Cini NewsSandalwood

ಹೀರೋ ಆದ್ರೂ ಲಕ್ಷ್ಮೀ ನಿವಾಸದ ಸಿದ್ದೇಗೌಡ್ರು..”ಶುಭಕೃತ್ ನಾಮ‌ ಸಂವತ್ಸರ” ಸಿನಿಮಾ ಘೋಷಣೆ

Spread the love

ಬರ್ತಡೇ ಸಂಭ್ರಮದಲ್ಲಿ ಲಕ್ಷ್ಮೀ ನಿವಾಸದ ಸಿದ್ದೇಗೌಡ್ರು ಖ್ಯಾತಿಯ ಧನಂಜಯ್ ಹೊಸ ಸಿನಿಮಾ ಅನೌನ್ಸ್.. ಫೋರ್ ವಾಲ್ಸ್ ನಿರ್ದೇಶಕರ ಹೊಸ ಪ್ರಯತ್ನ… ಶುಭಕೃತ್ ನಾಮ‌ ಸಂವತ್ಸರ ಸಿನಿಮಾದಲ್ಲಿ ಲಕ್ಷ್ಮೀ ನಿವಾಸದ ಸಿದ್ದೇಗೌಡ್ರು ನಾಯಕ

ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ್ರು‌ ಪಾತ್ರದ ಮೂಲಕ‌ ಮನೆ‌ಮಾತಾಗಿರುವ ಬಹುಮುಖ‌ ಪ್ರತಿಮೆ ಧನಂಜಯ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಡಬ್ಬಿಂಗ್ ಆರ್ಟಿಸ್ಟ್, ಡ್ಯಾನ್ಸರ್ ಆಗಿರುವ ಧನಂಜಯ್ ವಾಸಂತಿ ನಲಿದಾಗ, ಥಗ್ ಆಫ್ ರಾಮಘಡ ಎಂಬ ಚಿತ್ರಗಳ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಅವರೀಗ ಪೂರ್ಣ ಪ್ರಮಾಣದ ಹೀರೋ ಆಗಿ ಪರಿಚವಾಗುತ್ತಿದ್ದಾರೆ. ಶುಭಕೃತ್ ನಾಮ ಸಂವತ್ಸರ ಎಂಬ ಸಿನಿಮಾ ಮೂಲಕ ಧನಂಜಯ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ‌‌ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದೆ.

ಫೋರ್ ವಾಲ್ಸ್ ಚಿತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ಎಸ್ ಎಸ್ ಸಜ್ಜನ್ ಅವರ ಹೊಸ ಪ್ರಯತ್ನವೇ ಶುಭಕೃತ್ ನಾಮ ಸಂವತ್ಸರ. ಟೈಟಲ್ ಹೇಳುವಂತೆ ಇದೊಂದು ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಅದಕ್ಕೆ ಕ್ರೈಮ್ ಥ್ರಿಲ್ಲರ್ ಕಥೆ ಟಚ್ ಕೊಟ್ಟು ಸಜ್ಜನ್ ಸಿನಿಮಾ ಮಾಡುತ್ತಿದ್ದಾರೆ. ಅವರ ಸಾಹಸಕ್ಕೆ ಫೋರ್ ವಾಲ್ಸ್‌ ನಿರ್ಮಾಣ ತಂಡ ಸಾಥ್ ಕೊಡುತ್ತಿದೆ. ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶುಭಕೃತ್ ನಾಮ‌ ಸಂವತ್ಸರ ತೆರೆಗೆ ಬರಲಿದೆ.‌ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಶುಭಕೃತ್ ನಾಮ ಸಂವತ್ಸರ ಸಿನಿಮಾಗೆ ತೆಲುಗಿನ ರುದ್ರಮದೇವಿ, ಗರುಡವೇಗ ಸಿನಿಮಾಗಳಲ್ಲಿ ದುಡಿದ ಅನುಭವ ಇರುವ ದೇವೇಂದ್ರ ವಡ್ಡೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದು, ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವವಿರುವ ಸಂಗೀತ ನಿರ್ದೇಶಕ ಸುಧಾ ಶ್ರೀನಿವಾಸ್ ಮ್ಯೂಸಿಕ್ ಒದಗಿಸಲಿದ್ದಾರೆ. ನವೆಂಬರ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Visited 1 times, 1 visit(s) today
error: Content is protected !!