Cini NewsSandalwoodTV Serial

“Middle Class ರಾಮಾಯಣ” ಟ್ರೇಲರ್ ರಿಲೀಸ್…

ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಕಾರಣಕ್ಕೆ ರಾಮಾಯಣ ಇದ್ದೇ ಇರುತ್ತದೆ. ಅದರಲ್ಲೂ ಮಿಡ್ಲ್ ಕ್ಲಾಸ್ ಲೈಫ್ ನಲ್ಲಂತೂ ಹೇಳೋ ಹಾಗೆ ಇಲ್ಲ. ಅಂತದ್ದೇ ಒಬ್ಬ ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವಂತಹ ಕಥೆಯನ್ನ ಮನೋರಂಜನೆಯ ಕಥಾನಕ ಮೂಲಕ ಪ್ರೇಕ್ಷಕರ ಮುಂದೆ ಬರಲು ಸೆಪ್ಟೆಂಬರ್ 12ರಂದು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾಗೋಗೋದು  ನೋವು, ಟೆನ್ಶನ್ ಎಲ್ಲಾ ಮರೆತು ಬರಬೇಕು ಅಂದ್ರೆ ಅಲ್ಲಿ ಬರಪೂರವಾದಂತ ನಗು ಇರಬೇಕು ಅನ್ನೋದು ಸರ್ವೇಸಾಮಾನ್ಯ. ಅಂಥ ನಗು ಇರುವ ಸಿನಿಮಾ  ಮಿಡಲ್ ಕ್ಲಾಸ್ ರಾಮಾಯಣ. ಈಗ ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.


ಟ್ರೇಲರ್ ನಲ್ಲಂತೂ ಮಿಡಲ್ ಕ್ಲಾಸ್ ಮಂದಿಯ ಮದುವೆಯ ಅದೆಷ್ಟೋ ಸಂಕಷ್ಟಗಳನ್ನ ತೋರಿಸಿದ್ದಾರೆ. ಅಷ್ಟೇ ನಗು ಇದೆ. ಮೋಕ್ಷಿತಾ ಪೈ ಅಂತು ತಮ್ಮ ರಿಯಲ್ ಕಲರ್ ಮರೆಮಾಚಿ, ಸೌಂದರ್ಯ ಅನ್ನೋ ಹೆಸರಿಗೆ ತದ್ವಿರುದ್ಧವಾದಂತ ರೂಪ ತಾಳಿದ್ದಾರೆ. ಟ್ರೇಲರ್ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಳ್ಳುತ್ತಿದೆ. ರೆಬಲ್ ಹುಡುಗರು ನಿರ್ದೇಶನ ಮಾಡಿದ್ದ ನಿರ್ದೇಶಕ ಧನುಶ್ ಗೌಡ ಮಾತನಾಡಿ, ಮಿಡಲ್ ಕ್ಲಾಸ್ ರಾಮಾಯಣ ಒಬ್ಬ ಹುಡುಗನ ಕಥೆಯೇ ಮಿಡಲ್ ಕ್ಲಾಸ್ ರಾಮಾಯಣ. ಎಲ್ಲರ ಜೀವನದಲ್ಲೂ ಒಂದೊಂದು ಕಥೆ ಇರುತ್ತೆ ಎಂದಿದ್ದಾರೆ. ಆದ್ರೆ ಈ ಸಿನಿಮಾದಲ್ಲಿ ದೊಡ್ಡ ಆರ್ಟಿಸ್ಟ್ ಇದ್ದಾರೆ. ಆದರೆ ಕರೆದರು ಬಂದಿಲ್ಲ. ನಮ್ಮದು ದೊಡ್ಡ ಬ್ಯಾನರ್ ಅಲ್ವಾ ಎಂಬ ಅಭಿಪ್ರಾಯವೋ ಏನೋ ಎಂಬ ಬೇಸರ ನಿರ್ದೇಶಕರಲ್ಲಿ ಕಾಣಿಸಿತ್ತು. ಇನ್ನು ಈ ಸಿನಿಮಾ ಕೋವಿಡ್ ಗೂ ಮುಂಚೆನೆ ಶುರು ಮಾಡಲಾಗಿತ್ತು. ಆದರೆ ಸ್ವಲ್ಪ ತಡವಾದ ಕಾರಣ ಹೀರೋ – ಹೀರೋಯಿನ್ ಪಾರ್ಟ್ ಅನ್ನು ಸ್ವಲ್ಪ ಮಟ್ಟಿಗೆ ರಿಶೂಟ್ ಮಾಡಲಾಗಿದೆ.

