Cini NewsSandalwoodTV Serial

ಮೋಕ್ಷಿತ ಪೈ ಹಾಗೂ ವಿನು ಗೌಡ ನಟನೆಯ  “ಮಿಡಲ್‌ಕ್ಲಾಸ್ ರಾಮಾಯಣ” ಬರಲು ತಯಾರಿ.

Spread the love

ಸ್ಯಾಂಡಲ್ ವುಡ್ ನಲ್ಲಿ ಕೌಟುಂಬಿಕ ಮನೋರಂಜನ ಹಾಸ್ಯ ಭರಿತ ಚಿತ್ರ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ಅದುವೇ “ಮಿಡಲ್ ಕ್ಲಾಸ್ ರಾಮಾಯಣ” ಸಿನಿಮಾ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆಯಲಾಗಿದೆ. ಟೈಟಲ್ ಕೇಳಿದಾಕ್ಷಣವೇ ಗೊತ್ತಾಗುತ್ತೆ ಇದೊಂದು ಮಿಡಲ್ ಕ್ಲಾಸ್ ರಾಮಾಯಣ ಅನ್ನೋದು. ನಾಯಕ ಕಪ್ಪು ಹುಡುಗಿಯನ್ನು ಯಾಕೆ ಇಷ್ಟ ಪಟ್ಟು ಮದುವೆಯಾದ ಅದರ ಮದ್ಯ ಅವನು ಏನನ್ನು ಎದುರಿಸಿದ ಇವುಗಳೆಲ್ಲದರ ನಡುವೆ ನಡೆಯುವ ಕಥೆಯೇ ಮಿಡಲ್ ಕ್ಲಾಸ್ ರಾಮಾಯಣದ ಸಾರಾಂಶ. ಈಗಾಗಲೇ ಎರಡು ಹಾಡುಗಳು ರಿಲೀಸ್ ಆಗಿದ್ದು, ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅಂಜನಾದ್ರಿ ಪ್ರೊಡಕ್ಷನ್ ಹಾಗೂ ವಾವ್ ಸ್ಟುಡಿಯೋಸ್ ಅಡಿಯಲ್ಲಿ ಜಯರಾಮ್ ಗಂಗಪ್ಪನಹಳ್ಳಿ ಅವರು ನಿರ್ಮಾಣ ಮಾಡಿದ್ದಾರೆ. ಧನುಶ್ ಗೌಡ ವಿ ನಿರ್ದೇಶನ ಮಾಡಿದ್ದು, ಮೋಕ್ಷಿತಾ ಪೈ ಹಾಗೂ ವಿನು ಗೌಡ ಜೊತೆಯಾಗಿ ನಟಿಸಿದ್ದಾರೆ.

ಮೋಕ್ಷಿತಾ ಪೈ ಮಾತನಾಡುತ್ತಾ, ಇದು ನನ್ನ ಮೊದಲ ಸಿನಿಮಾ. ಸೀರಿಯಲ್ ಬೇರೆ, ರಿಯಾಲಿಟಿ ಶೋ ಬೇರೆ. ಒಂದು ಸಿನಿಮಾ ಮಾಡಿ ರಿಲೀಸ್ ಆಗೋದು ಇದೆಯಲ್ಲ ಅದು ಮುಖ್ಯ. ಸದ್ಯ ನಮ್ಮ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾ ರಿಲೀಸ್ ಆಗ್ತಾ ಇದೆ. ಸಿನಿಮಾದಲ್ಲಿ ಎಲ್ಲೂ ಕಾಂಪ್ರೂಮೈಸ್ ಆಗದ ರೀತಿ ಕೆಲಸವನ್ನ ನಿಭಾಯಿಸಿದ್ದಾರೆ. ನಾಯಕ ವಿನು ಗೌಡ ಮಾತನಾಡಿ, ನಾನು ಇಂಡಸ್ಟ್ರಿಗೆ ಬರಬೇಕು ಅಂತ ನೇರವಾಗಿ ಬಂದಿದ್ದಲ್ಲ. ಒಂದೊಂದು ಹೆಜ್ಜೆಗೂ ಸಾಕಷ್ಟು ಕಷ್ಟಪಟ್ಟಿದ್ದೀವಿ. ಮೂರು ವರ್ಷದಿಂದ ಕೂಡ ಪ್ಲ್ಯಾನ್ ಮಾಡಿಕೊಂಡು ಬಂದಿದ್ದೇವೆ. ಪಾತ್ರ ವಿಭಿನ್ನವಾಗಿದೆ ಎಂದಿದ್ದಾರೆ.

