Cini NewsSandalwood

ಮುನಿಕೃಷ್ಣ ನಿರ್ಮಾಣದ “ಮುರುಗ s/o ಕಾನೂನು” ಚಿತ್ರದ ಆಡಿಯೋ ಬಿಡುಗಡೆ.

Spread the love

ಕಿರುತೆರೆಯ ಮುರುಗ ಖ್ಯಾತಿಯ ನಟ ಮುನಿಕೃಷ್ಣ ನಾಯಕನಾಗಿ ನಟಿಸಿದ್ದ ಕೊಡೆಮುರುಗ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು. ಆ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮುನಿಕೃಷ್ಣ ಅವರೀಗ ತಮ್ಮ ಎರಡನೇ ಚಿತ್ರವನ್ನು ತೆರೆಗೆ ತರಲು ಹೊರಟಿದ್ದಾರೆ. ಆ ಚಿತ್ರದ ಹೆಸರು ‘ಮುರುಗ ಸನ್ ಆಫ್ ಕಾನೂನು’. ಚಿತ್ರದಲ್ಲಿ ಮುನಿಕೃಷ್ಣ ಅವರು ನಾಯಕನಾಗಿ ನಟಿಸುವ ಜೊತೆಗೆ ತಮ್ಮ ಎ.ಎಸ್.ಎ. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣ ಕೂಡ ಮಾಡಿದ್ದಾರೆ. ಎ.ಎಸ್.ಎ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮುನಿ ಕೃಷ್ಣ ನಿರ್ಮಾಣದ, ವಿಜಯ್ ಪ್ರವೀಣ್ ನಿರ್ದೇಶನದ, ಮುನಿ ಕೃಷ್ಣ, ಮಮತ ರಾವುತ್, ಚಿರಶ್ರೀಅಂಚನ್, ಶೋಭ್ ರಾಜ್, ಥ್ರಿಲರ್ ಮಂಜು, ಉಮೇಶ್, ವಿನಯ ಪ್ರಸಾದ್, ಹುಲಿ ಕಾರ್ತಿಕ್, ಚಂದ್ರ ಪ್ರಭ ಮುಂತಾದವರು ಅಭಿನಯಿಸಿರುವ*”ಮುರುಗ s/o ಕಾನೂನು”* ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಹೂವಿನ ಹಡಗಲಿ ಶಾಸಕರಾದ ಕೃಷ್ಣ ನಾಯಕ್ ಸಿನಿಮಾದ ಆಡಿಯೋ ಬಿಡುಗಡೆ ಮಾಡಿ ಶುಭಕೋರಿದರು.

ಮುರುಗ S/o ಕಾನೂನು ಚಿತ್ರ ಇದೇ ಆಗಸ್ಟ್ 29ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಕಡೆಯದಾಗಿ ಶುಭಕೋರಿದ್ದ ಚಿತ್ರ ಮುರುಗ S/o ಕಾನೂನು. ಜಾಗ ಕೇಳಿಕೊಂಡು ಊರಿಗೆ ಬರುವ ಖಳನಾಯಕ ನಂತರ ಇಡೀ ಊರನ್ನೇ ತನ್ನ ಕಬ್ಜ ಮಾಡಿಕೊಳ್ಳುತ್ತಾನೆ.

ಮುರುಗನ ತಂದೆಯನ್ನೂ ಕೊಲೆ ಮಾಡಿಸುತ್ತಾನೆ. ನಂತರ ಎಲ್.ಎಲ್.ಬಿ.ಓದಿಕೊಂಡಿದ್ದ ಮುರುಗ ಹೇಗೆ ಕಾನೂನಾತ್ಮಕವಾಗಿ ತನ್ನ ಜಾಗದ ಜೊತೆಗೆ ಊರನ್ನೂ ಉಳಿಸಿಕೊಳ್ಳುತ್ತಾನೆ ಎಂಬುದೇ ಮುರುಗ ಸನ್ ಆಫ್ ಕಾನೂನು ಚಿತ್ರದ ಕಥಾಹಂದರ. ಆನೇಕಲ್, ಮಲ್ಪೆ, ಬೆಂಗಳೂರು ಸುತ್ತಮುತ್ತ 62 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ಮಾಪಕರೂ ಆಗಿರುವ ಮುನಿ ಕೃಷ್ಣ, ಚಿತ್ರದ ಕುರಿತು ಮಾಹಿತಿ ನೀಡಿದರು.

ನಾಯಕಿ ಮಮತಾ ರಾವುತ್ ಮಾತನಾಡಿ ‘ನಾನು ಮದುವೆಯಾದ 15 ದಿನಗಳಲ್ಲಿ ಈ ಚಿತ್ರದ ಆಫರ್ ಬಂತು. ಈ ವೇಳೆ ಒಂದು ಹಂತದಲ್ಲಿ ಶೂಟಿಂಗ್ ಬಿಟ್ಟು ಹೊರಡುವ ನಿರ್ಧಾರ ಮಾಡಿದ್ದೆ ಆದರೆ ಕಡೆಗೂ ಚಿತ್ರೀಕರಣ ಮುಗಿಸಿದ್ದು ನನ್ನ ಪಾತ್ರ ನನಗೆ ಖುಷಿ ತಂದಿದೆ. ತುಂಬಾ ವರ್ಷಗಳಿಂದ ಹಳ್ಳಿ ಹುಡುಗಿಯ ಪಾತ್ರ ಮಾಡುವ ಆಸೆ ಇತ್ತು. ಅದು ಈ ಚಿತ್ರದಿಂದ ಈಡೇರಿದೆ’ ಎಂದರು.

ಹಿರಿಯ ನಟ ಉಮೇಶ್ ಮಾತನಾಡಿ ನಮ್ಮಂತಹ ಹಿರಿಯ ಕಲಾವಿದನಿಗೆ ಚಿತ್ರದಲ್ಲಿ ಅವಕಾಶ ಕೊಟ್ಟಿರುವುದಕ್ಕೆ ಮುನಿಕೃಷ್ಣ ಅವರಿಗೆ ಧನ್ಯವಾದ ಹೇಳಿದರು. ಅಲ್ಲದೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತು ಇನ್ನೋರ್ವ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಚಿತ್ರದ ಹಾಡುಗಳು ಹಾಗೂ ಸಂಗೀತ ಉತ್ತಮ ಆಗಿ ಮೂಡಿ ಬಂದಿದೆ. ಒಟ್ಟೂ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುವುದರಲ್ಲಿ ಅನುಮಾನ ಇಲ್ಲ. ಚಿತ್ರ ಆಗಸ್ಟ್ 29ಕ್ಕೆ ಬಿಡುಗಡೆ ಆಗುತ್ತಿದೆ ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಿ ಎಂದು ಮನವಿ ಮಾಡಿದರು.

ಚಿತ್ರದ ವಿತರಕರು ಮಾತನಾಡಿ ‘ ಮುರುಗ S/o ಕಾನೂನು ‘ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಇದನ್ನು ಗಾಂಧಿಯವರದ ಭೂಮಿಕಾ ಚಿತ್ರಮಂದಿರದಲ್ಲಿ ಹಾಗೂ ರಾಜ್ಯಾದ್ಯಂತ ವಿಶೇಷವಾಗಿ ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

Visited 1 times, 1 visit(s) today
error: Content is protected !!