Cini NewsMovie ReviewSandalwood

ಕಿಂಗ್ ಮೇಕರ್ ಆಟದ ನಾಯಕ “ದಿ ಡೆವಿಲ್” (ಚಿತ್ರವಿಮರ್ಶೆ -ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ : ದಿ ಡೆವಿಲ್
ನಿರ್ದೇಶಕ : ಪ್ರಕಾಶ್ ವೀರ್
ನಿರ್ಮಾಣ : ಜೈ ಮಾತ ಕಂಬೈನ್ಸ್
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಸುಧಾಕರ್
ತಾರಗಣ : ದರ್ಶನ್, ರಚನ ರೈ , ಅಚ್ಯುತ ಕುಮಾರ್, ಶರ್ಮಿಳಾ ಮಾಂಡ್ರೆ , ಮಹೇಶ್ ಮಂಜ್ರೇಕರ್, ತುಳಸಿ,‌ ಗಿಲ್ಲಿ ನಟ, ಶ್ರೀನಿವಾಸ ಪ್ರಭು , ಶೋಭ್ ರಾಜ್, ಹುಲಿ ಕಾರ್ತಿಕ್, ಚಂದು ಗೌಡ ಹಾಗೂ ಮುಂತಾದವರು…

ರಾಜಕೀಯದ ಚದುರಂಗದ ಆಟದಲ್ಲಿ ಯಾವಾಗ ಯಾರ ಗೇಮ್ ಪ್ಲಾನ್ ಹೇಗೆ ಚಲಾವಣೆಯಲ್ಲಿ ಆಗುತ್ತೆ , ಸೂತ್ರಧಾರಿ ಯಾರು.. ಆಟಗಾರರು ಯಾರು.. ರಣತಂತ್ರ ಏನು? ಎನ್ನುವುದರ ಸುಳಿಯಲ್ಲೇ ಮುಖ್ಯಮಂತ್ರಿಯ ಸ್ಥಾನ ಎಷ್ಟು ಮುಖ್ಯ , ಒಡನಾಡಿಗಳು ಹಾಗೂ ವಿರೋಧಿಗಳ ಕೈಚಳಕದ ನಡುವೆ ಹಿರಿಯ ಅಧಿಕಾರಿಯ ಮಾಸ್ಟರ್ ಮೈಂಡ್ ಗೆ ಸಿಗುವ ಒಂದೇ ರೂಪ ಎರಡು ಗುಣದ ಅಸ್ತ್ರ ಹೇಗೆಲ್ಲಾ ದರ್ಪ , ದೌಲತ್ತು ಹಾಗೂ ಬಣ್ಣದ ಬದುಕಿನ ಆಟ
ನಿರೀಕ್ಷೆಗೂ ಮೀರಿದ ತಿರುವನ್ನ ನೀಡುತ್ತಾ ಹೇಗೆ ಗುರಿಯನ್ನು ತಲುಪುತ್ತದೆ ಎಂಬುದನ್ನು ಆರ್ಭಟದೊಂದಿಗೆ ಅದ್ದೂರಿಯಾಗಿ ತೆರೆಯ ಮೇಲೆ ಬಂದಿರುವಂತಹ ಚಿತ್ರ “ದಿ ಡೆವಿಲ್”. ರಾಜಕೀಯವೇ ತನ್ನ ಜೀವ ಎನ್ನುತ್ತಾ ಸಿಎಂ ಗದ್ದುಗೆಯಲ್ಲಿ ಆರ್ಭಟಿಸುವ ರಾಜಶೇಖರ್ (ಮಹೇಶ್ ಮಂಜೇಕರ್)ಗೆ ಹಿರಿಯ ಐಎಎಸ್ ಅಧಿಕಾರಿ ಅನಂತ್ ನಂಬಿಯಾರ್ (ಅಚ್ಯುತ ಕುಮಾರ್) ಮುಖ್ಯಮಂತ್ರಿಯ ಸಲಹೆಗಾರರಾಗಿ ಬೆನ್ನೆಲುಬಾಗಿ ನಿಂತಿರುತ್ತಾರೆ. ರಾಜಕೀಯ ವೈರಿ ಪಟೇಲ್ ಹಾಗೂ ಸಿಎಂ ತಂಗಿ ಮಕ್ಕಳ ಕುತಂತ್ರದಿಂದ ಭ್ರಷ್ಟಾಚಾರದ ಸುಳಿಗೆ ಸಿಲುಕಿ ಜೈಲು ಸೇರುವಂಥ ಆಗುತ್ತದೆ.

ಮುಂದೆ ಸಿಎಂ ಯಾರು ಎನ್ನುವ ಪ್ರಶ್ನೆಯ ನಡುವೆ ವಿದೇಶದಲ್ಲಿರುವ ಪುತ್ರ ಧನುಷ್ (ದರ್ಶನ್) ನನ್ನ ಕರೆಸಿ ಸಿಎಂ ಮಾಡುವ ಪ್ಲಾನ್ ಮಾಡುತ್ತಾರೆ. ಆದರೆ ಬಾಲ್ಯದಿಂದಲೂ ದರ್ಪ , ದೌಲತ್ತು , ಹುಡುಗಿಯರ ಶೋಕಿಯಲ್ಲಿ ಮುಳುಗಿರುವ ಧನುಷ್ ಯಾವುದಕ್ಕೂ ಜಗ್ಗದೆ ತಾನು ನಡೆದಿದ್ದೆ ದಾರಿ ಎಂಬುವನನ್ನ ಕರೆತ್ತಿರುವುದು ಕಷ್ಟಕರವಾಗಿರುತ್ತದೆ.