 

ನಿರ್ದೇಶಕ ಧನುಶ್ ಗೌಡ ವಿ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಮೊದಲು ರೆಬೆಲ್ ಹುಡುಗರು ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ. ಮಿಡಲ್ ಕ್ಲಾಸ್ ರಾಮಾಯಣ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಸಿದ್ಧವಾಗಿದೆ. ಆದರೆ ಮೊದಲು ಕನ್ನಡ ಭಾಷೆಯ ಸಿನಿಮಾ ರಿಲೀಸ್ ಮಾಡ್ತೇವೆ. ಈ  ಕಥೆ ರೆಗ್ಯುಲರ್ ಪ್ಯಾಟ್ರನ್ ಇಲ್ಲ. ಕಮರ್ಷಿಯಲ್ ಸಾಂಗ್, ಕಮರ್ಷಿಯಲ್ ಫೈಟ್ ಸಿನಿಮಾದಲ್ಲಿ ಇಲ್ಲ. ಕಥೆ ತುಂಬಾ ಎಂಟರ್ಟೈನ್ಮೆಂಟ್ ಆಗಿದೆ ಎಂದಿದ್ದಾರೆ.

ನಿರ್ಮಾಪಕ ಜಯರಾಮ್ ಗಂಗಪ್ಪನಹಳ್ಳಿ ಮಾತನಾಡಿ, ಈಗ ಸಿನಿಮಾ‌ ಮಾಡಿದ್ದೀವಿ ಎಲ್ಲರ ಸಪೋರ್ಟ್ ಮಾಡಬೇಕು. ಫ್ಯಾಮಿಲಿ  ಎಂಟರ್ಟೈನ್ಮೆಂಟ್ ಸಿನಿಮಾ. ಯಾವುದೇ‌ ಮುಜುಗರವಿಲ್ಲ. ಎಲ್ಲರೂ ಖುಷಿಯಿಂದ ಕೂತು ಸಿನಿಮಾ ನೋಡಬಹುದು ಎಂದಿದ್ದಾರೆ. ಸಂಗೀತಾ – ಅಲೆಕ್ಸ್, ಡಿಒಪಿ – ವಿನೋದ್ ಲೋಕಣ್ಣನವರ್, ಡೈಲಾಗ್ಸ್ ಮತ್ತು ಸ್ಕ್ರೀನ್ ಪ್ಲೇ ಸಿ ಉದಯ್ ಕುಮಾರ್ ಹಾಗೂ  ಧನುಷ್ ಗೌಡ ವಿ ಅವರು ಬರೆದಿದ್ದಾರೆ . ಎಸ್ ನಾರಾಯಣ್, ವೀಣಾ ಸುಂದರ್, ‌ಮಜಾಭಾರತ ಜಗ್ಗಪ್ಪ , ಯುಕ್ತ ಪೆರ್ವಿ, ಬಾಲರಾಜ್ ವಾಡಿ , ವಿಜಯ್ ಚಂದೂರ್, ಬ್ಯಾಂಕ್ ಜನಾರ್ಧನ್ , ಸುಂದರ್ ವೀಣಾ, ಶೋಭರಾಜ್, ತುಕಾಲಿ ಸಂತೋಷ, ಹುಲಿ ಕಾರ್ತಿಕ್, ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

Visited 1 times, 1 visit(s) today
error: Content is protected !!