Cini NewsSandalwood

”ಬೆನ್ನಿ”ಯಾಗಿ ಮತ್ತೆ ಬಂದ ಬಂದ ಜಿಂಕೆಮರಿ ಶ್ವೇತಾಗೆ ಕಿಚ್ಚಿನ ಸಾಥ್

Spread the love

 

ಸ್ಯಾಂಡಲ್‌ವುಡ್‌ಗೆ ಮತ್ತೆ ಕಂಬ್ಯಾಕ್‌ ಆದ ಜಿಂಕೆ ಮರಿ ಶ್ವೇತಾ…ಮಹಿಳಾ ಪ್ರಧಾನ ಸಿನಿಮಾ ʼಬೆನ್ನಿʼ ಚಿತ್ರದಲ್ಲಿ ಅಭಿನಯ!. ಹೊಸ ಸಾಹಸಕ್ಕೆ ಹೊಂದಿಸಿ ಬರೆಯಿರಿ ಸಾರಥಿ… ರಾಮೇನಹಳ್ಳಿ ಜಗನ್ನಾಥ್ ನಿರ್ಮಾಣದಲ್ಲಿ ನಂದಿತಾ ಶ್ವೇತಾ.ಪೆಪೆ ನಿರ್ದೇಶಕರ ಜೊತೆ ಕೈ ಜೋಡಿಸಿದ ಹೊಂದಿಸಿ ಬರೆಯಿರಿ ನಿರ್ದೇಶಕರು…ಬೆನ್ನಿಯಾಗಿ ನಂದಿತಾ ಶ್ವೇತಾ ಎಂಟ್ರಿ.

‘ಜಿಂಕೆ ಮರೀನಾ, ಜಿಂಕೆ ಮರೀನಾ..ಅಂತಾ ಕುಣಿದು ಫೇಮಸ್‌ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ನಂದಾ ಲವ್ಸ್‌ ನಂದಿತಾ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರ ಮುಂದೆ ಬಂದಿದ್ದ ಶ್ವೇತಾ, ಆ ಬಳಿಕ ತೆಲುಗು, ತಮಿಳು ಚಿತ್ರರಂಗದತ್ತ ಮುಖ ಮಾಡಿದರು. ಇದೀಗ ಮತ್ತೊಮ್ಮೆ ನಂದಿತಾ ಶ್ವೇತಾ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್‌ ಆಗುತ್ತಿದ್ದಾರೆ.

ನಂದಿತಾ ಶ್ವೇತಾ ಅವರನ್ನು ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಹೊಂದಿಸಿ ಬರೆಯಿರಿ ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಕರೆದುಕೊಂಡು ಬರುತ್ತಿದ್ದಾರೆ. ಹಾಗಂತ ಶ್ವೇತಾಗೆ ಅವರು ಆಕ್ಷನ್‌ ಕಟ್‌ ಹೇಳುತ್ತಿಲ್ಲ. ಬದಲಿಗೆ ಅವರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಪೆಪೆ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀಲೇಶ್ ಎಸ್ ನಾಯರ್ ಈಗ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಜಿಂಕೆ ಮರಿ ಖ್ಯಾತಿಯ ನಂದಿತಾ ಶ್ವೇತಾ ನಾಯಕಿ.

ಶ್ರೀಲೇಶ್‌ ಬೆನ್ನಿ ಎಂಬ ಮಹಿಳಾ ಪ್ರಧಾನ ಸಿನಿಮಾ ನಿರ್ದೇಶನ ಮುಂದಾಗಿದ್ದಾರೆ. ಈ ಚಿತ್ರದ ಫಸ್ಟ್‌ ಝಲಕ್‌ ರಿಲೀಸ್‌ ಆಗಿದೆ. ನಟಿ ಶ್ವೇತಾ ಇಲ್ಲಿ ಬೆನ್ನಿಯಾಗಿ ಟೈಲಟ್‌ ರೋಲ್‌ ಪ್ಲೇ ಮಾಡುತ್ತಿದ್ದಾರೆ. ತಂದೆ ಮತ್ತು ಮಗಳ ಬದುಕಿನಲ್ಲಿ ಎದುರಾಗುವ ಘಟನೆಗಳ ವಿರುದ್ಧ ನಡೆಯುವ
ಪ್ರಸ್ತುತ ಕಾಲಘಟ್ಟ ಕಥಾಹಂದರವನ್ನು ಬೆನ್ನಿ ಹೊಂದಿದೆ. ಫಸ್ಟ್‌ ಲುಕ್‌ ಗೆ ಕಿಚ್ಚ ಖಡಕ್‌ ಆಗಿ ವಾಯ್ಸ್‌ ಕೊಟ್ಟಿದ್ದು, ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಮಿಂಚಿದ್ದಾರೆ.

ದಕ್ಷಿಣದ ಭಾರತದ ಪ್ರಮುಖ ನಟರು ʼಬೆನ್ನಿʼಗೆ ಜೊತೆಯಾಗಲಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್‌ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್‌ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್‌ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರ್‌ ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಸಿನಿಮಾಕ್ಕಿದೆ.

Visited 1 times, 1 visit(s) today
error: Content is protected !!