Cini NewsTV Serial

ಡಿಸೆಂಬರ್ 14 ರಿಂದ “ಸರಿಗಮಪ” ಸೀಸನ್ ಅಲೆ ಶುರು.

Spread the love

ಸಂಗೀತಕ್ಕೆ ತನ್ನದೇ ಆದಂತಹ ಶಕ್ತಿ , ಗಮನ ಸೆಳೆಯುವಂತ ಸಾಮರ್ಥ್ಯ ಹಾಗೂ ಮನಸ್ಸಿಗೆ ನೆಮ್ಮದಿ , ಉಲ್ಲಾಸವನ್ನ ನೀಡುತ್ತದೆ. ಇಂತಹ ಸಂಗೀತ ಸುಧೆಯ ಕಾರ್ಯಕ್ರಮ ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು “ಸರಿಗಮಪ”.

ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ. ಈ ರಿಯಾಲಿಟಿ ಸಿಂಗಿಂಗ್ ಶೋ ಬಗ್ಗೆ ಮಾಹಿತಿ ನೀಡಲು ಮಾಧ್ಯಮದವರನ್ನು ಬರಮಾಡಿಕೊಂಡಂತ ಜಿ ಚಾನೆಲ್ ನ ಬಿಸಿನೆಸ್ ಹೆಡ್ ದೀಪಕ್ , ಕಾರ್ಯಕ್ರಮದ ಜಡ್ಜ್ ಗಳಾದಂತಹ ರಾಜೇಶ್ ಕೃಷ್ಣನ್ , ವಿಜಯ ಪ್ರಕಾಶ್ , ಅರ್ಜುನ್ ಜನ್ಯ ವೇದಿಕೆ ಮೇಲಿದ್ದು , ಕಾರ್ಯಕ್ರಮದ ರೂಪರೇಷೆಗಳ ಜೊತೆಗೆ ಈ ಸೀಸನ್ ನಲ್ಲಿ ಹೊರಬಂದಂತ ಪ್ರೊಮೋ ಹಾಗೂ ಈ ಸಿಂಗಿಂಗ್ ಶೋ ಎಷ್ಟು ವಿಭಿನ್ನವಾಗಿ ಹೊರಬರುವುದು ಎಂಬ ಒಂದಷ್ಟು ಮಾಹಿತಿಗಳನ್ನ ಹಂಚಿಕೊಂಡರು.

ನಿರೂಪಕಿ ಅನುಶ್ರೀ ಈ ರಿಯಾಲಿಟಿ ಸಿಂಗಿಂಗ್ ಶೋ ನಡೆದು ಬಂದ ದಾರಿಯ ಹೇಳುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಅದ್ದೂರಿ ಸೆಟ್ಟಿನಲ್ಲಿ ನಡೆದ ಈ ಪತ್ರಿಕಾಗೋಷ್ಠಿ, ಗಮನ ಸೆಳೆದಿದ್ದು, 16 ಜಿಲ್ಲೆಯಲ್ಲಿ 18000 ಸ್ಪರ್ಧಿಗಳನ್ನು ಆಡಿಶನ್ ಮಾಡಿ ಅದರಲ್ಲಿ ಉತ್ತಮ 40 ಗಾಯಕ ರನ್ನ ಆಯ್ಕೆ ಮಾಡಿ , ಮೇಘ ಆಡಿಷನ್ ಮೂಲಕ 15 ರಿಂದ 20 ಜನ ಸ್ಪರ್ಧಿಗಳನ್ನು ಸೆಲೆಕ್ಟ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಜನಸಾಮಾನ್ಯರು ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಬಂದಂತಹ ಸಪೋರ್ಟ್ , ವೀವ್ಸ್ ಗಳು ಕೂಡ ಗಣನೆಗೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಲಿದ್ದು , ಬಹಳ ಅಚ್ಚುಕಟ್ಟಾಗಿ ಪಾರದರ್ಶಕ ಮೂಲಕ ಉತ್ತಮ ಗಾಯಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಸರಿಗಮಪ ಸೀಸನ್ 21ರ ರಿಯಾಲಿಟಿ ಶೋ ಮುಂದಾಗಿದೆ.

ಈಗಾಗಲೇ ಸರಿಗಮಪ ಶೋ ಕನ್ನಡ ಚಿತ್ರರಂಗಕ್ಕೆ ಸಂಜಿತ್ ಹೆಗ್ಡೆ, ಪೃಥ್ವಿಭಟ್ ಮತ್ತು ಜಸ್ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾಭಟ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿಶಾಸ್ತ್ರೀ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ,ರಜತ್ ಹೆಗ್ಡೆ,ಹರ್ಷ, ದರ್ಶನ್, ಕಂಬದ ರಂಗಯ್ಯ, ಇಂಪನಾ ಜಯರಾಜ್, ಜ್ಞಾನಗುರುರಾಜ್, ಸುಪ್ರೀತ್, ನಿಹಾಲ್, ಅಶ್ವಿನ್ ಶರ್ಮ ರಂತಹ ಪ್ರತಿಭಾವಂತ ಗಾಯಕರನ್ನ ಕೊಡುಗೆಯಾಗಿ ನೀಡಿದೆ.

ಈ ಸೀಸನ್ನಲ್ಲಿ 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಿಸಬಹುದಾಗಿದ್ದು ಸ್ಪರ್ಧೆಯು ಮತ್ತಷ್ಟು ಇಂಟೆರೆಸ್ಟಿಂಗ್ ಆಗುವುದರಲ್ಲಿ ಯಾವುದೇ ಡೌಟಿಲ್ಲ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿರುವುದು ಈ ಆವೃತ್ತಿಯ ಮತ್ತೊಂದು ಹೈಲೈಟ್ ಆಗಿದೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಈ ಸೀಸನ್ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಈ ಶೋನಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಿರದೇ ಅವರ ಸ್ಪೂರ್ತಿದಾಯಕ ಕಥೆಗಳು ಕೂಡ ನಿಮನ್ನು ಮತ್ತಷ್ಟು ಪ್ರೇರೇಪಿಸಲಿದೆ. ಕಾರ್ಯಕ್ರಮ ದಲ್ಲಿ ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ವೀಕ್ಷಕರು ಜೀ಼ಕನ್ನಡ ‘ಸರಿಗಮಪ’ ಇನ್ಸ್ಟಾಗ್ರಾಂನ ಅಧಿಕೃತ ಪೇಜ್ನಲ್ಲಿ ಪೋಸ್ಟ್ ಮಾಡುವ ಆಡಿಷನ್ ವೀಡಿಯೋಗಳನ್ನು ಲೈಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ. ಮತ್ತು ಅತೀ ಹೆಚ್ಚು ಲೈಕ್ ಗಳಿಸಿರುವ ಸ್ಪರ್ಧಿಗಳು ಮೆಗಾ ಆಡಿಷನ್ಗೆ ಬಡ್ತಿ ಪಡೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವಾರು ಹಿಟ್ ಗಾಯಕರನ್ನು ನೀಡಿರುವ ಈ ‘ಸರಿಗಮಪ’ ಸಿಂಗಿಂಗ್ ರಿಯಾಲಿಟಿ ಶೋ ಮತ್ತಷ್ಟು ಹೊಸತನದೊಂದಿಗೆ ನಿಮ್ಮನ್ನು ಮನರಂಜಿಸಲು ಇದೇ ಡಿಸೆಂಬರ್ 14 ರಿಂದ 7:30ಕ್ಕೆ ನಿಮ್ಮ ಮುಂದೆ ಬರುತ್ತಿದೆ.

Visited 1 times, 1 visit(s) today
error: Content is protected !!