Cini NewsSandalwood

“ಗೌರಿಶಂಕರ” ಚಿತ್ರಕ್ಕೆ ಮುಹೂರ್ತ

Spread the love

’ಗೌರಿಶಂಕರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಿರ್ಮಾಪಕ ರಾಜಣ್ಣ ಕ್ಯಾಮಾರ ಆನ್ ಮಾಡಿದರೆ, ಶಿವಲಿಂಗ (ಗಾಜನೂರ್) ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಶ್ ಚಿನ್ಮಯಿ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಶುಭ ಫಿಲಂ ಫ್ಯಾಕ್ಟರಿ ಅಂಡ್ ಟೀಂ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.ಗೋಲ್ಡ್ ಮೆಡಲ್ ಪಡೆದ ಹುಡುಗನೊಬ್ಬನಿಗೆ, ಆತನ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುವುದಿಲ್ಲ. ಇದರಿಂದ ಮನನೊಂದು ತನ್ನ ಬುದ್ದಿ ಶಕ್ತಿಯಿಂದ ಜೀವನದಲ್ಲಿ ಹೇಗೆ ಮುಂದೆ ಬರುತ್ತಾನೆ? ಇತರರಿಗೆ ಯಾವ ರೀತಿ ಮಾರ್ಗ ರೂಪಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

ಹೊಸ ಪ್ರತಿಭೆಗಳಾದ ಸುನಿಲ್‌ಭಂಗಿ, ಅಭಿಷೇಕ್, ಕುಸುಮ, ಪ್ರಿಯಾನಾಗಣ್ಣ ಇವರೊಂದಿಗೆ ಹಿರಿಯ ಕಲಾವಿದರುಗಳಾದ ಬಿರಾದಾರ್, ಗುರುರಾಜಹೊಸಕೋಟೆ, ಕಿಲ್ಲರ್‌ವೆಂಕಟೇಶ್, ಭವ್ಯಾ, ಎನ್.ಎಸ್.ದೇವರಾಜ್ (ನಿಟ್ಟೂರು), ಮನೋಜ್, ಹರೀಶ್, ಸುಬ್ರಮಣಿ ಮಲ್ಲಸಂದ್ರ, ಪ್ರಕಾಶ್‌ರಾಜ್‌ಕುಮಾರ್, ಚಂದ್ರಮೂರ್ತಿ, ಮಂಜುನಾಥ.ಬಿ, ಮೋಹನ್ ಚಿತ್ರದುರ್ಗ ಮುಂತಾದವರು ನಟಿಸುತ್ತಿದ್ದಾರೆ.

ಸಂಗೀತ ಮಹಾರಾಜ್, ಛಾಯಾಗ್ರಹಣ ರವಿ.ಟಿ.ಗೌಡ, ಸಂಕಲನ ರವಿತೇಜ್.ಸಿ.ಹೆಚ್, ಸಾಹಸ ಥ್ರಿಲ್ಲರ್‌ಮಂಜು-ವಿನೋಧ್, ನೃತ್ಯ ಕರಿಯಾನಂದ ಅವರದಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಜೋಗ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Visited 1 times, 1 visit(s) today
error: Content is protected !!