್ಲೇ ಮನಸೆಳೆಯುವಂತೆ ಜಾನ್ವಿ ಕಕಲಕೇರಿ ಅದ್ಭುತವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಇನ್ಸ್ಪೆಕ್ಟರ್ ಪಾತ್ರದಲ್ಲಿ ರಾಜೀವ್ ಕನಕಲ ಲೀಲಾಜಾಲವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೇ ರೀತಿ ಗೆಳೆಯನ ಪಾತ್ರ ಮಾಡಿರುವ ನಾಟ್ಯರಂಗ ಇಡೀ ಚಿತ್ರದ ಓಟಕ್ಕೆ ತಿರುವು ನೀಡುವಂತೆ ಹಾಸ್ಯ ಸನ್ನಿವೇಶಗಳಲ್ಲಿ ಜೀವಿಸಿದ್ದಾರೆ.
ಉಳಿದಂತೆ ಸ್ವಾತಿ , ಕೃಷ್ಣ ಭಟ್ , ಪ್ರಮೋದಿನಿ , ತುಳಸಿ ಶಿವಮಣಿ , ಚೇತನ್ ಗಂಧರ್ವ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರೀತಿ ಹಾಗೂ ಕ್ರೀಡೆಯ ಬೆಸುಗೆಯೊಂದಿಗೆ ಒಂದು ಮನೋರಂಜನೆಯ ಚಿತ್ರವನ್ನು ನೀಡುವ ಪ್ರಯತ್ನ ಮಾಡಿರುವ ವಿಜಯ್ ಎಂ ರೆಡ್ಡಿ ಅವರ ಧೈರ್ಯವನ್ನು ಮೆಚ್ಚಲೇಬೇಕು. ಅದೇ ರೀತಿ ಸಂಗೀತ ಹಾಗೂ ಹಿನ್ನಲೆ ಸಂಗೀತ ಎರಡು ಗಮನ ಸೆಳೆಯುತ್ತದೆ. ಛಾಯಾಗ್ರಹಣ , ಸಾಹಸ ಹಾಗೂ ಸಂಕಲನ ಉತ್ತಮವಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ , ಲವರ್ ಗಳಿಗೆ , ಎಂಗರ್ ಜನರೇಶನ್ ಗೆ ಬಹಳ ಬೇಗ ಇಷ್ಟವಾಗುವ ಈ ಚಿತ್ರ ಮನೋರಂಜನೆಯ ರಸದೌತಣ ನೀಡಲಿದು , ಎಲ್ಲರೂ ಒಮ್ಮೆ ನೋಡಬಹುದು.