Cini NewsSandalwood

ದೀಪಾವಳಿಗೆ Soul of “ನಾನಿನ್ನ ಬಿಡಲಾರೆ” ಚಿತ್ರದ ರಾಯರ ಶ್ಲೋಕ ಬಿಡುಗಡೆ.

Spread the love

ಗುರುವಾರವೇ ರಿಲೀಸ್ ಆಯ್ತು ನಾ ನಿನ್ನ ಬಿಡಲಾರೆ ಚಿತ್ರದ ಮೈ ರೊಮಾಂಚನಗೊಳಿಸೋ ರಾಯರ ಶ್ಲೋಕ.
ಅಂದು
ಬಿಡೆನು ನಿನ್ನ‌ಪಾದ…
ಇಂದು
ಗುರು ಸಾರ್ವಭೌಮಂ
ಗುರು ರಾಘವೇಂದ್ರಂ ಶ್ಲೋಕ.

ದೀಪಾವಳಿ ಸಂಭ್ರಮದ ಈ ಹೊತ್ತಲ್ಲಿ ಈ ಗುರುವಾರ ನಾ ನಿನ್ನ ಬಿಡಲಾರೆ ಚಿತ್ರತಂಡದಿಂದ Soul of ನಾನಿನ್ನ ಬಿಡಲಾರೆ ಅನ್ನೋ ಒಂದು ಅದ್ಭುತ ಡಿವೈನ್ ಮ್ಯೂಸಿಕಲ್ ವಿಡಿಯೋ A2 ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಮೊನ್ನೆಯಷ್ಟೇ ನಾವು ನವೆಂಬರ್ 29ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದ್ದೀವಿ ಅಂತ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಚಿತ್ರತಂಡ, ದೀಪಾವಳಿಗೆ ರಾಯರ ಶ್ಲೋಕವನ್ನ ಬಿಡುಗಡೆ ಮಾಡಿದೆ. ಈ ವಿಡಿಯೋದೊಳಗಿನ ಕಂಟೆಂಟ್ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಸ್ತಿದ್ದು, ಸಿನಿಮಾ ತುಂಬಾ ಪಾಸಿಟೀವ್ ಆಗಿ ಕಾಣ್ತಿದೆ.

ಅಂದು ನಾನಿನ್ನ ಬಿಡಲಾರೆ ಚಿತ್ರದಲ್ಲಿ ಬಿಡಿನು ನಿನ್ನ ಪಾದ ಹಾಡು ಆ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದೀಗ ಈ ಚಿತ್ರದಲ್ಲಿ ಗುರು ಸಾರ್ವಭೌಮಂ..ಗುರು ರಾಘವೇಂದ್ರಂ ಆ ಭರವಸೆಯನ್ನ ಮೂಡಿಸ್ತಿದೆ. ಅಂದ್ಹಾಗೆ, ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಭಾರತಿ ಬಾಳಿಯವರು ಈ ಚಿತ್ರವನ್ನ ನಿರ್ಮಿಸಿದ್ದಾರೆ. ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿದ್ದಾರೆ.. ನಾ ನಿನ್ನ ಬಿಡಲಾರೆ ಚಿತ್ರವನ್ನ ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್. ತ್ಯಾಗರಾಜು ಸಂಗೀತವಿರೋ ಈ ಚಿತ್ರಕ್ಕೆ ದೀಪಕ್ ಸಿ.ಎಸ್ ಸಂಕಲನವಿದೆ.

ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ ನಾಯಕನಾಗಿ ಅಭಿನಯಿದ್ದಾರೆ.
ಸೀರುಂಡೆರಘು,ಕೆ.ಸ್.ಶ್ರೀಧರ್,ಮಹಂತೇಶ್,ಶ್ರೀನಿವಾಸ್ ಪ್ರಭು,ಹರಿಣಿ,ಲಕ್ಷ್ಮೀ ಸಿದ್ದಯ್ಯ,ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ.
ಲೈಲಾಕ್ ಎಂಟರ್ಟೈನ್ಮೆಂಟ್ ನ ಹೇಮಂತ್ ಈ ಚಿತ್ರವನ್ನ ರಾಜ್ಯದಾದ್ಯಂತ ವಿತರಿಸಿದ್ದು, ನವೆಂಬರ್ 29ರಂದು‌ ನಾ ನಿನ್ನ ಬಿಡಲಾರೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.

Visited 2 times, 1 visit(s) today
error: Content is protected !!