Cini NewsSandalwoodTV Serial

ಡ್ಯಾನ್ಸ್ ಮಾಸ್ಟರ್ ಹಾಗೂ ಫೈಟ್ ಮಾಸ್ಟರ್ ಕಾಂಬಿನೇಷನ್ ನಲ್ಲಿ “ಒಂದು ಸುಂದರ ದೆವ್ವದ ಕಥೆ”.

Spread the love

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಅಪರೂಪದ ಕಾಂಬಿನೇಷನ್ ಚಿತ್ರ ಮಾಡಲು ಮುಂದಾಗಿದೆ. ಹೌದು ಚಿತ್ರರಂಗದಲ್ಲಿ ಸುಮಾರು 160ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶಕರಾದ ಎಂ. ಆರ್. ಕಪಿಲ್ ನಿರ್ದೇಶನದ 10ನೇ ಚಿತ್ರದಲ್ಲಿ ಸುಮಾರು 1500ಕ್ಕೂ ಹೆಚ್ಚು ಚಿತ್ರಗಳಲ್ಲಿ ಫೈಟ್ ಮಾಸ್ಟರ್ ಆಗಿದ್ದಂತ ಕೌರವ ವೆಂಕಟೇಶ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ವಿಶೇಷ ಎಂದರೆ ಕೌರವ ವೆಂಕಟೇಶ್ ಹುಟ್ಟುಹಬ್ಬದಂದು ಈ ಪೋಸ್ಟರ್ ಬಿಡುಗಡೆಗೊಳ್ಳುತ್ತಿದ್ದು , ಈ ಚಿತ್ರದ ಪೋಸ್ಟರ್ ಬಹಳಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು ,ಇದೊಂದು ರೀತಿ ಹಳೆ ಜೋಡಿ ಹೊಸ ಮೋಡಿ ಎನ್ನುವಂತೆ ಡ್ಯಾನ್ಸ್ ಮಾಸ್ಟರ್ ಹಾಗೂ ಫೈಟ್ ಮಾಸ್ಟರ್ ಕಾಂಬಿನೇಷನ್ನಲ್ಲಿ “ಒಂದು ಸುಂದರ ದೆವ್ವದ ಕಥೆ” ಚಿತ್ರ ಆರಂಭಗೊಳ್ಳುತ್ತಿದೆ.

ಈಗಾಗಲೇ ಭಾನು ಪೃಥ್ವಿ 100ಮಾರ್ಕ್ಸ್ ಫಿಲಂಸ್ ಶೋಭಾವತಿ ಕಪಿಲ್ ಲಾಂಛನದಲ್ಲಿ ಹಲವಾರು ಹೊಸ ಬಗೆಯ ವಿಭಿನ್ನ ಪ್ರಯತ್ನದ ಚಿತ್ರಗಳು ಬಂದಿದ್ದು , ಹತ್ತನೇ ಚಿತ್ರವಾಗಿ *ಒಂದು ಸುಂದರ ದೆವ್ವದ ಕಥೆ* ಸಿದ್ಧವಾಗುತ್ತದೆ. ಈ ಒಂದು ಚಿತ್ರವನ್ನು ಆರ್. ಲಕ್ಷ್ಮಿ ನಾರಾಯಣ ಗೌಡ ಅರ್ಪಿಸುವ ಮತ್ತು ಪಿ. ಉಮೇಶ್ ಅವರ ಶುಭ ಹಾರೈಕೆಯೊಂದಿಗೆ ಆರಂಭಗೊಳ್ಳುತ್ತಿದ್ದು, ವಿಭಿನ್ನ ಕಥಾವಸ್ತು ಮೂಲಕ ಪ್ರಥಮ ಬಾರಿಗೆ ನಾಯಕ ನಟರಾಗಿ ಆಕ್ಷನ್ ಐಕಾನ್ ಕೌರವ ವೆಂಕಟೇಶ್ ಅಭಿನಯಿಸುತ್ತಿದ್ದಾರೆ.

ಕಪಿಲ್ ನಿರ್ದೇಶನದ ಈ ಚಿತ್ರಕ್ಕೆ ಸಾಯಿ ಕೃಷ್ಣ ಹೆಬ್ಬಾಳ ಚಿತ್ರಕಥೆ , ಸಂಭಾಷಣೆ , ಹರ್ಷ ಕೊಗೋಡ್ ಸಂಗೀತ , ಶಂಕರ್ ಆರಾಧ್ಯ ಛಾಯಾಗ್ರಹಣ , ವಿನಯ್. ಜಿ ಆಲೂರು ಸಂಕಲನ , ಶರಣ್ ಗದ್ವಾಲ್ ತಾಂತ್ರಿಕ ನಿರ್ದೇಶನ , ಬಿ.ಜಿ. ರಮೇಶ್ ನಿರ್ಮಾಣ ನಿರ್ವಾಹಕರು, ಅನಂತ್ ಕುಮಾರ್ ಸ್ಥಿರ ಚಿತ್ರ , ಎಂ.ಜಿ.ಕಲ್ಲೇಶ್ ಪಿ.ಆರ್. ಓ. ಆಗಿದ್ದಾರೆ. ಇನ್ನು ತಾರಾಗಣದಲ್ಲಿ ಕೌರವ ವೆಂಕಟೇಶ್, ಆರ್. ಲಕ್ಷ್ಮೀ ನಾರಾಯಣಗೌಡ, ಕೆ.ಟಿ. ಮುನಿರಾಜ್, ಗುರು ಪ್ರಸಾದ್, ಸುರೇಶ್ ಮುರಳಿ, ವಿಕ್ಟರಿ ದಯಾಲನ್, ವಿಕ್ಟರಿ ವಾಸು, ನಾರಾಯಣ ಸ್ವಾಮಿ , ಶಂಕರ್ ಭಟ್, ಪ್ರೇಮ್ ಪಾವಗಡ ಮತ್ತು ರಂಗ ಕಲಾವಿದರು ಅಭಿನಯಿಸುತ್ತಿದ್ದಾರೆ. ಚಿತ್ರತಂಡ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.

Visited 3 times, 1 visit(s) today
error: Content is protected !!