Cini NewsSandalwood

ಜೋಗಿ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ನೇತೃತ್ವದಲ್ಲಿ “ಸುವರ್ಣ ಸಂಕಲ್ಪ” ಅಮೃತಘಳಿಗೆ

Spread the love

ಕನ್ನಡ ಕಿರುತೆರೆ ವಾಹಿಗಳಲ್ಲಿ ಪ್ರತಿ ಮುಂಜಾನೆ ಜ್ಯೋತಿಷಿಗಳ ಮೂಲಕ ಜನರ ಸಮಸ್ಯೆಗಳೊಂದಿಗೆ ಪರಿಹಾರವನ್ನು ಕಂಡುಕೊಳ್ಳುವಂತಹ ಕಾರ್ಯಕ್ರಮಗಳು ನಿರಂತರವಾಗಿ ಬರುತ್ತಿವೆ. ಆ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ “ಸುವರ್ಣ ಸಂಕಲ್ಪ” ಅಮೃತಗಳಿಗೆ ಎಂಬ ವಿನೂತನ ಕಾರ್ಯಕ್ರಮ ಶುರುವಾಗುತ್ತಿದ್ದು , ಈ ಕಾರ್ಯಕ್ರಮದ ನಿರ್ಮಾಣದ ಜವಾಬ್ದಾರಿಯನ್ನು ಚಿತ್ರೋದ್ಯಮದಲ್ಲಿ ಕಳೆದ 4೦ ವರ್ಷಗಳಿಂದ ಅಶ್ವಿನಿ ಆಡಿಯೋ ಕಂಪನಿ ನಡೆಸಿಕೊಂಡು ಬರುತ್ತಿರುವ ಅಶ್ವಿನಿ ರಾಮಪ್ರಸಾದ್ ವಹಿಸಿಕೊಂಡಿದ್ದಾರೆ.

ಅವರೀಗ ಕಿರುತೆರೆ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದು , ದಶಕಗಳ ಹಿಂದೆ ಸಾವಿರಾರು ಜಾನಪದ, ಭಕ್ತಿಗೀತೆಗಳನ್ನು ತಮ್ಮ ಆಡಿಯೋ ಕಂಪನಿ ಮೂಲಕ ಜನರಿಗೆ ಕೇಳಿಸಿದ ರಾಮ್ ಪ್ರಸಾದ್ ಅವರಿಗೆ ಮೊದಲಿಂದಲೂ ಕಿರುತೆರೆ ಬಗ್ಗೆ ಆಸಕ್ತಿಯಿತ್ತು. ಆದಕ್ಕೆ ಸುವರ್ಣ ವಾಹಿನಿ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ.

ಸ್ಯಾಂಡಲ್ವುಡ್ ನಲ್ಲಿ ಶಿವಣ್ಣ ಹಾಗೂ ಪ್ರೇಮ್ ಕಾಂಬಿನೇಶನ್ ನ ಜೋಗಿ ಚಿತ್ರ ನಿರ್ಮಿಸುವ ಮೂಲಕ ದಾಖಲೆ ಬರೆದ ಅಶ್ವಿನಿ ರಾಮ್ ಪ್ರಸಾದ್ ಆನಂತರವೂ ಹಲವಾರು ಯಶಸ್ವೀ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ “ಘಾರ್ಗ* ಚಿತ್ರದ ಮೂಲಕ ತಮ್ಮ ಪುತ್ರನನ್ನೂ ಹೀರೋ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಧಾರ್ಮಿಕ ವಾಸ್ತುಶಾಸ್ತ್ರ , ಜಲ ಶಾಸ್ತ್ರದ ಹಿನ್ನೆಲೆಯ “ಸುವರ್ಣ ಸಂಕಲ್ಪ ಅಮೃತಘಳಿಗೆ” ಕಾರ್ಯಕ್ರಮ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಈ ಕಾರ್ಯಕ್ರಮವನ್ನು ಕರ್ನಾಟಕ ಜ್ಯೋತಿಷ್ಯರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ವಿಶ್ವನಾಥ ಭಾಗವತ ಗುರೂಜಿಯವರು ನಡೆಸಿಕೊಡಲಿದ್ದಾರೆ. ಇವರು ಮೂಲತಃ ಉತ್ತರ ಕರ್ನಾಟಕದವರಾಗಿದ್ದು , ಅರ್ಚಕರ ಕುಟುಂಬದಲ್ಲಿ ಬೆಳೆದಂತಹ ಜ್ಞಾನಿಯಾಗಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುವುದರ ಜೊತೆಗೆ ಅವರ ಮನೆ ಮನೆಗೆ ತೆರಳಿ ಸೂಕ್ತ ಪರಿಹಾರ ನೀಡಲಿದ್ದಾರಂತೆ. ಅದರಲ್ಲೂ ವಿಶೇಷವಾಗಿ ಜಲ ಜ್ಯೋತಿಷ್ಯದ ಕುರಿತು ಮಾಹಿತಿ ನೀಡುವುದರ ಜೊತೆಗೆ ಸರ್ವರಿಗೂ ಶುಭವಾಗುವಂತಹ ಸಲಹೆಗಳನ್ನು ನೀಡಲಿದ್ದಾರಂತೆ.

ಇನ್ನು ನಿರೂಪಕಿಯಾದ ಅಖಿಲಾ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಇವರು ಗಾಯಕ್ಕೆ ಆಗಿದ್ದು , ಪ್ರತಿ ದಿನ ಆರಂಭದಲ್ಲಿ ಶ್ಲೋಕಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಸೆಟ್ ಕೂಡ ಹಾಕಿದೆ. ಇದೆ ಆಗಸ್ಟ್ 4 ರಿಂದ ಪ್ರತಿದಿನ ಬೆ.7-30ಕ್ಕೆ ಸುವರ್ಣ ಸಂಕಲ್ಪ ಅಮೃತಘಳಿಗೆ ಪ್ರಸಾರವಾಗಲಿದೆ.

ಈ ಬಗ್ಗೆ ಮಾತನಾಡಿದ ರಾಮ್ ಪ್ರಸಾದ್ ಈಗಾಗಲೇ 6 ವರ್ಷಗಳಿಂದ ನಡೆದುಕೊಂಡು ಬಂದಿರುವ ಕಾರ್ಯಕ್ರಮ ವಿದು. ಇದರ ನಂತರ ನಾವೇನು ಮಾಡಬೇಕು ಅಂತ ಪ್ಲಾನ್ ಮಾಡುತ್ತಿದ್ದೇವೆ. ರಾಜ್ಯದ, ದೇಶದ ಎಲ್ಲಾ ಪ್ರಖ್ಯಾತ ದೇವಸ್ಥಾನಗಳಿಗೂ ವಿಸಿಟ್ ಮಾಡಬೇಕೆಂಬ ಪ್ಲಾನಿದೆ. ಅಲ್ಲದೆ ನಮಗೆ ಯಾರೇ ಕಾಲ್ ಮಾಡಿದರೂ ಬಡವ, ಬಲ್ಲಿದ ಅಂತ ನೋಡದೆ ಅವರ ಮನೆಗಳಿಗೆ ಹೋಗಿ ವಾಸ್ತು ಪರಿಹಾರ ಸೂಚಿಸುತ್ತೇವೆ ಎಂದು ಹೇಳಿದರು‌. ಇದರ ಜತೆಗೆ ಸಂಜೀವಿನಿ ಸಂಕಲ್ಪ, ಯೋಗ ಸಂಕಲ್ಪ, ಮಂತ್ರ ಸಂಕಲ್ಪ ಹೀಗೆ ಅನೇಕ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯಲಿದೆ.

ವೇದಿಕೆಯಲ್ಲಿ ವಿಶ್ವನಾಥ ಗುರೂಜಿ, ನಿರೂಪಕಿ ಅಖಿಲಾ ಹಾಗೂ ಸುವರ್ಣ ವಾಹಿನಿಯ ಮುಖ್ಯಸ್ಥರೂ ಸುವರ್ಣ ಸಂಕಲ್ಪ ಅಮೃತಘಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

Visited 1 times, 1 visit(s) today
error: Content is protected !!