Cini NewsSandalwood

ಇದೇ ಜೂನ್ 7ರಿಂದ “ಸಹಾರಾ” ಆಟ ಆರಂಭ

Spread the love

ಸಾರಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಸಹಾರಾ” ಚಿತ್ರ ಕನ್ನಡ ಚಿತ್ರರಂಗಲ್ಲೇ ಮೊದಲ ಪ್ರಯತ್ನ ಎಂದರೆ ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಚಿತ್ರಕಥೆಯು ಮಹಿಳಾ ಕ್ರಿಕೆಟ್ ಪಟು ಕುರಿತಾದದ್ದು.

ಮಂಡ್ಯದ ಹುಡುಗಿ ಒಬ್ಬಳು ಮಹಿಳಾ ಕ್ರಿಕೆಟ್ ಪಟು ಆಗುವ‌ ಕನಸನ್ನು ಕಂಡು, ಅದನ್ನು ನನಸಾಗಿಸುವ ಹಾದಿಯಲ್ಲಿ ಆಕೆ ಎದುರಿಸುವ ಅಡೆತಡೆಗಳು, ಹೇಗೆ ಅವುಗಳನ್ನು ಮೀರಿ‌ ಸಾಧನೆಯ ಮೆಟ್ಟಿಲೇರುತ್ತಾಳೆ,ಎಲ್ಲವನ್ನೂ ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಈ‌ ನಿಟ್ಟಿನಲ್ಲಿ “ಸಹಾರಾ” ಚಿತ್ರ ಸಿನಿ‌ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ, ಗೋಲ್ಡನ್ ಸ್ಟಾರ್ ಗಣೇಶ್ “ಸಹಾರಾ” ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿರುವುದು ಎಲ್ಲೆಡೆ ಸದ್ದು ಮಾಡುತ್ತಿದೆ.

“ಸಹಾರಾ” ಚಿತ್ರಕ್ಕೆ ಮಂಜೇಶ್ ಭಗವತ್ ಆಕ್ಷನ್ ಕಟ್ ಹೇಳಿದ್ದು, ಅಂಕುಶ್ ರಜತ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದು, ಆಂಟೊನಿ ರುತ್ ವಿನ್ಸೆಂಟ್ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಜಯ್ ಎಂ ಕುಮಾರ್ ಸಂಕಲನಕಾರರಾಗಿರುತ್ತಾರೆ.

Visited 1 times, 1 visit(s) today
error: Content is protected !!