Cini NewsSandalwoodTV Serial

5 ಭಾಷೆಯಲ್ಲಿ “ಜಿರೋ ಟೂ ಒನ್” ಚಿತ್ರಕ್ಕೆ ಗಣ್ಯರಿಂದ ಚಾಲನೆ.

Spread the love

ಇಂದು ಬೆಂಗಳೂರಿನ ಈಜಿಪುರದ ಮಹಾವಿಷ್ಣು ದೇವಾಲಯದಲ್ಲಿ ಜಿರೋ ಟೂ ಹಿರೋ ಸಿನಿಮಾ ಸೆಟ್ಟೇರಿದೆ. ಮೂಲತಃ ಕನ್ನಡಿಗನಾದ ನಾಗವೇಣಿ ಸಂತೋಷ್ ಇಂಥ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇ ಜೀರೋ ಟು ಒನ್ ಎಂಬ ಯುವ ಜನತೆಗೆ ಮೋಟಿವೇಶನ್‌ ಜಾನರ್ ಸಿನಿಮಾ ಈ ಚಿತ್ರ ಇಂಗ್ಲೀಷ್, ಹಿಂದಿ, ಕನ್ನಡ ಸೇರಿ 5ಭಾಷೆಯಲ್ಲಿ ಇದೇ ವರ್ಷ ಸೆಟ್ಟೇರಲು ರೆಡಿಯಾಗ್ತಿದೆ. ಸಿನಿಮಾದ ಮೂಹೂರ್ತ ಇಂದು ನಡೆದಿದೆ.

ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲಗು ಹೀಗೆ 5 ಭಾಷೆಗಳಲ್ಲಿ ಜೀರೋ ಟು ಒನ್ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಸಿನಿಮಾದ ಮುಹೂರ್ತಕ್ಕೆ ನಾಗವೇಣಿ ಸಂತೋಷ್ ಅವರ ಹಿತೈಷಿಗಳು, ಅವಧೂತ ಅರ್ಜುನ್ ಗುರೂಜಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಮತ್ತು ನಿರ್ದೇಶಕ ನಾಗವೇಣಿ ಸಂತೋಷ ಮೂಹೂರ್ತದ ದಿನ ಸಿನಿಮಾ ಜರ್ನಿಯ ಕುರಿತು ಮಾತಾನಾಡಿದ್ರು, ಇವತ್ತಿನ ದಿನ ನಮಗೆ ತುಂಬಾ ಮುಖ್ಯ ಕನ್ನಡ ಮತ್ತು ಇಂಗ್ಲೀಷ್ 2 ಭಾಷೆ ಜೊತೆಗೆ ಭಾರತೀಯ ಭಾಷೆಯಲ್ಲಿ ಬರ್ತಿದೆ.

ಆಗಸ್ಟ್, ಸೆಪ್ಟೆಂಬರ್ ನಲ್ಲಿ ಸಿನಿಮಾ ಬರುತ್ತೆ ನಿಮ್ಮೆಲ್ಲರ ಸಪೋರ್ಟ್ ಮುಖ್ಯ ಹೊಸಬರ ಸಿನಿಮಾ ನಿಮ್ಮೆಲ್ಲರ ಸಪೋರ್ಟ್ ಬೇಕು ನಾನೇ ಎಲ್ಲ ಜವಾಬ್ದಾರಿ ತಗೊಂಡು ಮುಂದೆ ಬರ್ತಿದ್ದೀನಿ ನನ್ನ 13 ವರ್ಷದ ಕನಸಿದು ಪ್ರಯತ್ನ ಪಟ್ಟೆ ಬಟ್ ಯಾರೂ ನನ್ನ ಸಪೋರ್ಟ್ ಗೆ ಬಂದಿಲ್ಲ ಎಲ್ಲದಕ್ಕೂ ಟೈಮ್ ಬೇಕು ನನ್ನ ಜೀವನದ ಜೊತೆ ನಡೆದಿದ್ದು ಆಗಿರಬಹುದು ನಾನೇ ಎಲ್ಲದನ್ನು ಡಿಸೈಡ್ ಮಾಡಿದ್ದೀನಿ ಮುಂಬೈ ನಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟ ಸಿನಿಮಾ ಮಾಡ್ತೀನಿ ಹಿಂದಿಯಲ್ಲೂ ಮಾಡ್ತಿದ್ದೀನಿ ಬಟ್ ಕನ್ನಡ ಮೊದಲು ನಾವು ಕನ್ನಡದ ಜೊತೆಗೆ ಇಂಗ್ಲೀಷ್ ಸಿನಿಮಾವನ್ನು ಕೂಡ ಮಾಡ್ತಿದ್ದೀನಿ ಅಂತ ಮನದ ಮಾತನ್ನಾಡಿದ್ರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವಧೂತ ಅರ್ಜುನ್ ಗುರೂಜಿ ಮಾತಾನಾಡಿ ಯಾವುದೇ ವ್ಯಕ್ತಿಗೆ ತಾನು ಹುಟ್ಟಿದ ನೆಲ ಮಣ್ಣು ಇದರ ಮೇಲೆ ಬಹಳ ಅಭಿಮಾನ ಇರುತ್ತೆ.. ನನಗೂ ಕೂಡ ಕನ್ನಡ ಅನ್ನೋ ಶಬ್ದದ ಮೇಲೆ ತುಂಬಾ ಅಭಿಮಾನ ಹೊಸಬರ ತಂಡ ಒಳ್ಳೆ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ನಮ್ಮೆಲ್ಲರಿಗೂ ಆಸೆ ನಮ್ಮ ಕನ್ನಡ ಸಿನಿಮಾ ಮುಂದೆ ಬರಬೇಕು ಮುಂದಿನ ದಿನಗಳಲ್ಲಿ ನಮ್ಮ ಕನ್ನಡ ಸಿನಿಮಾ ರಂಗ ಬೆಳಿಬೇಕು ಎತ್ತರಕ್ಕೆ ಹೋಗ್ಬೇಕು.. ಎಷ್ಟೋ ಜನ ಕಲಾವಿದರೂ ಕಷ್ಟಪಟ್ಟಿದ್ದಾರೆ ದರ್ಶನ್, ಸುದೀಪ್ ರಾಜ್ ಕುಮಾರ್, ವಿಷ್ಣು ವರ್ಧನ್ ಹೀಗೆ ತುಂಬಾ ಜನ ಇದ್ದಾರೆ ನಾವೆಲ್ಲರೂ ಕಲಾಭಿಮಾನಿಗಳು ಈ ಸಿನಿಮಾರಂಗ ತುಂಬಾ ಕಷ್ಟ ಪಡ್ತಿದ್ದೆ ಅದು ನಿಲ್ಲಬೇಕು ಒಳ್ಳೊಳ್ಳೆ ಸಿನಿಮಾಗಳು ಬರಬೇಕು ಹೊಸಬರ ಸಿನಿಮಾ ಚನ್ನಾಗಿ ಆಗಿದೆ.. ಈ ಸಿನಿಮಾರಂಗಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ರು.

ಸಿನಿಮಾದ ನಾಯಕಿ ಮನಿಷಾ ಭಟ್ ಮಾತಾನಾಡಿ ಸಿನಿಮಾ ಅಂದ ತಕ್ಷಣ ಪಾಸಿಟಿವ್ ವೈಬ್ಸ್ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ.. ನಾವು ಓದ್ಕೊಂಡು ಕೆಲಸ ಮಾಡ್ಕೊಂಡು ಸಿನಿಮಾದಲ್ಲಿ ತುಂಬಾ ಕಷ್ಟಪಟ್ಟು ನಟಿಸಿದ್ದೇನೆ ನಮ್ಮನ್ನ ಬೆಂಬಲಿಸಿ ಪ್ರೋತ್ಸಾಹಿಸಿ ಅಂದ್ರು.

ಮತ್ತೊಬ್ಬ ನಾಯಕಿ ರಕ್ಷಿತಾ ಗೌಡ ಮಾತಾನಾಡಿ ನನ್ನ ಮೊದಲ ಸಿನಿಮಾ ತುಂಬಾ ಖುಷಿ ಇದೆ ಎಲ್ಲರ ಜೀವನದಲ್ಲೂ ಏರಿಳಿತ ಇದ್ದೇ ಇರುತ್ತೆ. ಮೇಯ್ನ್ ಕಂಟೆಂಟ್ ತುಂಬಾ ಮುಖ್ಯ ನಮ್ಮ ಈಗೀನ ಯಂಗ್ ಸ್ಟರ್ಸ್ ಗೆ ಈ ಮೂವಿ ಡೆಡಿಕೇಟ್ ಮಾಡ್ತೀವಿ ಸಕ್ಸಸ್ ನಾ ತುಂಬಾ ಖುಷಿಯಿಂದ ಸ್ವಾಗತ ಮಾಡ್ತಾರೋ ಫೆಲ್ಯೂರ್ ನೂ ಕೂಡ ಹಾಗೆ ತಗೋಬೇಕು ನಮ್ಮ ಯುವಕರು ಏನೇ ಚಾಲೆಂಜ್ ಬಂದ್ರು ಖುಷಿಯಿಂದ ಸ್ವೀಕರಿಸಬೇಕು ಇದೇ ಸಿನಿಮಾ ಕಂಟೆಂಟ್ ನಿಮ್ಮ ಸಪೋರ್ಟ್ ಹೀಗೆ ಬೇಕು ಎಂದು ಸಂತೋಷ ವ್ಯಕ್ತಪಡಿಸಿದ್ರು.

ಎ.ಯು. ಮೂವೀಸ್ ಮೂಲಕ ನಾಗವೇಣಿ ಸಂತೋಷ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊಟ್ಟಮೊದಲ ಬಾರಿಗೆ ನಾಗವೇಣಿ ಸಂತೋಷ ಅವರೇ ಚಿತ್ರದ ನಾಯಕನಾಗಿಯೂ ಸಹ ನಟಿಸುತ್ತಿದ್ದು, ನಾಯಕಿಯಾಗಿ ರಕ್ಷಿತಾ ಗೌಡ, ಮನೀಷಾ ಭಟ್ ಅಲ್ಲದೆ ಸುಮಾ, ನಕ್ಷತ್ರ, ರಿತ್ವಿಕಾ ಉಳಿದ ತಾರಾಗಣದಲ್ಲಿದ್ದಾರೆ. ವೆಂಕಟೇಶ ನಾಕಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಸಿನಿಮಾ ಇದೇ ವರ್ಷ ಆಗಸ್ಟ್ ಸೆಪ್ಟೆಂಬರ್ ನಲ್ಲಿ ತರೆಗೆ ಬರಲು ಸಿದ್ಧತೆ ನಡೆಸ್ತಿದೆ ಸಿನಿಮಾ ತಂಡ.

Visited 1 times, 1 visit(s) today
error: Content is protected !!