‘ಶುಭಕೃತ್ ನಾಮ ಸಂವತ್ಸರ’ ತಂಡ ಸೇರಿದ ತೆಲುಗು ನಟ..ನರೇಶ್ ಬರ್ತಡೇಗೆ ಗ್ಲಿಂಪ್ಸ್ ರಿಲೀಸ್
‘ಫೋರ್ ವಾಲ್ಸ್’ ಎಂಬ ಸಿನಿಮಾ ನಿರ್ದೇಶಿಸಿರುವ ಎಸ್ ಎಸ್ ಸಜ್ಜನ್ ಈಗ ‘ಶುಭಕೃತ್ ನಾಮ ಸಂವತ್ಸರ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. Zee ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಸಿದ್ದೇಗೌಡ ಉರೂಫ್ ನಟ ಧನಂಜಯ್ ಈ ಚಿತ್ರದ ನಾಯಕ. ಸದ್ಯ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ತೆಲುಗು ನಟ ನರೇಶ್ ವಿಜಯ ಕೃಷ್ಣ ಅವರನ್ನು ತಮ್ಮ ತಂಡಕ್ಕೆ ಸ್ವಾಗತ ನೀಡಿದೆ.
ನರೇಶ್ ಶುಭಕೃತ್ ನಾಮ ಸಂವತ್ಸರ ಸಿನಿಮಾ ತಂಡ ಸೇರಿಕೊಂಡಿದೆ. ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಕುಡುಕನ ಪಾತ್ರದಲ್ಲಿ ನರೇಶ್ ನಟಿಸಿದ್ದಾರೆ.
ಅಂದಹಾಗೇ ಶುಭಕೃತ್ ನಾಮ ಸಂವತ್ಸರ ಸಿನಿಮಾ ಹಬ್ಬದ ಹಿನ್ನೆಲೆಯಲ್ಲಿ ಸಾಗುವ ಕೌಟುಂಬಿಕ ಕಥೆ. ಆದರೆ ಈ ಕತೆಗೆ ಕ್ರೈಮ್-ಥ್ರಿಲ್ಲರ್ ಟಚ್ ಕೊಟ್ಟು ಸಜ್ಜನ್ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ.
ಈ ಸಿನಿಮಾಗೆ ಫೋರ್ ವಾಲ್ಸ್ ನಿರ್ಮಾಣ ತಂಡ ಸಾಥ್ ಕೊಡುತ್ತಿದೆ. ಎಸ್.ವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಶೂಟಿಂಗ್ ನಡೆಸಲಾಗುತ್ತಿದೆ.