Cini NewsSandalwood

ಸಸ್ಪೆನ್ಸ , ಥಿಲ್ಲ‌ರ್ ಕಥಾನಕ “ಸಮುದ್ರ ಮಂಥನ” ಶೀರ್ಷಿಕೆ ಬಿಡುಗಡೆ.

Spread the love

2020 ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದ್ದ ಒಂದು ಶಿಕಾರಿಯ ಕಥೆ ಚಿತ್ರದ ನಿರ್ದೇಶಕರ ಮುಂದಿನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ‘ಸಮುದ್ರ ಮಂಥನ’ ಎಂಬ ಕುತೂಹಲಕಾರಿ ಟೈಟಲ್‌ನೊಂದಿಗೆ ಒಂದು ಸಸ್ಪೆನ್ಸ್, ಥಿಲ್ಲ‌ರ್ ಕಥೆಯನ್ನು ಈ ಬಾರಿ ಅವರು ಹೇಳ ಹೊರಟಿರುವುದು ವಿಶೇಷ. ಚಿತ್ರದ ನಾಯಕರಾಗಿ ಈ ಹಿಂದೆ ವಿಕಿಪೀಡಿಯ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಯಶವಂತ್ ಕುಮಾರ್ ಹಾಗೂ ನಾಯಕಿಯಾಗಿ ಮಂದಾರ ಬಟ್ಟಲಹಳ್ಳಿ ನಟಿಸುತ್ತಿದ್ದಾರೆ.

ಮಂದಾರ ಬಟ್ಟಲಹಳ್ಳಿ ಕಳೆದ ವರ್ಷ ಬಿಡುಗಡೆಯಾಗಿ ಯಶಸ್ಸು ಕಂಡ ಬ್ಲಿಂಕ್ ಚಿತ್ರದಲ್ಲಿ ನಾಯಕಿಯಾಗಿ ಮತ್ತು ಆಚಾರ್ ಆಂಡ್ ಕೋ, ಓಲ್ಡ್ ಮಾಂಕ್ ಮುಂತಾದ ಚಿತ್ರದಲ್ಲಿ, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೂವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಚಿತ್ರ ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರದಲ್ಲಿ ಚಿತ್ರತಂಡ ಸಕಲ ಸಿದ್ಧತೆಯೊಂದಿಗೆ ಚಿತ್ರೀಕರಣಕ್ಕೆ ಹೊರಡಲಿದೆ.

“ಇದೊಂದು ಸಸ್ಪೆನ್ -ಥ್ರಿಲ್ಲರ್ ಸಿನಿಮಾವಾಗಿದ್ದು ಕಥೆಯು ಕರಾವಳಿ ಪ್ರದೇಶದ ಹಿನ್ನೆಲೆಯಲ್ಲಿ ನಡೆಯಲಿದ್ದು ಭಿನ್ನ ನಿರೂಪಣೆಯಲ್ಲಿ ಮೂಡಿ ಬರಲಿದೆ. ಮನರಂಜನೆಯು ಬೇರೆಯದೆ ಮಜಲು ಪಡೆಯುತ್ತಿರುವ ಇಂದಿನ ಯುಗದಲ್ಲಿ ಪ್ರೇಕ್ಷಕರು ಖಂಡಿತ ಗಾಢವಾದ ಕಥೆಯನ್ನು ಚಿತ್ರದಿಂದ ಅಪೇಕ್ಷಿಸುತ್ತಾರೆ.

ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮೃದ್ಧವಾದ ಕಥೆ, ಚಿತ್ರಕತೆಗಾಗಿ ವರ್ಷಗಳ ಕಾಲ ಶ್ರಮಿಸಿ ಈಗ ಚಿತ್ರ ಮಾಡಲು ಹೊರಟಿದ್ದೇವೆ’ ಎನ್ನುವುದು ಚಿತ್ರದ ನಿರ್ದೇಶಕ, ಬರಹಗಾರ ಸಚಿನ್‌ ಶೆಟ್ಟಿಯ ಅಭಿಪ್ರಾಯ.

ಚಿತ್ರದ ನಾಯಕ ಯಶವಂತ್, `ಮೊದಲ ಚಿತ್ರ ವಿಕಿಪೀಡಿಯಾ ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡಿತು. ಈಗ ಈ ಚಿತ್ರ ವೃತ್ತಿಜೀವನದ ಪ್ರಮುಖ ಘಟ್ಟವಾಗಲಿದೆ ಎಂಬ ನಂಬಿಕೆ ಇದೆ. ಮನರಂಜನೆ ಜೊತೆಗೆ ನಮ್ಮ ಯೋಚನೆಗೂ ಕೆಲಸ ಕೊಡುವ ಚಿತ್ರ ಇದಾಗಲಿದೆ. ಎನ್ನುತ್ತಾರೆ. ರಫ್ ಕಟ್ ಪ್ರೊಡಕ್ಷನ್ಸ್‌ರವರು ಈ ಚಿತ್ರವನ್ನು ಎ ಸ್ಕ್ವೇರ್ ಪಿಕ್ಚರ್ಸ್ ಮತ್ತು ಆರುಷ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

Visited 6 times, 1 visit(s) today
error: Content is protected !!