ಮತ್ತೊಂದೆಡೆ ನಟನಾಗಿ ಮಿಂಚಿ ಗಾಂಧಿನಗರದಲ್ಲಿ ಕಟೌಟ್ ಹಾಕಿಸಿಕೊಳ್ಳಬೇಕೆಂದು ಆಸೆ ಪಡುವ ಕೃಷ್ಣ (ದರ್ಶನ್) ತನ್ನ ಕೃಷ್ಣ ಮೆಸ್ ಗೆ ಬರುವ ಕಸ್ಟಮರ್ ಮುಂದೆ ಹಿರಿಯ ಕಲಾವಿದರ ಪಾತ್ರಗಳನ್ನ ಅಭಿನಯಿಸುತ್ತ ಅವರ ಮೆಚ್ಚುಗೆಯನ್ನು ಪಡೆಯುತ್ತಾನೆ. ಇನ್ನು ತನ್ನ ಗೆಳೆಯ ನಾಣಿ (ಹುಲಿ ಕಾರ್ತಿಕ್) ಇವತ್ತು ಸೌಟು ನಾಳೆ ಕಟೋಟು ಎನ್ನುವ ಮಾತಿನಂತೆ ಕನಸು ಕಾಣುವ ಕೃಷ್ಣನಿಗೆ ಸಾಲ ಕೊಟ್ಟ ರುಕ್ಮಿಣಿ (ರಚನಾ ರೈ) ಮನೆಯವರ ವಿರೋಧದ ನಡುವೆ ಕೃಷ್ಣನ ಪ್ರೀತಿಯಲ್ಲಿ ತೇಲುತ್ತಾಳೆ.

ಇನ್ನು ಸಿಎಂ ಕುರ್ಚಿಯ ವಿಚಾರದ ಜೋರಾಗುತ್ತಿರುವಾಗಲೇ ನಂಬಿಯಾರ್ ಗೆ ಒತ್ತಡ ಹೆಚ್ಚಾಗುತ್ತದೆ. ಅಚಾನಕ್ಕಾಗಿ ಧನುಷ್ ಹೋಲಿಕೆಯನ್ನ ಕಾಣುವ ಕೃಷ್ಣನ ಕಂಡು ಆತನ ಸಿನಿಮಾ ಆಸೆಯನ್ನು ಅಸ್ತ್ರವಾಗಿ ಬೆಳೆಸಿಕೊಂಡು, ಸಿಎಂ ಪುತ್ರ ಧನುಷ್ ನಾಗಿ ನಟಿಸಿ ಜನರೊಟ್ಟಿಗೆ ಸ್ಪಂದಿಸಿ ಎಲೆಕ್ಷನ್ ಗೆದ್ದು ಸಿಎಂ ಆಗುವ ಪ್ಲಾನ್ ಮುಂದಾಗುತ್ತಾರೆ. ಆದರೆ ಮುಂದೆ ನಡೆಯೋದೆ ಬೇರೆ. ಈ ರಾಜಕೀಯ ಚದುರಂಗದ ಆಟದಲ್ಲಿ ಹಲವು ತಿರುವುಗಳು ಎದುರಾಗಿ ಕ್ಲೈಮ್ಯಾಕ್ಸ್ ಹಂತಕ್ಕೆ ಒಂದು ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಅದು ಏನು… ಸಿಎಂ ಯಾರಾಗ್ತಾರೆ…
ಕೃಷ್ಣ ಹೀರೋ ಆಗ್ತಾನ…
ರುಕ್ಮಿಣಿ ಪ್ರೀತಿ ಯಾರಿಗೆ…
ದಿ ಡೆವಿಲ್ ಯಾರು.. ಈ ಎಲ್ಲಾ ಪ್ರಶ್ನೆಗೆ ನೀವು ಚಿತ್ರವನ್ನ ನೋಡಲೇಬೇಕು.

