Cini NewsSandalwood

ಸಾಮಾಜಿಕ ಕಳಕಳಿಯ “ವಿಕಾಸ ಪರ್ವ” ಚಿತ್ರದ ಟ್ರೈಲರ್ ಬಿಡುಗಡೆ.

Spread the love

ಬೆಳ್ಳಿ ಪರದೆ ಮೇಲೆ ಆಗಾಗ ಸಮಾಜಕ್ಕೆ ಒಂದು ಉತ್ತಮ ಸಂದೇಶದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಿರುವಂತಹ ಚಿತ್ರ ಬರುತ್ತದೆ. ಒಂದಷ್ಟು ಗೆಳೆಯರ ಬಳಗ ಸೇರಿಕೊಂಡ “ವಿಕಾಸ ಪರ್ವ” ಎಂಬ ಚಿತ್ರವನ್ನು ನಿರ್ಮಿಸಿ , ಆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಆಯೋಜಿಸಿದ್ದು , ಕನ್ನಡದ ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಹಾಡು ಬರೆದಿರುವ ಡಾ ||ವಿ. ನಾಗೇಂದ್ರ ಪ್ರಸಾದ್ ಹಾಗೂ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆಯ ವೇಲು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು “ವಿಕಾಸ ಪರ್ವ” ದ ಕುರಿತು ಮಾತನಾಡಿದರು.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಹಾಗೂ ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ಮಾತನಾಡುತ್ತಾ ಇದೊಂದು ಉತ್ತಮ ಸಂದೇಶವಿರುವ ಚಿತ್ರ.

ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ, ಕುರಿಬಾಂಡ್ ರಂಗ, ಅಭಯ್ ಸುವರ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ. ಎಲ್ಲರ ಮನಸ್ಸಿಗೂ ಹತ್ತಿರವಾಗುವ ಚಿತ್ರ ಇದಾಗಲಿದೆ. ಈಗಾಗಲೇ ಸೆನ್ಸಾರ್ ಕೂಡ ಮುಗಿದು ಚಿತ್ರವನ್ನ ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಯ ಮೇಲೆ ತರುತ್ತೇವೆ ನಿಮ್ಮೆಲ್ಲರ ಪ್ರೀತಿ , ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.

ಚಿತ್ರತಂಡದ ಸಹಕಾರದಿಂದ “ವಿಕಾಸ ಪರ್ವ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಅನ್ಬು ಅರಸ್. ವಿಶೃತ್ ನಾಯಕ್ ಅವರು ಒಳ್ಳೆಯ ಕಥೆ ಮಾಡಿದ್ದಾರೆ ಎಂದು ಮಾತನಾಡಿದ ನಟ ರೋಹಿತ್ ನಾಗೇಶ್, ಈ ಚಿತ್ರದ ಕುರಿತು ಒಂದು ಮಾತು ಹೇಳಬಹುದು. ಚಿತ್ರ ನೋಡುವವರಿಗೆ ಬೇಸರವಾಗಲ್ಲ.

ನೋಡಿದ ಮೇಲೆ ಯಾರು ನಮಗೆ ಬಯ್ಯುವುದಿಲ್ಲ. ಅಂತಹ ಉತ್ತಮ ಸಿನಿಮಾವಿದು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶ್ರೀನಾಥ್ ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು. ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ನವೀನ್ ಸುವರ್ಣ ಹಾಗೂ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎ ಪಿ ಓ ಮಾಹಿತಿ ನೀಡಿದರು. ನಟಿ ಸ್ವಾತಿ, ನಟರಾದ ಅಶ್ವಿನ್ ಹಾಸನ್, ಕುರಿಬಾಂಡ್ ತಮ್ಮ ಪಾತ್ರದ ಕುರಿತು ಮಾತನಾಡಿದರು. ಕನ್ನಡವೇ ಸತ್ಯ ರಂಗಣ್ಣ, ವೀರಕಪುತ್ರ ಶ್ರೀನಿವಾಸ್ ಮುಂತಾದ ಗಣ್ಯರು ಸಮಾರಂಭದಲ್ಲಿದ್ದರು. ಸದ್ಯ ಬಿಡುಗಡೆ ಆಗಿರುವ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದ್ದು , ಚಿತ್ರವು ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

Visited 1 times, 1 visit(s) today
error: Content is protected !!