“ಸರ್ಕಾರಿ ನ್ಯಾಯಬೆಲೆ ಅಂಗಡಿ” ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುರಾದ ದೊಡ್ಡ ಅರಸಿನಕೆರೆಯಲ್ಲಿ “ಸರ್ಕಾರಿ ನ್ಯಾಯಬೆಲೆ ಅಂಗಡಿ” ಯ ಮೊದಲ ಹಂತದ ಚಿತ್ರೀಕರಣ ಮುಗಿಸಿ ಮುಗಿಸಿದ್ದು , ಈ ಚಿತ್ರದ ಕುರಿತು ಮಾಹಿತಿ ನೀಡಲು ಚಿತ್ರತಂಡ ಮೇಕಿಂಗ್ ವಿಡಿಯೋವನ್ನು ಪ್ರದರ್ಶನ ಮಾಡುದ್ರು , ತದನಂತರ ಚಿತ್ರೀಕರಣದ ಕುರಿತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಇದೇ ಸಂದರ್ಭ ಇದೇ ಸಂದರ್ಭದಲ್ಲಿ ಬೆಂಗಳೂರಿನ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸತೀಶ್ ಕಡತ್ ಮಲೈ , ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಒಕ್ಕೂಟದ ಅಧ್ಯಕ್ಷರಾದ ಟಿ.ಕೃಷ್ಣಪ್ಪ , ಶಾಸಕ, ನಟ , ಕುಮಾರ್ ಬಂಗಾರಪ್ಪ , ಚೆಲುವ ಮೂರ್ತಿ , ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಾ. ಮ. ಹರೀಶ್ , ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಇಡೀ ಚಿತ್ರತಂಡ ಹಾಜರಿದ್ದರು.
ಇನ್ನು ಈ ಚಿತ್ರದ ಬೆನ್ನೆಲುಬಾಗಿ ಕಥೆ , ಚಿತ್ರಕಥೆ, ಸಂಭಾಷಣೆಯಲ್ಲಿ ತೊಡಗಿಸಿಕೊಂಡಿರುವಂತಹ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಮಾತನಾಡುತ್ತಾ ಈ ಕಥೆಗೆ ಸ್ಪೂರ್ತಿ ನಮ್ಮ ನಿರ್ಮಾಪಕಿ ಆದ ಪದ್ಮಾವತಿ , ಅವರು ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದು , ಅದರ ಹಾಗೂ ಹೋಗುಗಳು , ವಿತರಣೆಯ ಅನುಭವಗಳ ವಿಚಾರವನ್ನು ತೆಗೆದುಕೊಂಡು ಜೊತೆಗೆ ಬಯೋಮೆಟ್ರಿಕ್ ಸಮಸ್ಯೆ ಸೇರಿದಂತೆ ಹೆಣ್ಣು ಒಬ್ಬಳು ರೇಷನ್ ಸ್ಕ್ಯಾಮ್ ಅನ್ನು ಹೇಗೆ ತಡೆಗಟ್ಟುತ್ತಾಳೆ, ಆಕೆ ಮುಂದೆ ಯಾಕೆ ರೆಬೆಲ್ ಆಗುತ್ತಾಳೆ ಅನ್ನೋದನ್ನ ಹೇಳುವುದರ ಜೊತೆಗೆ ನ್ಯಾಯಬೆಲೆ ಅಂಗಡಿ ಯಾವ ಉದ್ದೇಶಕ್ಕೋಸ್ಕರ ಇದೆ ಎಂಬುವುದೇ ನಮ್ಮ ಕಥೆ. ಈ ಚಿತ್ರವ ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ. ಒಂದು ಸಂದೇಶವನ್ನು ಸೂಕ್ಷ್ಮವಾಗಿ ಹೇಳುರುವಂತಹ ಚಿತ್ರ ಇದಾಗಿದೆ ಎಂದರು. ಹಾಗೆಯೇ ಚಿತ್ರದ ನಿರ್ದೇಶಕ ಸಾತ್ವಿಕ್ ಪವನ್ ಮಾತನಾಡುತ್ತಾ ಈಗಾಗಲೇ ಮೊದಲ ಹಂತದ 20 ದಿನ ಚಿತ್ರೀಕರಣವನ್ನು ಮುಗಿಸಿದ್ದೇವೆ. ಮಳೆ ಇರುವ ಕಾರಣ ಎರಡನೇ ಹಂತದ ಚಿತ್ರೀಕರಣವನ್ನು ಇದೇ ತಿಂಗಳು 28 ರಿಂದ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದೇವೆ. ಈ ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಹ ಅಂಶವನ್ನು ಹೇಳಲು ಹೊರಟಿದ್ದೇವೆ. ಈ ಚಿತ್ರಕ್ಕೆ ನಾನೇ ಛಾಯಾಗ್ರಹಣ ಮಾಡುತ್ತಿದ್ದು , ಕಲಾವಿದರಾದ ಕುಮಾರ್ ಬಂಗಾರಪ್ಪ , ರಾಗಿಣಿ ದ್ವಿವೇದಿ ಸೇರಿದಂತೆ ನಮ್ಮ ತಾಂತ್ರಿಕ ತಂಡವು ಕೂಡ ತುಂಬಾ ಸಹಕಾರ ನೀಡಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು , ಈಗಾಗಲೇ ಒಂದು ವಿಶೇಷವಾದ ರಾಮೋತ್ಸವ ಹಾಡನ್ನು ಕೊರಿಯೋಗ್ರಾಫರ್ ಬಾಲ ಮಾಸ್ಟರ್ ನೇತೃತ್ವದಲ್ಲಿ ಅದ್ದೂರಿಯಾಗಿ ಚಿತೆಕರಿಸಲಾಗಿದೆ. ನಮ್ಮ ಚಿತ್ರದ ಇಬ್ಬರು ನಿರ್ಮಾಪಕರು ಉತ್ತಮ ಸಹಕಾರ ನಡೆದಿದ್ದು , ನಮ್ಮ ತಂಡಕ್ಕೆ ಬೆನ್ನೆಲುಬಾಗಿ ಬಾಮ ಹರೀಶ್ ಹಾಗೂ ಬಾಮ ಗಿರೀಶ್ ಬೆಂಬಲವಾಗಿ ನಿಂತಿದ್ದಾರೆ.
ಜಯಶಂಕರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ಮಾಪಕಿಯಾದ ಪದ್ಮಾವತಿ ಚಂದ್ರಶೇಖರ್ ಮಾತನಾಡುತ್ತ ನಾನು ಕೂಡ ನ್ಯಾಯಬೆಲೆ ಅಂಗಡಿ ನಡೆಸುತ್ತೇನೆ. ವಿತರಣೆ ಮಾಡುವವರ ಕಷ್ಟವೇ ಬಹಳ ಜಾಸ್ತಿ ಇದೆ, ಇಲ್ಲೂ ಲೋಪದೋಷಗಳು ಇದೆ. ಅದನ್ನೆಲ್ಲ ಹೇಗೆ ಸರಿಪಡಿಸಬಹುದು ಎಂಬುದನ್ನು ನಾವು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ. ಕಥೆ ತುಂಬಾ ಚೆನ್ನಾಗಿದ್ದು , ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ನಮ್ಮ ಚಿತ್ರಕ್ಕೆ ಸಹಕಾರ ಮಾಡುತ್ತಿರುವ ಎಲ್ಲಾ ಗಣ್ಯರಿಗೂ ಧನ್ಯವಾದ ಹೇಳುತ್ತೇನೆ ಮಾಧ್ಯಮದವರ ಬೆಂಬಲ ಇರಲಿ ಎಂದು ಕೇಳಿಕೊಂಡರು. ನಂತರ ಇನ್ನೋರ್ವ ನಿರ್ಮಾಪಕಿ ಮಾತನಾಡುತ್ತಾ ತೇಜು ಮೂರ್ತಿ ಮಾತನಾಡುತ್ತಾ ಚಿತ್ರದ ಈ ಕಥೆ ಬಹಳ ಇಷ್ಟವಾಯಿತು , ಹಾಗಾಗಿ ನಾವು ಈ ಸಿನಿಮಾ ಮಾಡುತ್ತಿದ್ದೇವೆ ನಮ್ಮ ತಂಡಕ್ಕೆ ಬೆಂಬಲ ನೀಡಿ ಎಂದರು. ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಒಕ್ಕೂಟದ ಅಧ್ಯಕ್ಷರಾದ ಟಿ.ಕೃಷ್ಣಪ್ಪ ಮಾತನಾಡುತ್ತಾ ಈ ತಂಡ ಬಹಳ ಒಂದು ಉತ್ತಮ ಚಿತ್ರವನ್ನು ಮಾಡುತ್ತಿದೆ. ಹಾಗೆ ನಾನು ಕೂಡ ಒಂದು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ೧೦ ಕೆಜಿ ಅಕ್ಕಿ ಕೊಟ್ಟಿಲ್ಲ, ಅದು ನಮ್ಮ ರಾಜ್ಯದಲ್ಲೇ ಮೊದಲ ಬಾರಿಗೆ ಆಗಿದೆ, ನಾವು ಪ್ರಾಮಾಣಿಕವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಇಲ್ಲೂ ಕೂಡ ಒಂದಷ್ಟು ಲೋಪ ದೋಷಳು ಇದೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಬಿಪಿಎಲ್ ಕಾರ್ಡ್ದಾರರಿಗೆ ಅಚ್ಚುಕಟ್ಟಾಗಿ ತಲುಪುತ್ತಿದೆ. ಈ ಚಿತ್ರದ ಮೂಲಕ ಒಂದಷ್ಟು ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಸುವ ಹಾದಿಯಲ್ಲಿ ಚಿತ್ರತಂಡ ಮುಂದೆ ಸಾಗಿದೆ. ಭಾಮ ಹರೀಶ್ ಇದರ ಜವಾಬ್ದಾರಿ ತೆಗೆದುಕೊಂಡು ಇಡೀ ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ. ಎಲ್ಲರೂ ಸಹಕಾರ ಮಾಡಿ ಎಂದರು.
ನಟ ಕುಮಾರ್ ಬಂಗಾರಪ್ಪ ಮಾತನಾಡುತ್ತಾ ನನ್ನನ್ನ ಈ ತಂಡ ಭೇಟಿ ಮಾಡಿದಾಗ ನಾನ್ಯಾಕೆ ಬೇಕು ಎಂಬ ಪ್ರಶ್ನೆ ಮೂಡಿತ್ತು , ಆದರೆ ಚಿತ್ರೀಕರಣದಲ್ಲಿ ಪಾಲ್ಗೊಂಡ ನಂತರ ಒಂದು ಉತ್ತಮ ಚಿತ್ರದಲ್ಲಿ ನಾನು ಇದ್ದೇನೆ ಅನ್ನೋದೇ ನನಗೆ ಖುಷಿಯಾಗಿದೆ. ಹಿರಿಯ ನಿರ್ದೇಶಕ ಬಿ .ರಾಮಮೂರ್ತಿ ಅವರ ಜೊತೆ ನನ್ನ ಒಡನಾಟ ಬಹಳ ವರ್ಷದ್ದು ಹಾಗೂ ನಿರ್ದೇಶಕ ಪವನ್ ಕೂಡ ಬಹಳ ಚೆನ್ನಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ನಮ್ಮ ಬಾಮ ಹರೀಶ್ ತಂಡಕ್ಕೆ ಸಾರಥಿಯಾಗಿ ನಿಂತಿದ್ದಾರೆ. ಹಾಗೆ ನಾವು ಚಿತ್ರೀಕರಣ ಮಾಡಿದಂತಹ ಸ್ಥಳ ನಮ್ಮ ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟೂರು ಆ ಊರಿನ ಜನರು ಬಹಳ ಪ್ರೀತಿ ಸಹಕಾರ ತೋರುತ್ತ , ನಮ್ಮ ಚಿತ್ರಿಕರಣಕ್ಕೆ ಬೆಂಬಲ ನೀಡಿದರು , ಹಾಗೆ ನಮ್ಮ ಮನೆಗೆ ಬನ್ನಿ ಅಂತ ಪ್ರತಿದಿನ ಹಬ್ಬದ ಊಟವನೇ ಹಾಕಿದ್ದು ವಿಶೇಷವಾಗಿದ್ದು, ಒಳ್ಳೆ ಅನುಭವ. ಈಗ ಮೇಕಿಂಗ್ ವಿಡಿಯೋ ನೋಡಿದಾಗ ಇನ್ನು ಸ್ವಲ್ಪ ಸ್ಲಿಮ್ ಆಗಬೇಕು ಅಂತ ಅನಿಸಿತು, ಮುಂದಿನ ದಿನಗಳಲ್ಲಿ ಆ ಪ್ರಯತ್ನ ಮಾಡುತ್ತೇನೆ. ಉತ್ತಮ ಅವಕಾಶಗಳು ಬಂದರೆ ಖಂಡಿತ ಚಿತ್ರದಲ್ಲಿ ನಡೆಸುತ್ತೇನೆ. ಹಾಗೆಯೇ ನಮ್ಮ ಮಹಿಳ ನಿರ್ಮಾಪಕರಿಗೆ ಯಶಸ್ಸು ಸಿಗಬೇಕು ಎಂದರು. ನಾಯಕಿ ರಾಗಿಣಿ ದ್ವಿವೇದಿ ಮಾತನಾಡುತ್ತ ನನಗೆ ಸಿಕ್ಕಿರುವ ಇದೊಂದು ಪಾತ್ರ ಒಂದು ಚಾಲೆಂಜಿಂಗ್ ಆಗಿತ್ತು. ಗ್ಲಾಮರಸ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ನನಗೆ ಈ ಪಾತ್ರ ಬಹಳ ವಿಶೇಷ , ಒಂದು ಹಳ್ಳಿಯ ವಾತಾವರಣ ಅಲ್ಲಿನ ಹೆಣ್ಣು ಮಗಳ ಬದುಕು , ಪರಿಸ್ಥಿತಿಯ ಸುತ್ತ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಅನ್ಯಾಯದ ವಿರುದ್ಧ ಇನ್ನೊಬ್ಬಳು ಹೇಗೆ ಶಕ್ತಿಯಾಗಿ ನಿಲ್ಲುತ್ತಾಳೆ ಎಂಬುವುದನ್ನು ಪಾರ್ವತಿ ಎಂಬ ಪಾತ್ರದಲ್ಲಿ ಮಾಡಿದ್ದೇನೆ. ಎರಡು ಶೇಡ್ ಗಳ ಸಂದರ್ಭವನ್ನು ಎದುರಿಸುವ ಹೆಣ್ಣಾಗಿ ಕಾಣುತ್ತೇನೆ. ಈ ಚಿತ್ರದ ಮೂಲಕ ಒಂದಷ್ಟು ವಿಚಾರಗಳ ಜೊತೆ ಸಂದೇಶವನ್ನು ಹೇಳುತ್ತೇವೆ. ಮಹಿಳಾ ನಿರ್ಮಾಪಕೀಯರು ಚಿತ್ರ ನಿರ್ಮಿಸಿರುವುದರಿಂದ ನನಗೆ ಈ ಚಿತ್ರದ ಮೇಲೆ ಹೆಚ್ಚು ಪ್ರೀತಿ. ವಿಶೇಷವಾಗಿ ನಟ ಕುಮಾರ್ ಬಂಗಾರಪ್ಪ ರವರ ಜೊತೆ ಅಭಿನಯಿಸಿದ್ದು ಸಂತೋಷವಾಯಿತು. ಹಾಗೆ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ರವರ ಟೀಮ್ ನಲ್ಲಿ ನಾನು ಅಭಯಸಿದ್ದೆ ಅದೃಷ್ಟ , ಇನ್ನು ಚಿತ್ರೀಕರಣ ಬಾಕಿ ಇದೆ ಸಿನಿಮಾ ಉತ್ತಮವಾಗಿ ಬರುತ್ತಿದೆ. ನಿಮ್ಮ ಸಪೋರ್ಟ್ ನಮ್ಮ ತಂಡದ ಮೇಲೆ ಇರಲಿ ಎಂದರು.
ಈ ಚಿತ್ರಕ್ಕೆ ಅನಂತ್ ಆರ್ಯನ್ ಸಂಗೀತ ನೀಡಿದ್ದು , ಮೂರು ಹಾಡುಗಳನ್ನು ಒಳಗೊಂಡಿರುವ ಈ ಚಿತ್ರದ ಒಂದು ಹಾಡಿನ ಚಿತ್ರೀಕರಣವನ್ನು ಡಾನ್ಸ್ ಮಾಸ್ಟರ್ ಬಾಲ ಚಿತ್ರೀಕರಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ರಾಜಕಾರಣಿ ಶಿವರಾಮೇಗೌಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಹಿರಿಯ ನಟ ದೊಡ್ಡಣ್ಣ , ಮಂಡ್ಯ ಮೂಲದ ಅಂಬರೀಶ್ ಅಭಿಮಾನಿ ರುದ್ರೆ ಗೌಡ್ರು ಅಭಿನಯಿಸಿದ್ದು , ನೋಡಲು ಅಂಬರೀಶ್ ರಂತೆ ಕಾಣುತ್ತಾರೆ. ಇನ್ನು ಈ ಚಿತ್ರದಲ್ಲಿ ಹಲವಾರು ಹಿರಿಯ ಹಾಗೂ ಯುವ ಪ್ರತಿಭೆಗಳು ಅಭಿನಯಿಸಿದ್ದು, ತಿಂಗಳ ಕೊನೆಯಲ್ಲಿ ತಂಡ ಚಿತ್ರಿಕರಣಕ್ಕೆ ಹೊರಡಲಿದೆ. ಇಡೀ ಚಿತ್ರಕ್ಕೆ ಬೆನ್ನೆಲುಬಾಗಿ ನಿರ್ಮಾಪಕ ಬಾಮ ಹರೀಶ್ ಹಾಗೂ ಬಾಮ ಗಿರೀಶ್ ನಿಂತಿದ್ದಾರೆ. ಸದ್ಯದಲ್ಲೇ ಚಿತ್ರ ತಂಡ ಮತ್ತಷ್ಟು ಮಾಹಿತಿಯನ್ನು ನೀಡಲಿದೆಯಂತೆ.