*ಈ ವಾರ ಯುವ ಪ್ರತಿಭೆಗಳ “ನ್ಯೂಟನ್ ಥರ್ಡ್ ಲಾ” ಸಿನಿಮಾ ಬಿಡುಗಡೆ.*
ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ *ನ್ಯೂಟನ್ ಥರ್ಡ್ ಲಾ*’ ಸಿನಿಮಾಕ್ಕೆ ಸನ್ ಕ್ರಾಫ್ಟ್ ಸಂಸ್ಥೆಯಡಿಯಲ್ಲಿ *ಸುನ್ನ್ ಕ್ರಾಫ್ಟ್ ನಿರ್ಮಾಣ* ಬಂಡವಾಳ ಹೂಡಿದ್ದಾರೆ. *ಸುಧಾಕರ ರೆಡ್ಡಿ ನಿರ್ದೇಶನ* ಮಾಡಿದ್ದಾರೆ. ನಾಲ್ಕು ಹುಡುಗರು, ಇಬ್ಬರು ಹುಡುಗಿಯರು ಒಟ್ಟು ಆರು ಜನ ಪ್ರೀತಿಯನ್ನು ಹೇಳಿಕೊಳ್ಳಲು ಲಾಂಗ್ ವೀಕೆಂಡ್ ಹೋಗುತ್ತಾರೆ. ಅಲ್ಲಿ ಪಾರ್ಟಿ ಮಾಡಿದಾಗ ಗೆಳೆಯರು ಕುಡಿದು ಗಲಾಟೆ ಮಾಡಿಕೊಂಡು ಪಾರ್ಟಿ ಹಾಳು ಮಾಡುತ್ತಾರೆ. ಮಾರನೇ ದಿನ ಅಹಿತಕರ ಘಟನೆ ನಡೆದಿರುತ್ತದೆ. ಅದು ಏನು? ಯಾಕೆ ಎಂಬುದನ್ನು ಸೆಸ್ಪೆನ್ಸ್ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ.
ತಾರಾಗಣದಲ್ಲಿ ವಿಶೂ, ವಿದ್ಯಾಶ್ರೀಗೌಡ, ವಿಜಯ್‌ಚೆಂಡೂರ್, ಅಂಬರೀಷ ಸಾರಗಿ, ಶ್ರೀಧರ್‌ಭಟ್, ಅಥರ್ವ, ರೋಹಿತ್, ಸಾವಂತ್ ಕಲ್ಬುರ್ಗಿ, ಮೀನಾಕ್ಷಿ ಅತ್ರಿ, ಶ್ವೇತಾ, ಗಂಧರ್ವ, ಮಹೇಶ್‌ಬಾಬು ಮುಂತಾದವರು ನಟಿಸಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಗಂಧರ್ವ ರಾಯರವುತ, ಛಾಯಗ್ರಹಣ ಪ್ರವೀಣ್‌ಕುಮಾರ್, ಸಂಕಲನ ಶಿವರಾಜ್‌ಮೇಹು ನೃತ್ಯ ಗೀತಾಸೈ ಅವರದಾಗಿದೆ.
ಬೆಂಗಳೂರು, ಕನಕಪುರ, ಮಡಕೇರಿ, ಹೊನ್ನಾವರ, ಕುಮುಟ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣ ಪಡೆದುಕೊಂಡಿರುವ ಸಿನಿಮಾವು ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.