Cini NewsSandalwood

“ಸಂತೋಷ ಸಂಗೀತ” ಚಿತ್ರದ ಟ್ರೇಲರ್ ರೀಲಿಸ್

Spread the love

ಯುವ ಪ್ರತಿಭೆ ಸಿದ್ದು. ಎಸ್ . ನಿರ್ಮಿಸಿ, ನಿರ್ದೇಶಿಸಿರುವ , ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ – ನಾಯಕಿಯಾಗಿ ನಟಿಸಿರುವ “ಸಂತೋಷ ಸಂಗೀತ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಯಾಯಿತು.ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿರವರು ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದರು. ವಿಶೇಷ ಅತಿಥಿಯಾಗಿ ಲಹರಿ ವೇಲು ಅವರು ಆಗಮಿಸಿದ್ದರು. ಈ ಚಿತ್ರವು ‘ಯು’ಪ್ರಮಾಣ ಪತ್ರ ಪಡೆದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಸಂತೋಷ ಸಂಗೀತ” ಚಿತ್ರ ನಿಲ್ಲಲು ನಾಲ್ಕು ಕಾಲು ತುಂಬಾ ಅವಶ್ಯಕತೆ ಇದ್ದು, ತಯಾರಿ, ನಟನೆ, ಎರಡು ಕಾಲದರೆ, ಜನರಿಗೆ ತಲುಪಿಸುವ ಮಾಧ್ಯಮ ಮತ್ತು ವೀಕ್ಷಕರ ಪ್ರೀತಿ ಇನ್ನೆರಡು ಕಾಲು ಆಗಿರುತ್ತದೆ. ಈ ನಾಲ್ಕು ಕಾಲು ನಿಂತರೆ ಸಿನಿಮಾ ನಿಲ್ಲುತ್ತದೆ.

ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನಿರ್ದೇಶಕ ಸಿದ್ದು, ನಾನು ಎಂ.ಸಿ.ಎ ಪದವಿಧರ. ಸಿನಿಮಾ ಪ್ರೇಮಿ. ಒಳ್ಳೆಯ ಸಿನಿಮಾ‌ ನೋಡಿ, ನಾನು ಈ ರೀತಿ ಸಿನಿಮಾ ಮಾಡಬೇಕೆಂದು ಕನಸ್ಸು ಕಂಡವನು. ಆ ಕನಸು ಈಗ ನನಸ್ಸಾಗಿದೆ. ಎಲ್ಲರ ಸಹಕಾರದಿಂದ “ಸಂತೋಷ ಸಂಗೀತ” ಸಿನಿಮಾವನ್ನು ನಾನೇ ನಿರ್ಮಾಣ‌ ಮಾಡಿ ನಿರ್ದೇಶಿಸಿದ್ದೇನೆ.

ಲಾಕ್ ಡೌನ್ ಸಮಯದಲ್ಲಿ ಬರೆದ ಕಥೆ ಇದು. ಲವ್ , ಕಾಮಿಡಿ, ಸಸ್ಪೆನ್ಸ್ ಹೀಗೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು “ಸಂತೋಷ ಸಂಗೀತ” ಚಿತ್ರದಲ್ಲಿದೆ. ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ಈ ಚಿತ್ರದ ನಾಯಕ – ನಾಯಕಿಯಾಗಿ ನಟಿಸಿದ್ದಾರೆ.

ದೊಡ್ಡಣ್ಣ, ಅವಿನಾಶ್, ಲಯ ಕೋಕಿಲ, ಕವನ, ಅಮಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ, ಮಡೆನೂರು ಮನು, ಹನೀಶ್, ನಕ್ಷತ್ರ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದರು.‌

2017 ರಲ್ಲಿ ತೆರೆಕಂಡ” ಹೊಂಬಣ್ಣ” ಚಿತ್ರದ ಮೂಲಕ‌ ಸಿನಿ ಪಯಣ ಆರಂಭಿಸಿದ ನಾನು ಆನಂತರ “ಪ್ರೇಮಂ” ಚಿತ್ರದಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಈ ಚಿತ್ರದಲ್ಲಿ ನನ್ನದು ಉದ್ಯಮಿಯ ಪಾತ್ರ. ನಿಜಜೀವನದಲ್ಲೂ‌ ಪತಿ ಪತ್ನಿಯರಾಗಿರುವ ನಾನು ಹಾಗೂ ರಾಣಿ ವರದ್ , ತೆರೆಯ ಮೇಲೂ ಪತಿ ಪತ್ನಿಯರಾಗೇ ಕಾಣಿಸಿಕೊಂಡಿರುವುದು ವಿಶೇಷ ಎಂದರು‌‌ ನಾಯಕ ಅರ್ನವ್ ವಿನ್ಯಾಸ್. ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ರಾಣಿ ವರದ್ ತಿಳಿಸಿದರು.

 

ಇವರಿಬ್ಬರ ನಡುವೆ ಬರುವ ಹೆಣ್ಣಿನ ಪಾತ್ರ ನನ್ನದು ಎಂದು ನಟಿ‌ ನಕ್ಷತ್ರ ತಿಳಿಸಿದರು. ಕಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ ಮುಂತಾದವರು “ಸಂತೋಷ ಸಂಗೀತ” ಚಿತ್ರದ ಬಗ್ಗೆ ಮಾತನಾಡಿದರು.

Visited 1 times, 1 visit(s) today
error: Content is protected !!