ಮೇ 23 ರಂದು Zee5 App ನಲ್ಲಿ “ಸ ರಿ ಗ ಮ ಪ “ ಫಿನಾಲೆ ನೇರಪ್ರಸಾರ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಫಿನಾಲೆಯನ್ನು ಭಾರತದ್ದೇ ಆದ ಅತಿದೊಡ್ಡ ಬಹುಭಾಷಾ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜೀ5 ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಈ ಹೆಜ್ಜೆಯು ವೀಕ್ಷಕರ ಕೂತುಹಲಕ್ಕೆ ತಕ್ಕ ಉತ್ತರವನ್ನು ಆಗಲೇ ನೀಡಲಿದ್ದು ಇಂಡಿಯನ್ OTT ಪ್ಲಾಟ್ಫಾರ್ಮ್ ನಲ್ಲಿ ಇತಿಹಾಸ ಸೃಷ್ಟಿಸುವುದಂತೂ ಗ್ಯಾರಂಟಿ.
ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿರುವ ರಿಯಾಲಿಟಿ ಶೋ ‘ಸ ರಿ ಗ ಮ ಪ’. ಟಿವಿಗಿಂತ ಮೊದಲು Zee5 ನಲ್ಲಿ ‘ಸ ರಿ ಗ ಮ ಪ ಫಿನಾಲೆ’ ನೇರಪ್ರಸಾರವಾಗುವುದರ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ವಿಭಿನ್ನವಾಗಿ OTT ಪ್ಲಾಟ್ಫಾರ್ಮ್ ಗೆ ಪಾದಾರ್ಪಣೆ ಮಾಡುತ್ತಿದೆ. ಅಷ್ಟೇ ಅಲ್ಲದೇ Zee5 Subscribers ಗೆ ‘ಸ ರಿ ಗ ಮ ಪ ಫಿನಾಲೆ’ಯ ಎಲ್ಲಾ ಮಾಹಿತಿಯು ತಕ್ಷಣವೇ ಸಿಗುವ ಮತ್ತು ಫಿನಾಲೆ ನಡೆಯುವಾಗಲೇ ಕುಳಿತಲ್ಲಿಂದಲೇ ನೆಚ್ಚಿನ ರಿಯಾಲಿಟಿ ಶೋ ವನ್ನು ವೀಕ್ಷಣೆ ಮಾಡುವ ಭಾಗ್ಯ ದೊರೆಯಲಿದೆ.
Zee5 ಈ ಆವೃತ್ತಿಯ ‘ಮೋಸ್ಟ್ ಪಾಪ್ಯುಲರ್ ಸಿಂಗರ್’ ನ ಹುಡುಕಾಟದಲ್ಲಿದ್ದು ಇದರ ಆಯ್ಕೆಯಲ್ಲಿ ಚಂದಾದಾರರು ಪಾಲ್ಗೊಳ್ಳಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು ಮೇ 16 ರಿಂದ ಮೇ 22 ರ ವರೆಗೆ ನಡೆಯಲಿದ್ದು ಚಂದಾದಾರರು ತಮ್ಮ ನೆಚ್ಚಿನ ಗಾಯಕನಿಗೆ Zee5 App ಮೂಲಕ ವೋಟ್ ಮಾಡಬಹುದಾಗಿದೆ ಮತ್ತು ಎಗ್ಸೈಟಿಂಗ್ ಬಹುಮಾನಗಳ ವಿಜೇತರಾಗುವ ಎಲ್ಲಾ ಚಾನ್ಸ್ ಗಳು ಇವೆ. ಅಷ್ಟೇ ಅಲ್ಲದೇ ‘ಮೋಸ್ಟ್ ಫೇವರಿಟ್ ವೋಟರ್’ ಅನ್ನೋ ಪಟ್ಟ ಒಬ್ಬ ಲಕ್ಕಿ ವಿನ್ನರ್ ಗೆ ದೊರೆಯಲಿದೆ.
