Cinisuddi Fresh Cini News 

ಮೋದಿ ಮಾತಿಗೆ ಸೈ ಎಂದ ಶಿವಣ್ಣ

ಇಡೀ ದೇಶವೇ ಕೊರೋನಾ ಹಾವಳಿಯಿಂದ ತತ್ತರಿಸಿದೆ. ದೇಶವ್ಯಾಪಿ ಲಾಕ್ ಡಾನ್ ನಡುವೆಯೇ ಪ್ರಧಾನಮಂತ್ರಿ ಮೋದಿಯವರು ಒಂದು ಕರೆ ನೀಡಿದ್ದಾರೆ. ಹೌದು ಇದೇ ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷದ ವರೆಗೆ ಸಮಸ್ತ ನೂರಾ ಮೂವತ್ತು ಕೋಟಿ ಜನರು ಮನೆಯ ಲೈಟನ್ನು ಆರಿಸಿ ದೀಪ ಬೆಳಗಲು ಕರೆ ನೀಡಿದ್ದಾರೆ.

ಒಂದು ವೇಳೆ ದೀಪ ಇಲ್ಲದಿದ್ದರೆ ಕ್ಯಾಂಡಲ್ ಅಥವಾ ಟಾರ್ಚ್ ಬೆಳಕನ್ನು ಪ್ರಕಾಶಿಸಿ ಎಂದು ಮನವಿ ಮಾಡಿದರೆ. ಇದಕ್ಕೆ ನಮ್ಮ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಸೈ ಎಂದಿದ್ದಾರೆ. ನಮ್ಮ ಪ್ರಧಾನಮಂತ್ರಿ ಮೋದಿಯವರು ನೀಡಿರುವ ಸಂದೇಶ ಅರ್ಥಪೂರ್ಣವಾಗಿದೆ.

ನಾವು ಹಳೆಯದನ್ನು ಯಾವುದು ಮರೆಯಬಾರದು , ನಾವೆಲ್ಲರೂ ಕತ್ತಲಿಂದ ಬೆಳಕಿನೆಡೆಗೆ ಬರುವುದಕ್ಕೆ ಇದು ಸೂಕ್ತ ಸಮಯ ಅನಿಸುತ್ತದೆ. ನಾವು ಹಚ್ಚುವ ಈ ದೀಪ ದೇವರಿಗೂ ತಲುಪುತ್ತದೆ ಎನ್ನಬಹುದು , ಈ ಮಹಾ ಕೊರೋನಾ ಹಾವಳಿಯಿಂದ ಇಡೀ ದೇಶ ಸುರಕ್ಷಿತವಾಗಲಿ.

ಈಗ ನಮ್ಮ ದೇಶದಲ್ಲಿ ಮಾಡಿರುವ ಲಾಕ್ ಡೌನ್ ಗೆ ಎಲ್ಲರೂ ಸಹಕರಿಸಿ , ಪ್ರತಿಯೊಬ್ಬರೂ ಮನೆಯಲ್ಲಿ ಇರಿ ಕೊರೋನಾ ಮುಕ್ತ ದೇಶವಾಗಿಸೋಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿವಣ್ಣ ಕೂಡ ಮನೆಯಲ್ಲೇ ಇದ್ದು , ಕೆಲವು ಸಮಯ ಟಿವಿ ನೋಡುತ್ತಾ ,

ಕುಟುಂಬದೊಂದಿಗೆ ಕಾಲ ಕಳೆಯುತ್ತಾ ಬೆಳೆಗೆ ಹಾಗೂ ಸಂಜೆ ಯೋಗಾಭ್ಯಾಸ ಮಾಡುತ್ತಾ ತಮ್ಮ ಗೆಳೆಯರಿಗೆ ಕೆರೆಯನ್ನು ಮಾಡಿ ಕಾಲ ಕಳೆಯುತ್ತಿದ್ದಾರೆ. ಪ್ರತಿಯೊಬ್ಬರು ಸರ್ಕಾರ ನೀಡಿರುವ ಆದೇಶವನ್ನು ಪಾಲಿಸಿ , ಮನೆಯಲ್ಲಿ ಸುಖವಾಗಿ ಇರಿ ಎಂದು ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಮನವಿ ಮಾಡಿದ್ದಾರೆ.

Share This With Your Friends

Related posts