Cini NewsSandalwood

ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಗೆ ತೆರೆ, ಪಪ್ಪಿ ಸಿನಿಮಾಗೆ ಮೊದಲ ಸ್ಥಾನ

Spread the love

ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಯಲ್ಲಿ ಗೆದ್ದ ಸಿನಿಮಾಗಳ ಕಂಪ್ಲೀಟ್ ಪಟ್ಟಿ ಇಲ್ಲಿದೆ.

ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ‌ ಚಿತ್ರೋತ್ಸವ ಆಯೋಜನೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆದಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪಡೆದ ಸಿನಿಮಾ ಯಾವುದು?
ವಿನ್ನರ್-ಪಪ್ಪಿ ಸಿನಿಮಾ
• 1st ರನ್ನರ್ ಅಪ್-ಕರಡಿಗುಡ್ಡ ಸಿನಿಮಾ
• 2nd ರನ್ನರ್ ಅಪ್-ಬಾಲ್ಯ ಸಿನಿಮಾ

• ಅತ್ಯುತ್ತಮ ಬಾಲ ಕಲಾವಿದ- ಪುರುಷ ವಿಭಾಗ
ವರುಣ್ ಗಂಗಾಧರ್ – ಸ್ವರಾಜ್ಯ

•ಅತ್ಯುತ್ತಮ ಬಾಲ ಕಲಾವಿದೆ
ರುತು – ಟೇಕ್ವಾಂಡೋ ಗರ್ಲ್

• ಅತ್ಯುತ್ತಮ ಬಾಲ ಕಲಾವಿದ ಮಾಸ್ಟರ್ ಶ್ರೇಯಸ್ – ಜೀನಿಯಸ್ ಮುತ್ತಾ

• ಅತ್ಯುತ್ತಮ ಬಾಲ ಕಲಾವಿದೆ
ಇದು ನಮ್ಮ ಶಾಲೆ -ಪುಣ್ಯಶ್ರೀ

• ಅತ್ಯುತ್ತಮ ನಟ
ವಿಜಯ್ ರಾಘವೇಂದ್ರ -ಜೀನಿಯಾಸ್ ಮುತ್ತಾ

• ಅತ್ಯುತ್ತಮ ನಟಿ
ವೀಣಾ ಸುಂದರ್- ಸ್ವರಾಜ್ಯ

• ಅತ್ಯುತ್ತಮ ಪೋಷಕ ನಟ
ಸುಮನ್ – ಏಕಲವ್ಯ

• ಅತ್ಯುತ್ತಮ ಪೋಷಕ ನಟಿ
ಪದ್ಮ ವಾಸಂತಿ – ಜೀನೀಸ್ ಮುತ್ತಾ

• ಅತ್ಯುತ್ತಮ ನಿರ್ದೇಶಕ
ನಾಗಿಣಿ ಭರಣ-ಜೀನೀಸ್ ಮುತ್ತಾ

•ಅತ್ಯುತ್ತಮ ಸಂಕಲನ
ರವಿಚಂದ್ರನ್ – ಟೇಕ್ವಾಂಡೋ ಗರ್ಲ್

• ಅತ್ಯುತ್ತಮ ಗಾಯಕ
ಶಮಿತಾ ಮಲ್ನಾಡ್- ಚಿಣ್ಣರ ಚಂದ್ರ

• ಅತ್ಯುತ್ತಮ ಛಾಯಾಗ್ರಹಣ
ವಿ. ಪವನ್ ಕುಮಾರ್ -ಕರಡಿ ಗುಡ್ಡ

• ಅತ್ಯುತ್ತಮ ಚಿತ್ರಕಥೆ
ಅಮ್ಮಿತ್ ರಾವ್ – ಕರಡಿ ಗುಡ್ಡ

• ಅತ್ಯುತ್ತಮ PRO ಸುಧೀಂದ್ರ ವೆಂಕಟೇಶ್

• ಅತ್ಯುತ್ತಮ ಪ್ರೊಡಕ್ಷನ್ ಹೌಸ್
ವೈ ಮೂವೀಸ್ ಸ್ವರಾಜ್ಯ

ಈ ಹಿಂದೆ ಚಲನಚಿತ್ರೋತ್ಸವ ಅಪ್ಪು ಹೆಸರಿನಲ್ಲಿ ನಡೆದಿತ್ತು. ಪುನೀತ್ ತಮ್ಮ ಸೇವೆಯಿಂದ ಎಲ್ಲರ ಮನಸ್ಸಿನಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಅವರ ಸತ್ಕಾರ್ಯಗಳು ಎಲ್ಲರಿಗೂ ಸ್ಪೂರ್ತಿ ಆಗಬೇಕು. ಅವರ ಹೆಸರಿನಿಂದ ಮಕ್ಕಳ ಚಲನಚಿತ್ರೋತ್ಸವ ಆರಂಭವಾಗಿರುವುದು ನಿಜಕ್ಕೂ ಸಂತಸ ತಂದಿದೆ.

Visited 1 times, 1 visit(s) today
error: Content is protected !!