‘ಸ ರಿ ಗ ಮ ಪ ಫಿನಾಲೆ’ಯ ನಿರೂಪಣಾ ಜವಾಬ್ದಾರಿಯನ್ನು ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಹೊತ್ತಿದ್ದಾರೆ. ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಗೈಡೆನ್ಸ್ ನ ಸ್ಪರ್ಧಿಗಳಿಗೆ ಕೊಡಲಿದ್ದಾರೆ.
Zee5 ಮತ್ತು Zee Kannada ಬಿಸಿನೆಸ್ ಹೆಡ್ ಆಗಿರುವ ದೀಪಕ್ ಶ್ರೀರಾಮುಲು ಅವರು “ಪ್ರಾದೇಶಿಕ ಕಂಟೆಂಟ್, ಮ್ಯೂಸಿಕ್ ಇವೆಲ್ಲ Zee5 ನ ಬೆಳವಣಿಗೆಯ ಆಧಾರ ಸ್ಥಂಭವಾಗಿದೆ. ಕರ್ನಾಟಕದ ಸಂಗೀತ ಪರಂಪರೆಯನ್ನು ಎತ್ತಿಹಿಡಿಯುವ ಸ ರಿ ಗ ಮ ಪ ರಿಯಾಲಿಟಿ ಶೋ Zee5 ನಲ್ಲಿ ನೇರಪ್ರಸಾರ ಆಗಯುತ್ತಿದ್ದು ಪ್ರಪಂಚದ ಎಲ್ಲಾ ಮೂಲೆಯ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಮತ್ತು ಇದು ನಮಗೆ ಹೆಮ್ಮೆಯ ವಿಷಯವೇ ಸರಿ.
ಡಿಜಿಟಲ್ ನಲ್ಲಿ ಮೊದಲು ಎಂಬ ಕಾನ್ಸೆಪ್ಟ್ ಒಂದಿಗೆ Zee5 ನಲ್ಲಿ ರೀಜನಲ್ ಎಂಟರ್ಟೈನ್ಮೆಂಟ್ ನ ಪ್ರಸಾರ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಈಗ ನಾವು ಮತ್ತಷ್ಟು ಹತ್ತಿರವಾಗಲಿದ್ದೇವೆ. ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಇದೇ ಮೊದಲು ಈ ರೀತಿಯ ಹೆಜ್ಜೆಯನ್ನು ತೆಗೆದುಕೊಂಡಿರುವುದು ಮತ್ತು ಮುಂದಿನ ದಿನಗಳಲ್ಲಿ ನಮ್ಮಿಂದ ವೀಕ್ಷಕರು ಇನ್ನಷ್ಟು ಎಗ್ಸೈಟಿಂಗ್ ಪ್ರಯೋಗಗಳನ್ನು ನಿರೀಕ್ಷಿಸಬಹುದಾಗಿದೆ” ಎಂದಿದ್ದಾರೆ.
ಸೆಲೆಬ್ರೇಶನ್ ನ ಮತ್ತಷ್ಟು ಉತ್ಸಾಹದಾಯಕವಾಗಿ ಮಾಡಲು ಕೇವಲ 99 ರುಪಾಯಿಯ ಸ್ಪೆಷಲ್ Subscription ಪಡೆದು ಬಳಕೆದಾರರು ಲೈವ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿ ಉತ್ತಮ ಬಹುಮಾನಗಳನ್ನು ಪಡೆಯುವ ಚಾನ್ಸ್ ಇರುತ್ತದೆ. ಪ್ರತಿಭೆ ಸಂಸ್ಕೃತಿ ಮತ್ತು ಸುಮಧುರ ಗಾಯನದ ಮೂಲಕ ಎಲ್ಲಾ ವರ್ಗದ ಜನರಿಗೆ ಹತ್ತಿರವಾಗುವ ‘ಸ ರಿ ಗ ಮ ಪ ಫಿನಾಲೆ’ ನೇರಪ್ರಸಾರ Zee5 App ನಲ್ಲಿ ಇದೇ ಮೇ 23 ರಂದು ನೋಡಲು ಮರೆಯದಿರಿ.