ನಿರ್ಮಾಪಕ ಜಯರಾಮ್ ಗಂಗಪ್ಪನಹಳ್ಳಿ ಲಾರಿ ಇಟ್ಟುಕೊಂಡಿದ್ದಾರೆ. ಕೃಷಿ ಬಗ್ಗೆ ಸಾಕಷ್ಟು ಆಸಕ್ತಿಯನ್ನ ಹೊಂದಿದ್ದಾರೆ. ಈ ವೇಳೆ ಮಾತನಾಡಿದ ಜಯರಾಮ್, ಫ್ರೆಂಡ್ ಬಂದು ಕಥೆ ಹೇಳಿದ್ರು, ಕಥೆ ಇಷ್ಟ ಆಯ್ತು ಹೀಗಾಗಿ ಸಿನಿಮಾ‌ ಮಾಡಿದೆವು‌. ನಮಗೆ ಸಿನಿಮಾ ಇಷ್ಟ ಆಗೋದು ಮುಖ್ಯ ಅಲ್ಲ. ಜನ ಇಷ್ಟ ಪಡುವುದು ಬಹಳ ಮುಖ್ಯ ಎಂದಿದ್ದಾರೆ. ನಟಿ ಯುಕ್ತ ಮಾತನಾಡುತ್ತಾ, ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ ಖುಷಿ ಇದೆ. ಕೀರ್ತಿ ಎಂಬ ಪಾತ್ರ ಮಾಡಿದ್ದೇನೆ. ಕನ್ನಡದಲ್ಲಿಯೇ ಇದೇ ಮೂರನೇ ಸಿನಿಮಾ ಆಗಿದೆ ಎಂದಿದ್ದಾರೆ.

ಮೋಕ್ಷಿತಾ ಪೈ ಮಾತನಾಡುತ್ತಾ, ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಫೀಲ್ ಆಗ್ತಾ ಇದೆ. ನಾವೆಲ್ಲರೂ ನಿಮ್ಗೆ ಕಾಣಿಸ್ತೀವಿ. ಆದರೆ ತೆರೆ ಹಿಂದೆ ಒಂದಷ್ಟು ಜನರು ಹಾಕಿದ ಶ್ರಮದಿಂದ ಈ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಸೌಂದರ್ಯ ಎಂಬ ಪಾತ್ರ ಮಾಡಿದ್ದೀನಿ. ಆದ್ರೆ ಸಿನಿಮಾದಲ್ಲಿ ನಾನೇನು ಸಖತ್ತಾಗಿ ಕಾಣಿಸ್ತಿಲ್ಲ. ನಿರ್ದೇಶಕರು ಎಣ್ಣೆಗೆಂಪಾಗಿ ಕಾಣಿಸ್ತೀರಾ ಅಂದಿದ್ರು. ಲುಕ್ ಟೆಸ್ಟ್ ಕೊಟ್ಟಾಗ ನಾನೇ ಶಾಕ್ ಆಗಿದ್ದೆ. ಆದ್ರೆ ಹೊಸಪ್ರಯತ್ನ ಇರಲಿ ಅಂತ ಒಪ್ಪಿಕೊಂಡೆ‌. ಸಿಂಪಲ್ ಅಂಡ್ ಸ್ವೀಟ್ ಆಗಿ ಕಥೆಯನ್ನ ಹೇಳ್ತಾ ಇದ್ದೀವಿ ಎಂದಿದ್ದಾರೆ.


ನಟ ವಿನು ಗೌಡ ತಮ್ಮ ಸಿನಿಮಾದಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದರೋ ಅದೇ ರೀತಿ ಬಂದಿದ್ದರು. ಈ ವೇಳೆ ಮಾತನಾಡುತ್ತಾ, ಈ ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ನಾನು ಕೂಡ ಚಿತ್ರರಂಗದಲ್ಲಿ  ಬಹಳ ಶ್ರಮಪಟ್ಟು ಈಗ ಮುಂದೆ ಬಂದಿದ್ದೇನೆ. ನನ್ನ ಗೆಳೆಯ ನನ್ನ ಜೊತೆ ನಿಂತು ಸಿನಿಮಾ ಮಾಡಿದ್ದಾರೆ. ಹೊಸ ಪ್ರತಿಭೆಗಳನ್ನು ಬೆಳೆಸಿ , ಹರಸಿ ಎಂದು ಎಂದು ಕೇಳಿಕೊಂಡರು. ಇನ್ನು ಹಾಸ್ಯ ನಟ ವಿಜಯ್ ಚಂಡೂರು ಒಬ್ಬ ರಿಯಲ್ ಎಸ್ಟೇಟ್ ಬ್ರೋಕರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಹಿರಿಯ ನಟ , ನಿರ್ದೇಶಕ , ಎಸ್ .ನಾರಾಯಣ್ ಸೇರಿದಂತೆ ವೀಣಾ ಸುಂದರ್ , ಬಾಲ ರಾಜವಾಡಿ , ಶೋಭರಾಜ್ , ಜಗಪ್ಪ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರ ಸೆಪ್ಟೆಂಬರ್ 12ರಂದು ರಾಜ್ಯದ್ಯಂತ ಬಿಡುಗಡೆ ಆಗುತ್ತಿದೆ.

 

 

error: Content is protected !!