ಇಡೀ ಚಿತ್ರದ ಕೇಂದ್ರ ಬಿಂದು ನಟ ದರ್ಶನ್ ತೂಗದೀಪ ದ್ವಿಪಾತ್ರದ ಅಭಿನಯ, ಖಡಕ್ ಎಂಟ್ರಿ , ಡೈಲಾಗ್ ಡೆಲಿವರಿ ಮೂಲಕ ಎಂದಿನಂತೆ ತಮ್ಮ ಗತ್ತಿನಿಂದ ಭರ್ಜರಿ ಸೌಂಡ ಮಾಡಿದ್ದಾರೆ.
ನೆಗೆಟಿವ್ ಪಾತ್ರದಲ್ಲಿ ದರ್ಪದಿಂದ ಆರ್ಭಟಿಸಿದ್ದು, ಪಾಸಿಟಿವ್ ಮೂಲಕ ಜನರ ಪ್ರೀತಿ , ವಿಶ್ವಾಸವನ್ನ ಗಳಿಸುವ ಮುಗ್ಧ ಪ್ರೇಮಿಯಾಗಿ ಮಿಂಚಿದ್ದಾರೆ. ಎರಡು ಪಾತ್ರವನ್ನು ಒಟ್ಟಿಗೆ ನಿಭಾಯಿಸಿರುವ ರೀತಿ ಗಮನ ಸೆಳೆಯುತ್ತದೆ. ನಟಿ ರಚನಾ ರೈ ಸಿಕ್ಕ ಅವಕಾಶಕ್ಕೆ ಜೀವ ತುಂಬಿ ಅದ್ಭುತವಾಗಿ ನಿಭಾಯಿಸಿದ್ದಾರೆ. ಸಿಎಂ ಪಾತ್ರದಲ್ಲಿ ಹಿರಿಯ ನಟ ಮಹೇಶ್ ಮಂಜರೇಕರ್ ಅದ್ಭುತವಾಗಿ ಕಾಣಿಸಿಕೊಂಡಿದ್ದು , ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.

ಇನ್ನು ಇಡೀ ಚಿತ್ರದ ಸೂತ್ರಧಾರಿ ಪಾತ್ರವನ್ನು ಅಚ್ಚುತ ಕುಮಾರ್ ಅದ್ಭುತವಾಗಿ ನಿಭಾಯಿಸಿ ಚಿತ್ರದ ಓಟಕ್ಕೆ ತಿರುವನ್ನ ನೀಡಿದ್ದಾರೆ. ಉಳಿದಂತೆ ಅಭಿನಯಿಸಿರುವ ಶರ್ಮಿಳಾ ಮಾಂಡ್ರೆ , ತುಳಸಿ,‌ ಗಿಲ್ಲಿ ನಟ, ಶ್ರೀನಿವಾಸ ಪ್ರಭು , ಶೋಭ್ ರಾಜ್, ಹುಲಿ ಕಾರ್ತಿಕ್ , ಚಂದು ಗೌಡ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಸಾಗಿದ್ದಾರೆ. ಈ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಇಂಟರೆಸ್ಟಿಂಗ್ ಆಗಿದ್ದು , ರಾಜಕೀಯ ರಣತಂತ್ರದ ಒಳಸುಳಿಯನ್ನ ಬಹಳ ವಿಭಿನ್ನ ರೀತಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಮಾಡುವ ರಣತಂತ್ರ , ಅಧಿಕಾರಿಯ ಮಾಸ್ಟರ್ ಮೈಂಡ್ , ದುಷ್ಟ ಮಗನ ಅಟ್ಟಹಾಸ , ನಟನಾಗುವ ಆಸೆ , ಆಕಾಂಕ್ಷೆ , ಪ್ರೀತಿಯ ಸೆಳೆತದ ನಡುವೆ ಸಾಗುವ ಚಿತ್ರಕಥೆ ಇನ್ನಷ್ಟು ಕಡಿತ ಮಾಡಿದರೆ ಚೆನ್ನಾಗಿರುತ್ತಿತ್ತು. ನಿರ್ಮಾಣದ ಅದ್ದೂರಿತನ ತೆರೆಯ ಮೇಲೆ ಕಾಣುತ್ತದೆ. ಬಿ ಅಜಿನೀಶ್ ಲೋಕನಾಥ್ ಸಂಗೀತದ ಜೊತೆ ಹಿನ್ನೆಲೆ ಸಂಗೀತ ಅಬ್ಬರಿಸಿದೆ. ಅದೇ ರೀತಿ ಛಾಯಾಗ್ರಹಕ ಸುಧಾಕರ್ ಎಸ್ ರಾಜ್ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ರಾಮ್ ಲಕ್ಷ್ಮಣ್ ಭರ್ಜರಿ ಆಕ್ಷನ್ ಚಿತ್ರದ ಹೈಲೈಟ್. ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ , ಕಾಂತರಾಜ್ ಸಂಭಾಷಣೆ ಗಮನ ಸೆಳೆಯುತ್ತದೆ. ಒಟ್ಟಾರೆ ಒಂದು ಮಾಸ್ ಕಂಪ್ಲೀಟ್ ಎಂಟರ್ಟೈನ್ಮೆಂಟ್ ಪೊಲಿಟಿಕಲ್ ಸ್ಟ್ರಾಟರ್ಜಿ ಚಿತ್ರ ಇದಾಗಿದ್ದು , ಫ್ಯಾನ್ ಫಾಲೋವರ್ಸ್ ಬಹಳ ಬೇಗ ಇಷ್ಟವಾಗುವ ಈ ಚಿತ್ರ ಎಲ್ಲರೂ ಒಮ್ಮೆ ನೋಡುವಂತಿದೆ.

 

 

Visited 1 times, 1 visit(s) today
error: Content is protected !!