Cini NewsSandalwood

ಶಿವರಾಜ್ ಕೆ.ಆರ್.ಪೇಟೆ ನಟನೆಯ ಹೊಸ ಚಿತ್ರಕ್ಕೆ ಚಾಲನೆ

Spread the love

ತನ್ನ ವಿಭಿನ್ನ ನಟನೆಯ ಮೂಲಕ ಚಿತ್ರ ಪ್ರೇಮಿಗಳ ಮನಗೆದ್ದ ನಟ ಶಿವರಾಜ್ ಕೆ ಆರ್ ಪೇಟೆ ನಟಿಸಲಿರುವ ಹೊಸ ಚಿತ್ರಕ್ಕೆ ಇಂದು ಸರಳವಾಗಿ ಮುಹೂರ್ತ ನೆರವೇರಿದೆ. ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರ ತಂಡ ಸರಳವಾಗಿ ಪೂಜೆ ಸಲ್ಲಿಸಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಉತ್ಸಾಹಿ ಯುವ ತಂಡದ ಈ ಪ್ರಯತ್ನಕ್ಕೆ ಶ್ರೇಯ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಲಿದ್ದು, ನಿರ್ಮಾಣದ ಜವಬ್ದಾರಿ ಹೊತ್ತಿದೆ.

ಇನ್ನೂ ತಾಂತ್ರಿಕ ವರ್ಗ ಹಾಗೂ ಕಲಾವಿದರ ಪಟ್ಟಿಯನ್ನ ಬಿಟ್ಟು ಕೊಡದ ಚಿತ್ರತಂಡ ದೊಡ್ಡ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ತಿಳಿಸಿದೆ‌. ಚಿತ್ರಿಕರಣಕ್ಕಾಗಿ ಮಳೆಗಾಲವನ್ನ ಕಾಯುತ್ತಿದ್ದ ಚಿತ್ರತಂಡ ಮುಂದಿನ ವಾರದಿಂದ‌ ಚಿತ್ರಿಕರಣ ಆರಂಭಿಸಲಿದ್ದು, ಕನ್ನಡಿಗರ ಹಾಗೂ ಚಿತ್ರ ರಸಿಕರ ಆಶೀರ್ವಾದವನ್ನ ಬಯಸುತ್ತಿದೆ. ಮತ್ತಷ್ಟು ಹೆಚ್ಚಿನ ಮಾಹಿತಿಯನ್ನ ಸದ್ಯದಲ್ಲೇ ನೀಡಲಿದೆಯಂತೆ,.

Visited 4 times, 1 visit(s) today
error: Content is protected !!