Cini NewsKollywoodSandalwoodTollywood

MMB legacy ಯ ನವರಸನ್ ಹಾಗೂ ಕೃಷ್ಣಪ್ರಿಯ ದಾಂಪತ್ಯ ಜೀವನಕ್ಕೆ ಪ್ರವೇಶ.

Spread the love

ಸ್ಯಾಂಡಲ್ ವುಡ್ ನಲ್ಲಿ ಬಹಳ ವರ್ಷಗಳಿಂದ ವಿತರಕರಾಗಿ, ನಿರ್ಮಾಪಕರಾಗಿ , ನಿರ್ದೇಶಕರಾಗಿ , ನಟರಾಗಿ ಚಿತ್ರೋದ್ಯಮದಲ್ಲಿ ಹಲವು ವಿಭಾಗಗಳಲ್ಲಿ ಸೇವೆ ಮಾಡುತ್ತಾ ಕನ್ನಡ , ತಮಿಳು , ತೆಲುಗು ಚಿತ್ರರಂಗದಲ್ಲೂ ತಮ್ಮನ್ನ ತೊಡಗಿಸಿಕೊಂಡು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಂತಹ ನವರಸನ್  ಈಗಲ್ ಮೀಡಿಯಾ ಸಂಸ್ಥೆ ಮೂಲಕ ಸಾಕಷ್ಟು ಚಿತ್ರರಂಗದ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಲು MMB legacy ಆರಂಭಿಸಿ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಇದರ ನಡುವೆ ಆಶ್ಚರ್ಯ ಬೆಳವಣಿಗೆಯಂತೆ  ನವರಸನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಏಪ್ರಿಲ್ 28ರಂದು ನವರಸನ್ ಹಾಗೂ ಕೃಷ್ಣಪ್ರಿಯ  ಅವರ ವಿವಾಹ ಮಹೋತ್ಸವ ಇತ್ತೀಚಿಗೆ ಜೆ.ಪಿ.ನಗರದ ವರಪ್ರದ ಶ್ರೀವೆಂಕಟೇಶ್ವರಸ್ವಾಮಿ‌ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ. ಇದು ಕೆಲವೊಂದಷ್ಟು ಸ್ನೇಹಿತರು ಹಿತೈಷಿಗೆ ಗೊತ್ತಿದ್ದರೂ ಮತ್ತಷ್ಟು ಆತ್ಮೀಯರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಏನೇ ಇರಲಿ ಇವರ ದಾಂಪತ್ಯ ಜೀವನ ಸುಖಕರವಾಗಿ ಸಾಗುವಂತಾಗಲಿ.

Visited 1 times, 1 visit(s) today
error: Content is protected !!