“ಯಾರಿಗೂ ಹೇಳ್ಬೇಡಿ” ಅಕ್ಟೋಬರ್ 24ಕ್ಕೆ ಬರ್ತಿದ್ದಾರೆ.
ಚಂದನವನದಲ್ಲಿ ಸಿನಿಮಾಗಳ ಸದ್ದು ಜೋರಾಗಿ ನಡೆಯುತ್ತಿದೆ. ಇತ್ತೀಚಿಗೆ ಬಿಡುಗಡೆಗೊಂಡ ಬಹುತೇಕ ಚಿತ್ರಗಳು ವೀಕ್ಷಕರ ಮನಸ್ಸನ್ನು ಗೆದ್ದು ಮುಂದೆ ಸಾಗುತ್ತಿದೆ. ಆ ನಿಟ್ಟಿನಲ್ಲಿ ಮತ್ತೊಂದು ತಂಡ ಯಾರಿಗೂ ಹೇಳ್ಬೇಡಿ ಎನ್ನುತ್ತಾ ಇದೆ ಅಕ್ಟೋಬರ್ 24ರಂದು ಅಧ್ಯಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟ್ರೇಲರ್ ಬಿಡುಗಡೆಯಿಂದಲೇ ದೊಡ್ಡ ಚರ್ಚೆ ಹುಟ್ಟುಹಾಕಿರುವ ಯಾರಿಗೆ ಹೇಳ್ಬೇಡಿ ಸಿನಿಮಾದ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಅಧಿಕೃತವಾಗಿ ಮುಂದೂಡಿದ್ದಾರೆ. ಮೊದಲಿನಿಂದ ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಬೇಕಿದ್ದ ಈ ಹಾಸ್ಯ-ಭಾವನಾತ್ಮಕ ಕನ್ನಡ ಸಿನಿಮಾ ಈಗ ಅಕ್ಟೋಬರ್ 24, 2025 ರಂದು ತೆರೆಗೆ ಬರಲಿದೆ.
ಸುನಿಲ್ ಕುಮಾರ್ ಮತ್ತು ಹರೀಶ್ ಅಮ್ಮಿನೇನಿ ನಿರ್ಮಾಣದಲ್ಲಿ, ಶಿವ ಗಣೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಸ್ನೇಹ, ಕಾಮಿಡಿ ಮತ್ತು ಭಾವನೆಗಳನ್ನೊಟ್ಟಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡುವ ಭರವಸೆ ನೀಡುತ್ತಿದೆ. ಚಿತ್ರದಲ್ಲಿ ಚೇತನ ವಿಕ್ಕಿ, ಚೈತ್ರಾ ಜೆ ಆಚಾರ, ಅಪ್ಪಣ್ಣ, ಮತ್ತು ಅಶ್ವಿನಿ ಪೋಲೆಪಳ್ಳಿ (ಅಲಿ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಉತ್ಸಾಹಭರಿತ ಸಹ ಕಲಾವಿದರ ತಂಡ ಇದಕ್ಕೆ ಶಕ್ತಿ ತುಂಬಿದೆ.
ಚಿತ್ರತಂಡದ ಪ್ರಕಾರ, “ಪ್ರೇಕ್ಷಕರಿಗೆ ಅತ್ಯುತ್ತಮ ತಾಂತ್ರಿಕ ಅನುಭವ ನೀಡಲು ಕೆಲವು ಅಂತಿಮ ತಾಂತ್ರಿಕ ಕೆಲಸಗಳು ಬಾಕಿ ಇರುವ ಕಾರಣದಿಂದ ಚಿತ್ರ ಬಿಡುಗಡೆ ಮುಂದೂಡಲಾಗಿದೆ” ಎಂದು ತಿಳಿಸಿದ್ದಾರೆ. ಸುಪರ್ಸ್ಟಾರ್ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ ಟ್ರೇಲರ್ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಹಾಸ್ಯ ಮತ್ತು ಹೊಸತನದಿಂದ ಕೂಡಿದ ಈ ಟ್ರೇಲರ್ ಜನರ ಮನ ಗೆದ್ದಿದೆ.
ಇದೇ ವೇಳೆ, ‘ಕಾಳ್ದೋಡೆ’ ಮತ್ತು ‘ಅಗಮಿಸು’ ಹಾಡುಗಳು ಈಗಾಗಲೇ ಹಿಟ್ ಆಗಿ ಜನಮನ ಕದ್ದಿವೆ. ಈ ಎಲ್ಲದರಿಂದಾಗಿ ಯಾರಿಗೆ ಹೇಳ್ಬೇಡಿ ಸಿನಿಮಾ ಈ ಋತುವಿನ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರತಂಡವು ಹೇಳಿರುವಂತೆ – “ನಮ್ಮ ಕಥೆ, ಹಾಸ್ಯ ಮತ್ತು ಯುವ ಮನೋಭಾವವು ಪ್ರೇಕ್ಷಕರ ಹೃದಯಕ್ಕೆ ತಾಕುತ್ತದೆ” ಎಂಬ ವಿಶ್ವಾಸದೊಂದಿಗೆ ಯಾರಿಗೆ ಹೇಳ್ಬೇಡಿ ಅಕ್ಟೋಬರ್ 24ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ.